ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಹಾಗೂ ಇದು ಬಡ ರೈತರಿಗೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಈ ಯೋಜನೆಯ ಉದ್ದೇಶವಾಗಿದೆ. ಈ ಉಪಕ್ರಮವು ಬಡವರಿಂದ ಮಧ್ಯಮ ವರ್ಗದವರೆಗೆ ಒಂದು ಕೋಟಿ ಮನೆಗಳಲ್ಲಿ ಮೇಲ್ಛಾವಣಿಯ ಸೌರ ಫಲಕಗಳನ್ನು ಅಳವಡಿಸುವ ಗುರಿಯನ್ನು ಹೊಂದಿದೆ , ಸೌರಶಕ್ತಿಯಿಂದ ವಿದ್ಯುತ್ ಒದಗಿಸುವ ಗುರಿಯನ್ನು ಹೊಂದಿದೆ. ಅದರ ವಿಶಾಲ ಪರಿಣಾಮವನ್ನು ಒತ್ತಿಹೇಳುತ್ತಾ, ಈ ಯೋಜನೆಯು ಬಡ ಮತ್ತು ಮಧ್ಯಮ ವರ್ಗದವರ ವಿದ್ಯುತ್ ಬಿಲ್‌ಗಳನ್ನು ಕಡಿಮೆ ಮಾಡುವ ಉದ್ದೇಶವನ್ನು ಮಾತ್ರವಲ್ಲದೆ ಇಂಧನ ವಲಯದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುತ್ತದೆ ಎಂದು ಪ್ರಧಾನಮಂತ್ರಿ ಹೈಲೈಟ್ ಮಾಡಿದರು.
ಸೌರ ವಿದ್ಯುತ್‌ಗೆ ಹೆಚ್ಚಿನ ಪ್ರೋತ್ಸಾಹ ಹಾಗೂ ಸುಸ್ಥಿರ ಪ್ರಗತಿಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ‘ಪಿಎಂ ಸೂರ್ಯ ಘರ್: ಮುಫ್ ಬಿಜ್ಜಿ ಯೋಜನೆ’ಯನ್ನು ಆರಂಭಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪ್ರಕಟಿಸಿದ್ದಾರೆ. ದೇಶದಾದ್ಯಂತದ ಒಂದು ಕೋಟಿ ಕುಟುಂಬಗಳಿಗೆ ಪ್ರತಿ ತಿಂಗಳು 300 ಯೂನಿಟ್ ವರೆಗೆ ಉಚಿತ ವಿದ್ಯುತ್ ಪೂರೈಸುವುದು A ಮಹತ್ವಾಕಾಂಕ್ಷೆ ಯೋಜನೆಯ ಗುರಿ 75,000 ಕೋಟಿ ಯಾಗಿದೆ. ಇದಕ್ಕಾಗಿ ರೂಪಾಯಿಗೂ ಹೆಚ್ಚಿನ ಬಂಡವಾಳವನ್ನು ತೊಡಗಿಸಲಾಗುವುದೆಂದು ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ನಲ್ಲಿ ಮೋದಿ ಹೇಳಿದ್ದಾರೆ.
ಜನರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸುವ ಗಣನೀಯ ಸಬ್ಸಿಡಿಯಿಂದ ಹಿಡಿದು, ಭಾರಿ ರಿಯಾಯಿತಿಯ ಬ್ಯಾಂಕ್ ಸಾಲದ ವರೆಗೆ ಆರ್ಥಿಕ ನೆರವನ್ನು ನೀಡುವ ಮೂಲಕ ಜನರಿಗೆ ಹೊರೆಯಾಗದಿರುವುದನ್ನು ಕೇಂದ್ರ ಸರ್ಕಾರ ಖಾತರಿಪಡಿಸಲಿದೆ ಎಂದು ಪ್ರಧಾನಿ ವಿವರಿಸಿದ್ದಾರೆ. ಯೋಜನೆಯ ಎಲ್ಲ ಪಾಲುದಾರರನ್ನು ಒಂದು ರಾಷ್ಟ್ರೀಯ ಆನ್‌ಲೈನ್ ಪೋರ್ಟಲ್‌ಗೆ ಸಂಪರ್ಕಿಸಲಾಗುವುದೆಂದು ಅವರು ತಿಳಿಸಿದ್ದಾರೆ. ಸ್ಥಳೀಯ ಸಂಸ್ಥೆಗಳ ಹೊಣೆ: ತಳಮಟ್ಟದಲ್ಲಿ ಈ ಯೋಜನೆಯನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತಿಗಳು ತಮ್ಮ ವ್ಯಾಪ್ತಿಗಳಲ್ಲಿ ಛಾವಣಿಮೇಲಿನ ಸೌರ ವ್ಯವಸ್ಥೆಗಳಿಗೆ ಉತ್ತೇಜನ ನೀಡಲು ಅವುಗಳಿಗೆ ನೆರವನ್ನು ಒದಗಿಸಲಾಗುತ್ತದೆ. ಈ ಯೋಜನೆಯು ಹೆಚ್ಚು ಅದಾಯ, ಕಡಿಮೆ ವಿದ್ಯುತ್ ಬಿಲ್ ಮತ್ತು ಜನರಿಗೆ ಉದ್ಯೋಗ ಸೃಷ್ಟಿಗೆ ಕೂಡ ಸಹಾಯಕವಾಗಲಿದೆ ಎಂದು ಮೋದಿ ಹೇಳಿದ್ದಾರೆ.
