ಪಿಎಂ ಕಿಸಾನ್ ಅನರ್ಹರ ಪಟ್ಟಿ ಬಿಡುಗಡೆ: ರೈತರಿಗೆ ಶಾಕ್
ಪಿಎಂ ಕಿಸಾನ್ ಯೋಜನೆಯ ಇನ್ನೂ ಮುಂದೆ ಈ ರೈತರಿಗೆ ಬರುವುದಿಲ್ಲ! ನಿಮ್ಮ ಹೆಸರು ಚೆಕ್ ಮಾಡಿ
PM-Kisan Yojana ಅಡಿಯಲ್ಲಿ ನಿಮ್ಮ ಅರ್ಹತೆಯ ಸ್ಥಿತಿಯನ್ನು ಪರಿಶೀಲಿಸಲು, ನೀವು ಕೇಂದ್ರ ಸರ್ಕಾರದ ಅಧಿಕೃತ ವೆಬ್ https://pmkisan.gov.in/VillageDashboard_Portal.aspx ಗೆ ಭೇಟಿ ನೀಡಿ. ಒಮ್ಮೆ ನೀವು ವೆಬ್ಸೈಟ್ನಲ್ಲಿರುವಾಗ, “ಕರ್ನಾಟಕ” ರಾಜ್ಯವನ್ನು (State) ಆಯ್ಕೆಮಾಡಿ ಮತ್ತು ನಂತರ ಡ್ರಾಪ್ಡೌನ್ ಆಯ್ಕೆಗಳಿಂದ ನಿಮ್ಮ ಜಿಲ್ಲೆ (District), ಉಪ-ಜಿಲ್ಲೆ (Sub-District) ಮತ್ತು ಗ್ರಾಮವನ್ನು (Village) ಆಯ್ಕೆ ಮಾಡಿ. ನಿಮ್ಮ ಗ್ರಾಮವನ್ನು ಆಯ್ಕೆ ಮಾಡಿದ ನಂತರ, ಮುಂದುವರಿಯಲು “ಸಲ್ಲಿಸು” (Submit) ಬಟನ್ ಕ್ಲಿಕ್ ಮಾಡಿ.
ಮೊದಲ ಹಂತದಲ್ಲಿ, ಪಿಎಂ-ಕಿಸಾನ್ ವೆಬ್ ಪೋರ್ಟಲ್ನಲ್ಲಿ ಪ್ರದರ್ಶಿಸಲಾದ ಅಂಕಿಅಂಶಗಳು ನಿಮ್ಮ ಗ್ರಾಮದಲ್ಲಿ ಒಟ್ಟು ನೋಂದಾಯಿತ ರೈತರ ಸಂಖ್ಯೆ, ಜೊತೆಗೆ ಯೋಜನೆಯಡಿಯಲ್ಲಿ ಆರ್ಥಿಕ ಸಹಾಯಕ್ಕಾಗಿ ಅರ್ಹರಾಗಿರುವ ರೈತರ ಸಂಖ್ಯೆ ಮತ್ತು ಅರ್ಹರಲ್ಲದವರ ಸಂಖ್ಯೆಯನ್ನು ತೋರಿಸುತ್ತದೆ.
ಅರ್ಹರ ಪಟ್ಟಿ: ತದನಂತರ ಫಲಾನುಭವಿಗಳ ಪಾವತಿ ಸ್ಥಿತಿಯನ್ನು ಪರಿಶೀಲಿಸಲು, ವೆಬ್ ಪೋರ್ಟಲ್ನಲ್ಲಿರುವ “ಪಾವತಿ ಸ್ಥಿತಿ” (Payment Status) ಮೇಲೆ ಕ್ಲಿಕ್ ಮಾಡಿ. ಯೋಜನೆಯಡಿಯಲ್ಲಿ ಪಾವತಿಗೆ ಅರ್ಹರಾಗಿರುವ ರೈತರ ಹೆಸರುಗಳು, ಅವರ ತಂದೆಯ ಹೆಸರು ಮತ್ತು 2022-23 ನೇ ಸಾಲಿನಲ್ಲಿ ಮಾಡಿದ ಪಾವತಿಯ ಮೊತ್ತವನ್ನು ಪಟ್ಟಿಯು ಪ್ರದರ್ಶಿಸುತ್ತದೆ.
