ರೈತರೇ ಎಚ್ಚರಿಕೆ! ಹತ್ತಿಯಲ್ಲಿ ಬಂದಿದೆ ತಂಬಾಕು ವೈರಸ್ ರೋಗ.

ತಂಬಾಕು ವೈರಸ್ ರೋಗ : ಪ್ರೀಯ ರೈತರೇ ಸದ್ಯದ ಸ್ಥಿತಿಯಲ್ಲಿ ವಾತಾವರಣ ತುಂಬಾ ಹದಗೆಟ್ಟಿದೆ. ಕೆಲವು ಕಡೆ ಧಾರಾಕಾರ ಮಳೆ ಸುರಿದಿದೆ. ಕೆಲವು ಕಡೆ ಬಿಸಿಲಿನ ತಾಪ, ತಂಪಾದ ವಾತಾವರಣ ಹೀಗೆ ಸದ್ಯದ ಸ್ಥಿತಿಯಲ್ಲಿ ವಾತಾವರಣ ಸುಧಾರಣೆ ಇಲ್ಲ.
ಅದೇ ರೀತಿ ಈಗ ಈ ವಾತಾವರಣದಿಂದ ಬಳ್ಳಾರಿ ತಾಲ್ಲೂಕಿನ ಕಮ್ಮರಚೇಡು, ರೂಪನಗುಡಿ, ರಾಯಪುರ, ಎತ್ತಿನಬೂದಿಹಾಳ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಹತ್ತಿ ಬೆಳೆಯಲ್ಲಿ ತಂಬಾಕು ವೈರಸ್ ರೋಗದ ಲಕ್ಷಣ ಕಾಣಿಸಿಕೊಂಡಿರುವ ಬಗ್ಗೆ ಹಗರಿಯ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳ ತಂಡ ಬುಧವಾರ ಭೇಟಿ ನೀಡಿ ನಿರ್ವಹಣಾ ಕ್ರಮಗಳ ಕುರಿತು ರೈತರಲ್ಲಿ ಸಲಹೆ ಹಾಗೂ ಜಾಗೃತಿ ಮೂಡಿಸಿದ್ದಾರೆ.

ಹೌದು ಈಗಾಗಲೇ ಕೆಲವು ಕಡೆ ಕೃಷಿಯಲ್ಲಿ ರೈತರು ಹಿಂಜರಿಯುತ್ತಿದ್ದಾರೆ. ಏಕೆಂದರೆ ಹತ್ತಿ ಬೆಳೆಯಲ್ಲಿ ತಂಬಾಕು ವೈರಸ್ ರೋಗಕ್ಕೆ ತುತ್ತಾದ ಗಿಡಗಳಲ್ಲಿ ಹಳದಿ ಮಿಶ್ರಿತ ಮಚ್ಚೆಗಳು ಚಿಗುರೊಡೆದ ಎಲೆಗಳಲ್ಲಿ ಕಂಡು ಕಾಲಕ್ರಮೇಣ ನೇರಳೆ ಬಣ್ಣಕ್ಕೆ ತಿರುಗುತ್ತವೆ ಹಾಗೂ ರೋಗದ ತೀವ್ರತೆ ಹೆಚ್ಚಾದಾಗ ಚಿಗುರು ಎಲೆಯ ಅಂಚು ಸಹ ಒಣಗುತ್ತದೆ. ಇದರಿಂದ ಗಿಡಗಳ ಬೆಳವಣಿಗೆ ಕುಂಠಿತವಾಗಿ ಮೊಗ್ಗು ಮತ್ತು ಹೂವಿನ ಉತ್ಪಾದನೆ ಕಡಿಮೆಯಾಗುತ್ತದೆ. ರೋಗದ ತೀವ್ರತೆಯಿಂದ ಹತ್ತಿ ಕಾಯಿಗಳು ಸಹ ಒಣಗುತ್ತವೆ ಎಂದು ಐಸಿಎಆರ್ ಹಗರಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ.ಪಾಲಯ್ಯ.ಪಿ ಅವರು ಹೇಳಿದರು.

ಹತ್ತಿ ಎಲೆ ಏಕೆ ಕೆಂಪಾಗುವುದು?
ಹತ್ತಿಯಲ್ಲಿ ಎಲೆ ಕೆಂಪಾಗುವಿಕೆಯುವುದು ಯಾವುದೇ ರೋಗ ಕೀಟದಿಂದ ಬರಲ್ಲ, ಅದು ಒಂದು ಪೋಷಕಾಂಶ ಕೊರತೆಯಿಂದ ಬರುತ್ತದೆ. ಇದು ಒಂದು ಮೆಗ್ನೀಷಿಯಂ ಸಲ್ಫೇಟ್ ಕೊರತೆಯಿಂದ ಬರುತ್ತದೆ.

ವಲಯ 2 ರ ನೀರಾವರಿ ಪ್ರದೇಶದಲ್ಲಿ ಬಿಟಿ ಹತ್ತಿಯಲ್ಲಿ ವಿಶೇಷವಾಗಿ ಎಲೆ ಕೆಂಪಾಗುವಿಕೆ ಪ್ರಮಾಣ ಹೆಚ್ಚಾಗಿರುವುದರಿಂದ ಬಿತ್ತನೆ ಸಮಯದಲ್ಲಿ ಪ್ರತಿ ಎಕರೆಗೆ 10 ಕಿ. ಗ್ರಾಂ. ಮೆಸ್ನೇಶಿಯಂ ಸಲ್ವೇಟ್ ಹಾಗೂ ಶೇ. 25 ರಷ್ಟು ಹೆಚ್ಚಿನ ಶಿಫಾರಿತ ರಾಸಾಯನಿಕ ಗೊಬ್ಬರಗಳನ್ನು ಮಣ್ಣಿಗೆ ಸೇರಿಸಬೇಕು. ನಂತರ ಹೂವಾಡುವ (65-75 ದಿನ), ಕಾಯಿಕಟ್ಟುವ (80-95 ದಿನ) ಮತ್ತು ಕಾಯಿ ಬಲಿಯುವ ಹಂತಗಳಲ್ಲಿ (100-110 ದಿನ) ಶೇ. 1.0 ರ ಮೆಗ್ನೆಶಿಯಂ ಸಲ್ಪೇಟ್‌ನ ಜೊತೆಯಲ್ಲಿ ಶೇ. 1.0 ರ 19:19:19 (ನೀರಿನಲ್ಲಿ ಕರಗುವ ಗೊಬ್ಬರ) ದ್ರಾವಣವನ್ನು ಸಿಂಪರಣೆ ಮಾಡಬೇಕು.

ಅದೇ ರೀತಿ ಹತ್ತಿಯಲ್ಲಿ ಈ ನಂಜಾಣು ರೋಗಕ್ಕೆ ಕಾರಣವಾದ ಥ್ರಿಪ್ಸ್ ನುಸಿ ಎನ್ನುವ ರಸ ಹೀರುವ ಕೀಟದಿಂದ ಇದು ಬೇರೆ ಸಸ್ಯಗಳಿಗೆ ಹರಡುತ್ತದೆ. ರೈತರು ರೋಗದ ಹತೋಟಿಗಾಗಿ ತಮ್ಮ ಜಮೀನಿನಲ್ಲಿ ರೋಗಕ್ಕೆ ತುತ್ತಾದ ಸೋಂಕಿತ ಸಸ್ಯಗಳನ್ನು ಹಾಗೂ ರೋಗಕ್ಕೆ ಮೂಲ ಕಾರಣವಾದ ಆಶ್ರಯ ಕೊಡುವ ಸಸಿಯಾದ ಪಾರ್ಥೇನಿಯಂ ಮತ್ತು ಇತರೆ ಕಳೆ ಜಾತಿಯ ಸಸ್ಯಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿ ತಮ್ಮ ಜಮೀನುಗಳನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು ಹಾಗೂ ರೋಗಕ್ಕೆ ತುತ್ತಾದ ಸಸ್ಯದ ಕುಡಿಯನ್ನು ಕಿತ್ತು ಹಾಕಬೇಕು ಎಂದು ತಿಳಿಸಿದರು.

ಹತ್ತಿಯಲ್ಲಿ ಕೆಂಪು ಬಣ್ಣ ನಿವಾರಣೆ –

ಹತ್ತಿ ಎಲೆಗಳಲ್ಲಿ ಸುಕ್ಕುಗಟ್ಟುವುದು ಒಂದು ಸಸ್ಯ ರೋಗ. ಅಂಚುಗಳಲ್ಲಿ, ಎಲೆಗಳು ಕೆಂಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತವೆ ಮತ್ತು ನಿಧಾನವಾಗಿ ಕೆಂಪು ಬಣ್ಣಕ್ಕೆ ತಿರುಗಿ ಒಣಗಲು ಮತ್ತು ಉದುರಲು ಪ್ರಾರಂಭಿಸುತ್ತವೆ.

