ಹವಾಮಾನ : ರೈತರೇ ಸಾಮಾನ್ಯವಾಗಿ ನಾವು ಈ ವರ್ಷ ಕೆಲವು ಕಡೆ ಭಾರಿ ಮಳೆ ಆಗಿದ್ದು ರೈತರಿಗೆ ಕೃಷಿಯಲ್ಲಿ ಹೆಚ್ಚಿನ ಉತ್ಸುಕತೆ ತುಂಬಿದೆ. ಕೃಷಿ ಕೇವಲ ಬದುಕು ಕಟ್ಟಿ ಕೊಡುವುದಿಲ್ಲ; ಒಂದು ಸಂಸ್ಕೃತಿ ಕಟ್ಟಿ ಕೊಡುತ್ತದೆ. ಕೃಷಿ ಇಲ್ಲದಿದ್ದರೆ ರೈತ ಏನು ಮಾಡಲು ಸಾಧ್ಯವಿಲ್ಲ. ಅದೇ ರೀತಿ ವರುಣನ ಆರ್ಭಟಕ್ಕೆ ಈ ಬಾರಿ ಕೃಷಿ ಉತ್ಪನ್ನ ನೀರು ಪಾಲಾಗಿದೆ. ಆದರೆ ಇನ್ನೂ ಈ ವರುಣನ ಆರ್ಭಟ ಜೋರಾಗಿದೆ. ಮುಂದಿನ ದಿನಗಳಲ್ಲಿ ಹವಾಮಾನ ಹೇಗಿದೆ ಎಂದು ತಿಳಿಯೋಣ ಬನ್ನಿ.
ಹೌದು ರೈತರೇ ಈಗಾಗಲೇ ಹೇಳಿದಂತೆ ಇಂದಿನಿಂದ 5 ದಿನ ರಾಜ್ಯದ ಉತ್ತರ ಕರ್ನಾಟಕ ಹೊರತುಪಡಿಸಿ ಉಳಿದೆಲ್ಲಾ ಕಡೆ ಮತ್ತೆ ಭಾರಿ ಮಳೆ ಮುನ್ಸೂಚನೆ ಇದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ-ಉಡುಪಿ ಹಾಗೂ ಉತ್ತರ ಕರ್ನಾಟಕ ಸೇರಿದಂತೆ, ದಕ್ಷಿಣ ಕರ್ನಾಟಕದ ಹಲವೆಡೆ ಭಾರಿ ಮಳೆ ಮುನ್ಸೂಚನೆ ಇದೆ. ಈ ಹಿನ್ನೆಲೆ ಅಕ್ಟೋಬರ್ 8 ರಿಂದ 12 ರವರೆಗೆ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಉತ್ತರ ಕರ್ನಾಟಕದ ಕೆಲವೆಡೆ ಮಾತ್ರ ಅಕ್ಟೋಬರ್ 9 ಹಾಗೂ 10 ಮತ್ತು 11 ರಂದು ಗುಡುಗು ಹಾಗೂ ಹಗುರ ಮಳೆಯಾಗಲಿದೆ.
ನಾಳೆಯ ಹವಾಮಾನ –
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿರುಗಾಳಿಯೊಂದಿಗೆ (ಗಂಟೆಗೆ 30-40 ಕಿ.ಮೀ) ಭಾರೀ ಮಳೆ/ಗುಡುಗು ಸಹಿತ ಮಳೆ, ದಕ್ಷಿಣ ಒಳಭಾಗ ಕರ್ನಾಟಕದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ, ರಾಮನಗರ, ಬೆಂಗಳೂರು (ಗ್ರಾಮಾಂತರ), ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರಿ ಗಾಳಿ,ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.
ಬಳ್ಳಾರಿ, ಬೆಂಗಳೂರು (ನಗರ), ಚಿತ್ರದುರ್ಗ, ದಾವಣಗೆರೆ, ಮಂಡ್ಯ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಹಲವೆಡೆ ಸಾಧಾರಣ ಮಳೆಯಾಗಲಿದೆ.
ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲ್ಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲ್ಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಭೀಮಾ ಪ್ರವಾಹಕ್ಕೆ ಸಿಕ್ಕು ನರಿಬೋಳ ಚಾಮನೂರು ಸೇತುವೆಯ ಸುಮಾರು ಶೇ.70 ರಷ್ಟು ಸ್ಲ್ಯಾಬ್‍ಗಳು ಉರುಳಿ ಬಿದ್ದಿವೆ. ಇದರಿಂದ ಎರಡು ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ಸೇತುವೆ ಪೂರ್ಣಗೊಳ್ಳುತ್ತದೆ ಎನ್ನುವದು ಕನಸಾಗೆ ಉಳಿಯಬಹುದು ಎಂಬಂತೆ ಮಾತಾಡುತ್ತಾ ಗುತ್ತಿಗೆದಾರ, ಜನಪ್ರತಿನಿಧಿಗಳು, ಅಧಿಕಾರಿಗಳ ಕುರಿತು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ರೈತರು ತೆಗೆದುಕೊಳ್ಳಬೇಕಾದ ಎಚ್ಚರಿಕೆ ಕ್ರಮಗಳು –
* ರೈತಬಾಂದವರು ಆದ್ಯತೆಯ ಮೇರೆಗೆ ಸೋಯಾಅವರೆ ಮತ್ತು ಶೇಂಗಾಬೆಳೆಯ ಕಟಾವು ಕೈಗೊಳ್ಳಬೇಕು.
* ಮುಂಗಾರಿ ಬಿತ್ತನೆಗೆ ಭೂಮಿ ತಯಾರಿ ಮತ್ತು ಮಣ್ಣಿನಲ್ಲಿ ಉತ್ತಮ ಬಿತ್ತುವ ಹದನೋಡಿಕೊಂಡು ಹಿಂಗಾರಿ ಜೋಳ, ಕಡಲೆ, ಕುಸುಬೆ ಮತ್ತು ಗೋಧಿ ಬಿತ್ತನೆಯನ್ನು ಕೈಗೊಳ್ಳಬಹುದು.
* ಈಗಾಗಲೇ ಬೆಳೆದಿರುವ ರೈತ ಉತ್ಪನ್ನಗಳನ್ನು ಸಂಸ್ಕರಣೆ ಮಾಡಿ ಇಡಬೇಕು.
* ರೈತ ಉತ್ಪನ್ನಗಳಿಗೆ ಕೀಟಗಳ ಬಾಧೆಗೆ ತಗುಲದಂತೆ ನೋಡಬೇಕು.
ಮಳೆಯಿಂದಾಗಿ ಕಲಬುರಗಿ ಜಿಲ್ಲೆಯಲ್ಲಿ ವ್ಯಾಪಕ ಬೆಳೆ ಹಾನಿ ಆಗಿರುವ ಕುರಿತು ಮುಖ್ಯಮಂತ್ರಿಗಳು ಈಗಾಗಲೇ ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದಿದ್ದು, ಜಿಲ್ಲೆಯಲ್ಲಿ ಬೆಳೆ ವಿಮೆ ಪರಿಹಾರದ ಬಗ್ಗೆಯೂ ಅವರಿಗೆ ಮಾಹಿತಿ ನೀಡಲಾಗಿದೆ. ಹಾಗಾಗಿ, ಮುಂದಿನ ಒಂದು ವಾರದೊಳಗೆ ರೈತರ ಖಾತೆಗಳಿಗೆ ಪರಿಹಾರ ಜಮಾ ಆಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆ ಇನ್ನೂ ನಿಲ್ಲದ ಕಾರಣಕ್ಕಾಗಿ ಸರ್ವೆ ಮಾಡುವುದು ಕಷ್ಟವಾಗುತ್ತಿದೆ. ಮೊದಲ ಹಂತದಲ್ಲೇ 1.05 ಲಕ್ಷ ಹೆಕ್ಟೇರ್ ಹಾನಿಯಾಗಿದೆ. ಮಳೆ ನಿಂತ ಬಳಿಕ ಎರಡನೆಯ ಸುತ್ತಿನ ಸರ್ವೆ ಮಾಡಲಾಗುವುದು. ಈ ಬಗ್ಗೆ ನಾಳೆ ಸಚಿವ ಸಂಪುಟ ಸಭೆಯ ಬಳಿಕ ನಂತರ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು.