ಭಯಂಕರ ಚಳಿ : ಸಾರ್ವಜನಿಕರೇ ಇವತ್ತು ಒಂದು ಆಶ್ಚರ್ಯಕರ ಸುದ್ದಿ ಬಗ್ಗೆ ಮಾತಾಡೋಣ. ಏನೆಂದರೆ ವಿಜಯಪುರ ನಗರ ಸೇರಿದಂತೆ ಜಿಲ್ಲೆಯಲ್ಲಿ ಶನಿವಾರ ತಾಪಮಾನ 7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ನಾಲ್ಕು ದಿನಗಳಿಂದ ತಾಪಮಾನ ತೀವ್ರವಾಗಿ ಕುಸಿತವಾಗುತ್ತಿದ್ದು, ಶೀತಗಾಳಿ ಬೀಸುತ್ತಿದೆ. ಪರಿಣಾಮ ಸಂಜೆ 6 ಗಂಟೆಯಿಂದಲೇ ಚಳಿಯ ವಾತಾವರಣ ಆವರಿಸುತ್ತಿದ್ದು, ಬೆಳಿಗ್ಗೆ 9 ಗಂಟೆಯ ವರೆಗೂ ರಸ್ತೆಗಳಲ್ಲಿ ಜನ ಸಂಚಾರ ವಿರಳವಾಗಿದೆ.
ಬೆಳಿಗ್ಗೆ-ಸಂಜೆ ವಾಯು ವಿಹಾರಕ್ಕೆ ತೆರಳುವವರ ಸಂಖ್ಯೆಯೂ ವಿರಳವಾಗಿದೆ. ಚಳಿಗೆ ಜನ ತತ್ತರಿಸಿದ್ದು, ಮನೆಯಿಂದ ಹೊರಗೆ ಬರಲು ಅಂಜುತ್ತಿದ್ದಾರೆ. ಮಕ್ಕಳು, ವೃದ್ಧರ ಆರೋಗ್ಯದಲ್ಲಿ ಏರುಪೇರು ಉಂಟಾಗತೊಡಗಿದೆ. ಜ್ವರ, ಕೆಮ್ಮು, ಕಫ, ಶೀತ ಮತ್ತಿತರರ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ರಾತ್ರಿ ವೇಳೆ ಕನಿಷ್ಠ ತಾಪಮಾನ, ಹಗಲು ಅತ್ಯಧಿಕ ಬಿಸಿಲು ಜನರನ್ನು ಹೈರಾಣಾಗಿಸಿದೆ. ಜನ ಬೆಚ್ಚಗಿನ ಉಡುಪು, ಬಿಸಿ ಬಿಸಿಯಾದ ಆಹಾರ ಪದಾರ್ಥಗಳ ಸೇವನೆಗೆ ಮೊರೆ ಹೋಗಿದ್ದಾರೆ. ಮೈನಡುಗಿಸುವ ಚಳಿಯು ಜಿಲ್ಲೆಯ ನಗರ, ಪಟ್ಟಣಗಳಿಗಿಂತ ಗ್ರಾಮೀಣ ಪ್ರದೇಶದಲ್ಲಿ ಅದರಲ್ಲೂ ನದಿ, ಹೊಳೆ ದಂಡೆ ಪ್ರದೇಶದಲ್ಲಿ ಜನ ಜೀವನದಲ್ಲಿ ವ್ಯತ್ಯಾಸ ಉಂಟು ಮಾಡಿದೆ.
ಎಷ್ಟು ಡಿಗ್ರಿ ಸೆಲ್ಸಿಯಸ್ ವರೆಗೆ ಇದೆ.?
ಬೀದರ್ ಜಿಲ್ಲೆಯಲ್ಲಿ ತಾಪಮಾನ ಭಾರಿ ಇಳಿಕೆ ಕಂಡಿದೆ. ಹವಾಮಾನ ಇಲಾಖೆಯೂ ಈಗಾಗಲೇ ಶೀತಗಾಳಿ ಬೀಸುವ ಮುನ್ನೆಚ್ಚರಿಕೆ ನೀಡಿದ್ದು, ಡಿಸೆಂಬರ್ 16ರ ವರೆಗೆ ಸಾಮಾನ್ಯ ತಾಪಮಾನಕ್ಕಿಂತ ಕನಿಷ್ಠ 4ರಿಂದ 6 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಲಿದ್ದು, ಜನರು ಜಾಗೃತಿ ವಹಿಸುವಂತೆ ಪ್ರಕಟಣೆಯಲ್ಲಿ ಸೂಚಿಸಿದೆ.
ತಾಪಮಾನ ಇಳಿಕೆಗೆ ಮುಖ್ಯ ಕಾರಣಗಳೇನು ?
ಪ್ರದೇಶದಲ್ಲಿ ಎತ್ತರ ಹೆಚ್ಚಾದಂತೆ ವಾತಾವರಣ ತಣ್ಣಗಾಗುವುದು ( ಎತ್ತರ ಹೆಚ್ಚಾದಂತೆ ತಾಪಮಾನ ಇಳಿಕೆ) ಮತ್ತು ತಾಪಮಾನ ವಿಲೋಮ (Temperature Inversion) ಸೇರಿವೆ, ಇದರಲ್ಲಿ ಬೆಚ್ಚನೆಯ ಗಾಳಿಯು ತಂಪಾದ ಗಾಳಿಯನ್ನು ಭೂಮಿಯ ಬಳಿ ಲಾಕ್ ಮಾಡುತ್ತದೆ, ಇದರಿಂದಾಗಿ ಸ್ಥಳೀಯವಾಗಿ ತಾಪಮಾನ ಕಡಿಮೆಯಾಗಿ ಮಾಲಿನ್ಯ ಹೆಚ್ಚಾಗುತ್ತದೆ; ಜೊತೆಗೆ, ಗಾಳಿಯ ಒತ್ತಡ, ಸಾಗರ ಪ್ರವಾಹಗಳು ಮತ್ತು ಭೂಮಿಯ ತಿರುಗುವಿಕೆಯಂತಹ ಅಂಶಗಳು ಕೂಡ ಜಾಗತಿಕ ತಾಪಮಾನದ ಬದಲಾವಣೆಗಳ ಮೇಲೆ ಪ್ರಭಾವ ಬೀರುತ್ತವೆ.
ಅತ್ಯಧಿಕ ಚಳಿಯ ಜಿಲ್ಲೆಗಳು, ಮುಂದಿನ ಮುನ್ಸೂಚನೆ ಏನಿದೆ?
ಈಗಾಗಲೇ ನೀವು ನೋಡುತ್ತಿರುವ ಹಾಗೆ ವಾರದ ಹಿಂದೆ ಬೀದರ್‌ನಲ್ಲಿ ಹೆಚ್ಚಿನ ಚಳಿ ದಾಖಲಾಗಿದ್ದರಿಂದ ಆ ಒಂದು ಜಿಲ್ಲೆಗೆ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಈ ಶಿತ ಅಲೆ ಪ್ರಮಾಣ ಹೆಚ್ಚಾಗಿದ್ದರಿಂದ ಎಂಟು ಜಿಲ್ಲೆಗಳಿಗೆ ಮುನ್ನೆಚ್ಚರಿಕೆ ನೀಡಲಾಯಿತು. ಶುಕ್ರವಾರದಿಂದ (ಡಿ.12) ರಾಜ್ಯ ವ್ಯಾಪಿ ಭಾರೀ ಶೀತ ಅಲೆ ಮುಂದುವರಿಯುವ ನಿರೀಕ್ಷೆ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಬೀದರ್, ಕಲಬುರಗಿ, ರಾಯಚೂರು, ಗದಗ, ಯಾದಗಿರಿ, ವಿಜಯಪುರ, ಬಾಗಲಕೋಟೆ ಮತ್ತು ಧಾರವಾಡ ಜಿಲ್ಲೆಗಳಿಗೆ ಆರೇಂಜ್ ಅಲರ್ಟ್ ನೀಡಲಾಗಿದೆ.
ಉತ್ತರ ಒಳನಾಡಿನಲ್ಲಿ ಮನೆಯಿಂದ ಹೊರ ಕಾಲಿಡದಷ್ಟು ದಟ್ಟ ಮಂಜು, ಮೈಕೊರೆವ ಚಳಿ ವಾತಾವರಣ ದಾಖಲಾಗಿದೆ. ಜನರ ಬೆಚ್ಚಗಿನ ಧಿರಿಸುವ ಧರಿಸಿ ಮನೆ ಒಳಗೆ ಇದ್ದಾರೆ. ಸಂಜೆ ನಂತರ ಹೊರಾಂಗ ಚಟುವಟಿಕೆಗಳಿಗೆ ಈ ಭಾಗದಲ್ಲಿ ಬ್ರೇಕ್ ಬಿದ್ದಿದೆ. ಹಗಲು ಹೆಚ್ಚಿನ ಬಿಸಿಲು, ಶುಷ್ಕ ವಾತಾವರಣ ಕಂಡು ಬರುತ್ತಿದೆ. ಸಂಜೆ ಆಗುತ್ತಿದ್ದಂತೆ ಹೆಚ್ಚಾಗುವ ಚಳಿಯು ಮಾರನೇ ದಿನ ಬೆಳಗ್ಗೆ ಸುಮಾರು 09 ಗಂಟೆವರೆಗೆ ಕಂಡು ಬರುತ್ತಿದೆ. ದಿಢೀರ್ ಹೆಚ್ಚಾದ ಚಳಿಗೆ ಜನರು ನಡುಗಿದ್ದಾರೆ.
ಕನಿಷ್ಠ ಉಷ್ಣಾಂಶವು 12 ಡಿಗ್ರಿ ಸೆಲ್ಸಿಯಸ್‌ವರೆಗೂ ಇಳಿಕೆಯಾಗುವ ಸಂಭವವಿದೆ. ಒಂದು ವೇಳೆ ಇಷ್ಟು ಪ್ರಮಾಣಕ್ಕೆ ಕುಸಿತವಾದರೆ, 2016ರ ನಂತರ ಡಿಸೆಂಬರ್ ತಿಂಗಳಲ್ಲಿ ನಗರದಲ್ಲಿ ದಾಖಲಾದ ಕನಿಷ್ಠ ಉಷ್ಣಾಂಶವಾಗಲಿದೆ. 2016ರ ಡಿ.11ರಂದು ಕನಿಷ್ಠ ಉಷ್ಣಾಂಶವು 12 ಡಿಗ್ರಿ ಸೆಲ್ಸಿಯಸ್‌ನಷ್ಟು ವರದಿಯಾಗಿತ್ತು. ಬೆಂಗಳೂರಿನಲ್ಲಿ, ರಾತ್ರಿ ತಾಪಮಾನವು 15°C ಮತ್ತು 17° ಸೆಲ್ಸಿಯಸ್ ನಡುವೆ ಇರಲಿದೆ ಮತ್ತು ನಗರದ ಕೆಲವು ಪ್ರದೇಶಗಳಲ್ಲಿ ಸುಮಾರು 12°C ಗೆ ಇಳಿಯಬಹುದು. ಡಿಸೆಂಬರ್ ಅಂತ್ಯ ಮತ್ತು ಜನವರಿ ಆರಂಭದಲ್ಲಿ ಚಳಿಗಾಲ ಮುಂದುವರೆದಂತೆ ಶೀತದ ವಾತಾವರಣ ಸಾಮಾನ್ಯವಾಗಿರುತ್ತದೆ ಎಂದು ಪಾಟೀಲ್ ಹೇಳಿದರು . ಇದು ಇನ್ನೂ ಚಳಿಗಾಲದ ಉತ್ತುಂಗವನ್ನು ತಲುಪಿಲ್ಲ ಆದರೆ ಈಗಲೇ ತೀವ್ರ ಶೀತ ಮುಂದುವರಿಯುತ್ತಿದೆ ಎಂದು ತಿಳಿಸಿದ್ದಾರೆ.