ಹತ್ತಿಯಲ್ಲಿ ಈ ರೋಗವನ್ನು ಗುಣಪಡಿಸಲು ನಿಯಂತ್ರಣ ಕ್ರಮಗಳು –

  1. ಇದನ್ನು ರಾಸಾಯನಿಕ ಗೊಬ್ಬರಗಳು, ಕಾಂಪೋಸ್ಟ್, ಹಸಿರು ಗೊಬ್ಬರ, ಜೈವಿಕ ಗೊಬ್ಬರಗಳಿಗೆ ಬಳಸಲಾಗುತ್ತದೆ. ಇದು ನೀರಿನ ದಕ್ಷತೆ ಮತ್ತು ಸೂಕ್ಷ್ಮ ಪೋಷಕಾಂಶಗಳನ್ನು ಹೆಚ್ಚಿಸುತ್ತದೆ.
  2. ಬೀಜ ಬಿತ್ತನೆ ಮಾಡುವ ಮೊದಲು, ಅಜಟೋಬ್ಯಾಕ್ಟರ್ ಬೀಜ ಸಂಸ್ಕರಣೆಯನ್ನು ಪ್ರತಿ ಕೆಜಿಗೆ 30 ಗ್ರಾಂ ಮಾಡಬೇಕು.
  3. ನೈಟ್ರಸ್ ಗೊಬ್ಬರಗಳ ಪ್ರಮಾಣವನ್ನು ಭಾಗಿಸಿ ಯೂರಿಯಾವನ್ನು 2% ರಷ್ಟು ಅನ್ವಯಿಸಿ ಮತ್ತು ಬೀಜಕೋಶದ ಸಮಯದಲ್ಲಿ ಸಿಂಪಡಿಸಿ.
  4. ಬೆಳೆ ಸರದಿಯನ್ನು ಅನುಸರಿಸಬೇಕು.
  5. ಮಣ್ಣು ಪರೀಕ್ಷೆ ಮಾಡುವ ಮೊದಲು, ಮಣ್ಣಿಗೆ ಅನುಗುಣವಾಗಿ ರಾಸಾಯನಿಕ ಗೊಬ್ಬರಗಳ ಪ್ರಮಾಣವನ್ನು ನೀಡಿ.
  6. ಎಕರೆಗೆ 8 ಕೆಜಿ ಮೆಗ್ನೀಸಿಯಮ್ ಸಲ್ಫೇಟ್ ಹಾಕಿ.
  7. ಹೂ ಬಿಡುವ ಸಮಯದಲ್ಲಿ ಪ್ರತಿ ಪಂಪ್‌ಗೆ 30 ಗ್ರಾಂ 0.2% ಮೆಗ್ನೀಸಿಯಮ್ ಸಲ್ಫೇಟ್ ಸಿಂಪಡಿಸಿ.
  8. ಹೀರುವ ಕೀಟ ಮತ್ತು ರೋಗದ ಸರಿಯಾದ ನಿರ್ವಹಣೆಯನ್ನು ಅನುಸರಿಸಬೇಕು.
  9. ಬೆಳೆಗಳಿಗೆ ಅಗತ್ಯಕ್ಕೆ ಅನುಗುಣವಾಗಿ ನೀರಾವರಿ ಮಾಡಬೇಕು.

ಹತ್ತಿಯಲ್ಲಿ ಸಿಂಪರಣೆಯಿಂದ ಸಸ್ಯ ಪೋಷಕಾಂಶಗಳ ಪೂರೈಕೆ –

  • ಬಿತ್ತನೆಯಾದ 80 ದಿನಗಳ ನಂತರ 20 ದಿನಗಳಿಗೊಮ್ಮೆ ಎರಡು ಬಾರಿ ಶೇ. 2 ರ ಯೂರಿಯಾ ಅಥವಾ ಶೇ. 1.0 ಪೋಟ್ಯಾಷಿಯಮ್ ನೈಟ್ರೇಟ್ ದ್ರಾವಣವನ್ನು ಸಿಂಪರಣೆ ಮಾಡಬೇಕು.
  • ಇಡಿಟಿಎ ರೂಪದ ಶೇ. 0.5 ಸತುವಿನ ಸಲ್ವೇಟ್, ಶೇ. 0.5 ಕಬ್ಬಿಣದ ಸಲ್ವೇಟ್, ಶೇ. 0.5 ಮ್ಯಾಂಗನೀಸ್ ಸಲ್ವೇಟ್ ಮತ್ತು ಶೇ. 1.0 ಮೆಗ್ನೆಷಿಯಂ ಸಲ್ವೇಟ್‌ನ ಮಿಶ್ರಣವನ್ನು ಹೂವಾಡುವ ಹಂತದಲ್ಲಿ ಎರಡುಬಾರಿ ಸಿಂಪರಣೆಯನ್ನು (ಹತ್ತು ದಿನಗಳ ಅಂತರದಲ್ಲಿ) ಕೈಗೊಳ್ಳಬೇಕು.
  • ಬೆಳೆಯು ಹೂ ಬಿಡಲು ಪ್ರಾರಂಭವಾದಾಗ ಮತ್ತು ಪೂರ್ತಿ ಹೂ ಅರಳಿದಾಗ ಪ್ರತಿ ಲೀಟರ ನೀರಿಗೆ 0.25 ಮಿ. ಲೀ. ಅಲ್ಪಾ-ನ್ಯಾಫ್ತಲಿನ್ ಅಸಿಟಿಕ್ ಅಸಿಡ್ 4.5% ಎಸ್.ಎಲ್. ಬೆರೆಸಿ ಸಿಂಪಡಿಸಬೇಕು.
  • ಪ್ರತಿ ಎಕರೆಗೆ 320 ರಿಂದ 400 ಲೀ. ದ್ರಾವಣ ಬಳಸಬೇಕು. ಇದರಿಂದ ಮೊಗ್ಗು, ಹೂ, ಕಾಯಿ ಉದುರುವಿಕೆ ಕಡಿಮೆಯಾಗುವುದು.
Spread positive news

Leave a Reply

Your email address will not be published. Required fields are marked *