ಅನರ್ಹರ ಪಟ್ಟಿ: ಪಿಎಂ-ಕಿಸಾನ್ ವೆಬ್ ಪೋರ್ಟಲ್ನಲ್ಲಿ ಪ್ರದರ್ಶಿಸಲಾದ “Aadhar Authentication Status” ಆಯ್ಕೆ ಮೇಲೆ ಕ್ಲಿಕ್ ಮಾಡಿದಾಗ “Total Ineligible” ಕಾಲಂ ನಲ್ಲಿ ಈ ಯೋಜನೆಯಡಿ ಅರ್ಥಿಕ ನೆರವು ಪಡೆಯಲು ಅನರ್ಹವಾಗಿರುವ ರೈತರ ಪಟ್ಟಿ ಗೋಚರಿಸುತ್ತದೆ.
ಇ – ಕೆವೈಸಿ ರೈತರ ಪಟ್ಟಿ: PM-Kisan ವೆಬ್ ಪೋರ್ಟಲ್ನಲ್ಲಿ “ಆಧಾರ್ ದೃಢೀಕರಣ ಸ್ಥಿತಿ” (Aadhar Authentication Status) ಆಯ್ಕೆಯ ಅಡಿಯಲ್ಲಿ, “ದೃಢೀಕರಣ ವಿಫಲವಾಗಿದೆ” (Authentication Failed) ಎಂಬ ವಿಭಾಗವನ್ನು ನೀವು ಕಾಣಬಹುದು. ಈ ವಿಭಾಗವು ತಮ್ಮ ಆಧಾರ್ ಕಾರ್ಡ್ ವಿವರಗಳಲ್ಲಿನ ವ್ಯತ್ಯಾಸಗಳಿಂದಾಗಿ E-KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಾಧ್ಯವಾಗದ ರೈತರ ಹೆಸರನ್ನು ಪ್ರದರ್ಶಿಸುತ್ತದೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರು ಕಂಡುಬಂದಲ್ಲಿ, ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ನಿಮ್ಮ ಆಧಾರ್ ಕಾರ್ಡ್ನೊಂದಿಗೆ ಸಮಸ್ಯೆಯನ್ನು ಸರಿಪಡಿಸಿಕೊಳ್ಳಬೇಕು.
ಮತ್ತೊಂದೆಡೆ, “ಯಶಸ್ವಿಯಾಗಿ ದೃಢೀಕರಿಸಿದೆ” (Successfully Authenticated) ಕಾಲಂನಲ್ಲಿ ನಿಮ್ಮ ಹೆಸರು ಕಾಣಿಸಿಕೊಂಡರೆ, ನಿಮ್ಮ ದಾಖಲಾತಿ ಸರಿಯಾಗಿದೆ ಮತ್ತು ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಹಣಕಾಸಿನ ಸಹಾಯಕ್ಕಾಗಿ ಅರ್ಹ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಸೇರಿಸಲಾಗಿದೆ ಎಂದರ್ಥ.
WhatsApನಲ್ಲೇ ನಿಮ್ಮ ಆಧಾರ್, ಪ್ಯಾನ್ ಕಾರ್ಡ್ ಡೌನ್ ಲೋಡ್ ಮಾಡಿ
ರೇಷನ್ ಕಾರ್ಡ್ ಗೆ ಹೆಸರು ಸೇರಿಸುವುದು/ತಿದ್ದುಪಡಿ ಮಾಡುವುದು ಹೇಗೆ?
ಮಿಶ್ರ ಬೆಳೆ ಬೆಳೆದು ಯಶಸ್ಸು ಕಂಡ ಪ್ರಗತಿಪರ ರೈತ
ಕೆವೈಸಿ ನವೀಕರಿಸುವ ವಿಧಾನ
PM ಕಿಸಾನ್ನ ಅಧಿಕೃತ ವೆಬ್ಸೈಟ್ಗೆ ಹೋಗಿ (https://pmkisan.gov.in) ಮತ್ತು “E-KYC” ಮೇಲೆ ಕ್ಲಿಕ್ ಮಾಡಿ.
ನಿಮ್ಮ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ನಮೂದಿಸಿ, ತದನಂತರ “Search” ಮೇಲೆ ಕ್ಲಿಕ್ ಮಾಡಿ.
ನಿಮ್ಮ ಆಧಾರ್ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
ನಂತರ “Get OTP” ಕ್ಲಿಕ್ ಮಾಡಿ ಮತ್ತು ನಿಮ್ಮ ಮೊಬೈಲ್ನಲ್ಲಿ ಸ್ವೀಕರಿಸಿದ OTP (ಒನ್ ಟೈಮ್ ಪಾಸ್ವರ್ಡ್) ನಮೂದಿಸಿ.
ಒಮ್ಮೆ ನೀವು OTP ಅನ್ನು ನಮೂದಿಸಿದರೆ, ಈ ಯೋಜನೆಗಾಗಿ ನಿಮ್ಮ KYC ಯನ್ನು ನವೀಕರಿಸಲಾಗುತ್ತದೆ.