ಜೂನ್ ತಿಂಗಳಲ್ಲಿ ಉಚಿತ 10 ಕೆಜಿ ಅಕ್ಕಿ ವಿತರಣೆ ಇಲ್ಲ!

ಸರ್ಕಾರವು 10 ಕೆಜಿ ಅಕ್ಕಿ ವಿತರಿಸಲು ಹಿಂದೇಟು ಏಕೆ? ಯಾವ ಕಾರಣಕ್ಕೆ ಈ ತಿಂಗಳಿಂದ 10 ಕೆಜಿ ಅಕ್ಕಿ ವಿತರಣೆ ಮಾಡಲಿಲ್ಲ ಪ್ರೀಯ ಸಾರ್ವಜನಿಕರೇ ಈಗಾಗಲೇ ಸರ್ಕಾರವು ಜಾರಿಗೆ ಬಂದಿದ್ದು, ಜನರು ಸರ್ಕಾರದ ಚಟುವಟಿಕೆಗಳತ್ತ ಕಾದು ನೋಡುತ್ತಿದ್ದಾರೆ. ಅದೇ ರೀತಿ ಈಗ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷೆಯ ಹಾಗೂ ಬಹುತೇಕ ಜನಸಾಮಾನ್ಯರು ಕಾತರದಿಂದ ಕಾಯುತ್ತಿರುವ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಿಸಲು ಸರ್ಕಾರ ನಿರ್ಧರಿಸಿದೆ. ಆದರೆ ಈ ಯೋಜನೆಯನ್ನು ಸರ್ಕಾರವು ಜುಲೈ 1ರಿಂದ ಅನುಷ್ಠಾನಕ್ಕೆ ತರಲು ಆಗುತ್ತಿಲ್ಲ. ಸರ್ಕಾರದ ಘೋಷಣೆ ಪ್ರಕಾರ ಪ್ರತಿ ವ್ಯಕ್ತಿಗೆ ತಲಾ ನಿಗದಿಯಂತೆ 10 ಕೆಜಿ ಉಚಿತ ಅಕ್ಕಿ ಕೊಡುವ ಯೋಜನೆ ಇದಾಗಿದೆ. ಈ ಯೋಜನೆಯ ಅಡಿಯಲ್ಲಿ ರಾಜ್ಯದ ಎಲ್ಲಾ ಜನರಿಗೆ ಉಚಿತ ಅಕ್ಕಿ ನೀಡಲು ಸರ್ಕಾರ ಸ್ಪಷ್ಟಪಡಿಸಿದೆ.

ಜೂನ್ ತಿಂಗಳಿನಿಂದ 10ಕೆಜಿ ಅಕ್ಕಿ ಕೊಡುತ್ತಿಲ್ಲ ಏಕೆ?
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಈಗಾಗಲೇ ಜನರಿಗೆ ಜೂನ್ ತಿಂಗಳಲ್ಲಿ 10 ಕೆಜಿ ಅಕ್ಕಿ ವಿತರಣೆ ಮಾಡಲು ನಿರ್ಧಾರ ಮಾಡಿತ್ತು, ಆದರೆ ರಾಜ್ಯದಲ್ಲಿ ಅಕ್ಕಿ ಉತ್ಪನ್ನ ಅಲಭ್ಯತೆ ಹಿನ್ನೆಲೆಯಲ್ಲಿ ಈ ಯೋಜನೆ ಈಗ ಅತಂತ್ರವಾಗಿದೆ. ಅದಕ್ಕಾಗಿ ಸರ್ಕಾರವು ನೆರೆ ರಾಜ್ಯಗಳ ಮೊರೆ ಹೊಗಿದ್ದು, ಅಕ್ಕಿ ಹೊಂದಿಸಲು ಆಗುತ್ತಿಲ್ಲ. ಅದಕ್ಕಾಗಿ ಈಗ ಈ ಯೋಜನೆಯನ್ನು ಆಗಸ್ಟ್ 1ರಿಂದ ಅನ್ನಭಾಗ್ಯ ಆರಂಭಿಸುವ ಆಶಾಭಾವನೆಯನ್ನು ಸರ್ಕಾರ ವ್ಯಕ್ತಪಡಿಸಿದೆ.