ಈ ಯೋಜನೆಗೆ ಎಷ್ಟು ಹಣ ನೀಡುತ್ತಾರೆ?
ಕನಿಷ್ಠ ಸಬ್ಸಿಡಿ: 18,000 ರೂ. • ಗರಿಷ್ಠ ಸಬ್ಸಿಡಿ: 78,000 ರೂ. ಒಂದು ಕೆವಿ ಘಟಕಕ್ಕೆ ಅಂದಾಜು ವೆಚ್ಚ 47,000 ರೂ.
ಯೋಜನೆಗೆ ಯಾರು ಅರ್ಹರು?
ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಯು 1 ಕೋಟಿ ಕುಟುಂಬಗಳಿಗೆ, ವಿಶೇಷವಾಗಿ ಬಡ ಮತ್ತು ಮಧ್ಯಮ-ಆದಾಯದ ಗುಂಪುಗಳ ವಿದ್ಯುತ್ ಬಿಲ್‌ಗಳನ್ನು ಕಡಿಮೆ ಮಾಡುವ ಮೂಲಕ ಸಹಾಯ ಮಾಡುವ ಗುರಿಯನ್ನು ಹೊಂದಿದೆ.
ಸರ್ಕಾರದ ಹಿಂದಿನ ಮೇಲ್ಛಾವಣಿ ಸೌರ ಕಾರ್ಯಕ್ರಮ
2014 ರಲ್ಲಿ, 2022 ರ ವೇಳೆಗೆ 40,000MW ಅಥವಾ 40GW ಒಟ್ಟು ಸ್ಥಾಪಿತ ಸಾಮರ್ಥ್ಯವನ್ನು ಸಾಧಿಸುವ ಗುರಿಯೊಂದಿಗೆ ಸರ್ಕಾರವು ಮೇಲ್ಛಾವಣಿ ಸೌರ ಕಾರ್ಯಕ್ರಮವನ್ನು ಪ್ರಾರಂಭಿಸಿತು.
ಈ ಯೋಜನೆಯ ಪ್ರಮುಖ ಪ್ರಯೋಜನಗಳು –
• 30 300ಗಳವರೆಗೆ ಉಚಿತ ವಿದ್ಯುತ್
• ಮನೆಗಳ ಮೇಲ್ಪಾವಣಿಯ ಮೇಲೆ ಸೌರ ಫಲಕಗಳ ಅಳವಡಿಕೆ
• ಸರ್ಕಾರದಿಂದ ಶೇ.60 ವರೆಗೆಸಹಾಯಧನ
•75,000 ಕೋಟಿ ರೂ.ಯೋಜನೆ ಜನಸಾಮಾನ್ಯರ ವಿದ್ಯುತ್ಬಿಲ್‌ನಲ್ಲಿ ಕಡಿತ
• ಇಂಧನ ಭದ್ರತೆಯಲ್ಲಿಹೆಚ್ಚಳ ಪರಿಸರ ಮಾಲಿನ್ಯಕ್ಕೆ ತಡೆ
ಎಲ್ಲಿ ಈ ಯೋಜನೆಯ ಅರ್ಜಿ ಸಲ್ಲಿಕೆ ?
ಮನೆ ಮೇಲೆ ಸೌರ ವಿದ್ಯುತ್ ಫಲಕಗಳ ಅಳವಡಿಕೆಗೆ ಅವಕಾಶವಿರುವ ~ https://pmsuryaghar.gov.in ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಪಿಎಂ-ಸೂರ್ಯ ಘರ್: ಮುಸ್ತ್ ಬಿಜ್ಜಿ ಯೋಜನೆ ಫಲಾನುಭವಿಗಳಾಗಬಹುದು. ಎಲ್ಲ ವಸತಿ ಗ್ರಾಹಕರಿಗೆ, ಅದರಲ್ಲೂ ವಿಶೇಷವಾಗಿ ಯುವಜನರಿಗೆ ಯೋಜನೆಯಲ್ಲಿ ಪಾಲ್ಗೊಳ್ಳಲು ತಾವು ಕಳಕಳಿಯಿಂದ ಮನವಿ ಮಾಡುವುದಾಗಿ ಮೋದಿ ಹೇಳಿದ್ದಾರೆ.