ಈಗಾಗಲೇ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಮೊರೆ ಹೊಗಿದ್ದು, ಅಕ್ಕಿ ಅವಶ್ಯಕತೆ ಬಗ್ಗೆ ಮಾತನಾಡಿದೆ. ಆದರೆ ಕೇಂದ್ರ ಸರ್ಕಾರ ಯಾವುದೇ ನಿಖರ ನಿರ್ಧಾರ ನೀಡಿಲ್ಲ. ಹೀಗಾಗಿ ಪಂಚ ಗ್ಯಾರಂಟಿಗಳಲ್ಲಿ ಸುಲಭವಾಗಿ ಜಾರಿಗೊಳಿಸಬಹುದಾದ ಏಕೈಕ ಯೋಜನೆ ಅಂದುಕೊಂಡಿದ್ದ ಸರ್ಕಾರಕ್ಕೆ ಅಕ್ಕಿ ಸಿಗದಿರುವುದು ಸರ್ಕಾರಕ್ಕೆ ಸಂಕಷ್ಟ ಎದುರಾಗಿದೆ. ದಕ್ಷಿಣ ಭಾರತದ ಮೂರು ರಾಜ್ಯಗಳು ಅಕ್ಕಿ ಸರಬರಾಜು ಅನ್ನಭಾಗ್ಯ ಅಸಾಧ್ಯ ಎಂದಿರುವ ಬೆನ್ನಲ್ಲೇ ಉತ್ತರದ ರಾಜ್ಯಗಳನ್ನು ಅವಲಂಬಿಸುವುದು
ಅನಿವಾರ್ಯವಾಗಿದೆ. ಛತ್ತೀಸ್‌ಗಢ, ಪಂಜಾಬ್ ಒಪ್ಪಿದ್ದರೂ ಇದು ನಿರಂತರವಾಗಿ ಪೂರೈಕೆಯಾಗುವುದು ಖಾತರಿಯಾಗಿಲ್ಲ.

10 ಕೆಜಿ ಉಚಿತ ಅಕ್ಕಿ ವಿತರಣೆ ಯಾವಾಗ?
ರಾಜ್ಯ ಸರ್ಕಾರವು ಸಾರ್ವಜನಿಕರಿಗೆ ಅಗಸ್ಟ್ ತಿಂಗಳಿನಿಂದ ಪ್ರತಿ ಬಾರಿ 10 ಕೆಜಿ ಅಕ್ಕಿಯನ್ನು ನೀಡಲು ಸರ್ಕಾರ ನಿರ್ಧರಿಸಿದೆ. ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಿಸಲು ಸರ್ಕಾರ ಅಗಸ್ಟ್ ತಿಂಗಳಿನಿಂದ ಜಾರಿ ಮಾಡಲು ಮುಂದಾಗಿದೆ. ರಾಜ್ಯದಲ್ಲಿ ಅಕ್ಕಿ ಕೊರತೆ ಇರುವುದರಿಂದ ಅಕ್ಕಿದರ ಗಗನಕ್ಕೇರಲಿದೆ. ಹಾಗೂ ರಾಜ್ಯದಲ್ಲಿ ಉತ್ಪಾದನೆ ಕುಂಠಿತ ಮತ್ತು ಸಂಸ್ಕರಣೆ ವೆಚ್ಚ ದುಬಾರಿಯಾಗಿರುವ ಕಾರಣಕ್ಕೆ ಕರ್ನಾಟಕ ರೈಸ್‌ಮಿಲ್ ಅಸೋಸಿಯೇಷನ್‌ ಅಕ್ಕಿ ಬೆಲೆಯನ್ನು ಪ್ರತಿ ಕೆಜಿಗೆ 5 ರಿಂದ 8 ರೂಪಾಯಿಯಷ್ಟು ಹೆಚ್ಚಿಸಲು ಮುಂದಾಗಿದೆ.

Spread positive news

Leave a Reply

Your email address will not be published. Required fields are marked *