ಈ ಜಿಲ್ಲೆಗಳಿಗೆ ಮತ್ತೆ ಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಹವಾಮಾನ : ರಾಜ್ಯದ ವಿವಿಧೆಡೆ ಮಳೆ ನಿರಂತರವಾಗಿ ಸುರಿಯುತ್ತಿರುವ ನಡುವೆಯೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯ ವಿವಿಧೆಡೆ ಬುಧವಾರ ಸಾಧಾರಣ ಮಳೆಯಾಗಿದೆ. ಹಗಲಿನ ಹೆಚ್ಚಿನ ಅವಧಿಯಲ್ಲಿ ಮೋಡ ಮತ್ತು ಬಿಸಿಲಿನ ವಾತಾವರಣವಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಬಂಟ್ವಾಳ ತಾಲೂಕಿನ ವಿವಿಧೆಡೆ ಮಂಗಳವಾರ ತಡರಾತ್ರಿ ಮತ್ತು ಬುಧವಾರ ಸಂಜೆ ಬಳಿಕ ಸಾಧಾರಣ ಮಳೆ ಸುರಿದಿದೆ. ಮಂಗಳೂರು ತಾಲೂಕಿನ ವಿವಿಧೆಡೆ ಹಗಲು ಮೋಡ ಮತ್ತು ಬಿಸಿಲಿನ ವಾತಾವರಣ ಇದ್ದರೆ, ಸಂಜೆಯ ವೇಳೆ ಕೆಲವೆಡೆ ಲಘು ಮಳೆಯಾಗಿದೆ. ಉಡುಪಿ ಜಿಲ್ಲೆಯಲ್ಲಿಯ ಕೆಲವೆಡೆ ಉತ್ತಮ ಮಳೆಯಾಗಿದೆ.

ಮಂಗಳವಾರ ರಾತ್ರಿ ಹೆಚ್ಚಿನ ಕಡೆ ಉತ್ತಮ ಮಳೆಯಾಗಿತ್ತು. ಉಡುಪಿ, ಮಣಿಪಾಲ ಪರಿಸರದಲ್ಲಿ ಮುಂಜಾವದವರೆಗೂ ಹನಿ ಹನಿ ಮಳೆ ಸುರಿದಿತ್ತು. ಶಿರ್ವದಲ್ಲಿ ಬೆಳಗ್ಗೆ ಮತ್ತು ಸಂಜೆ ಮಳೆ ಸುರಿದಿದೆ. ಮಣಿಪಾಲ ಮತ್ತು ಉಡುಪಿಯಲ್ಲಿ ಬುಧವಾರ ಸಂಜೆಯ ವೇಳೆ ಉತ್ತಮ ಮಳೆಯಾಗಿದೆ. ಹವಾಮಾನ ಇಲಾಖೆಯು ಗುರುವಾರ ಮತ್ತು ಶುಕ್ರವಾರಕ್ಕೆ ಎಲ್ಲೋ ಅಲರ್ಟ್‌ ಘೋಷಿಸಿದೆ. ಈ ಅವಧಿಯಲ್ಲಿ ಕೆಲವು ಪ್ರದೇಶಗಳಲ್ಲಿ ಉತ್ತಮ ಮಳೆಯಾಗುವ ಸಂಭವ ಇದೆ.

ಕರ್ನಾಟಕದ ಕರಾವಳಿ ಹಾಗೂ ಒಳನಾಡಿನ ಅನೇಕ ಜಿಲ್ಲೆಗಳಲ್ಲಿ ಮುಂದಿನ ಏಳು ದಿನಗಳಲ್ಲಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಕೆಲವು ಭಾಗಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಬರುವ ಮುನ್ಸೂಚನೆ ಇದೆ. ಕರಾವಳಿ, ಮಲೆನಾಡಿನಲ್ಲಿ ಗಾಳಿಯ ವೇಗ ಹೆಚ್ಚಾಗಬಹುದೆಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ತಂಪು ವಾತಾವರಣ ಆಗಾಗ ಹಗುರ ಮಳೆ ಆಗುತ್ತಿದೆ. ಈ ಮಳೆ 25ರಂದು ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ತೀವ್ರಗೊಳ್ಳಲಿದೆ. ಈ ಭಾಗದಲ್ಲಿ ಭಾರೀ ಮಳೆಯ ಆಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಗುರದಿಂದ ಸಾಧಾರಣ ಮಳೆ ಸಂಭವವಿದೆ. 27ರಿಂದ 30ರ ಅವಧಿಯಲ್ಲಿ ಮುಂಗಾರು ಮಳೆ ತೀವ್ರತೆ ಹೆಚ್ಚಾಗಲಿದೆ.

ಒಳನಾಡು ಜಿಲ್ಲೆಗಳಲ್ಲಿ ಸಾಧಾರಣ-ಭಾರೀ ಮಳೆ

ಇನ್ನೂ ಒಳನಾಡು ಜಿಲ್ಲೆಗಳ ಪೈಕಿ ಬಾಗಲಕೋಟೆ, ಬೆಳಗಾವಿ, ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ನಿರೀಕ್ಷೆ ಇದೆ. ಅಲ್ಲಲ್ಲಿ ಗುಡುಗು ಮಿಂಚು ಸಹಿತ ವ್ಯಾಪಕ ಮಳೆ ಸಹ ಆಗಬಹುದು. ಸೆಪ್ಟೆಂಬರ್ 26ರ ನಂತರ ಇದೇ ಜಿಲ್ಲೆಗಳಳ್ಲಿ ಭಾರೀ ಮಳೆ ನಿರೀಕ್ಷೆ ಇದೆ ಎಂದು ಐಎಂಡಿ ತಿಳಿಸಿದೆ.

ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಮೈಸೂರು, ತುಮಕೂರು, ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರು, ದಾವಣಗೆರೆ, ಮಂಡ್ಯ, ರಾಮನಗರ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಹಗುರ ಮಳೆ ಆಗಬಹುದು. ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲಿ ಭಾರೀ ಮಳೆ ಸಾಧ್ಯತೆ ಇದ್ದು, ಈ ಭಾಗಗಳಲ್ಲಿ ಸೆಪ್ಟೆಂಬರ್ 26ರಿಂದ ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿಯುವ ಮುನ್ಸೂಚನೆ ಇದೆ.

ಬೆಂಗಳೂರು ಹವಾಮಾನ ಮುನ್ಸೂಚನೆ

ರಾಜಧಾನಿ ಬೆಂಗಳೂರಿನಲ್ಲಿ 48 ಗಂಟೆಗಳ ಕಾಲ ಮೋಡ ಕವಿದ ಆಕಾಶ ಕಂಡ ಬರಲಿದೆ. ವಿವಿಧ ಬಡಾವಣೆಗಳಲ್ಲಿ ಸಾಮಾನ್ಯ, ಕೆಲವೆಡೆ ಜೋರು ಮಳೆ ಸಂಭವವಿದೆ. ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ. ರಾಜ್ಯದಲ್ಲಿ ಕರ್ನಾಟಕದ ಕರಾವಳಿ ಹಾಗೂ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ವಾರ ಮಳೆಯ ಪ್ರಮಾಣ ಹೆಚ್ಚಾಗುವ ನಿರೀಕ್ಷೆಯಿದೆ. ಮೀನುಗಾರರು, ಬೆಳೆ ಬೆಳೆದ ರೈತರು ಹಾಗೂ ವಾಹನ ಸವಾರರು ಜಾಗೃತೆ ವಹಿಸಬೇಕೆಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ನೆನ್ನೆ ಹಲವೆಡೆ ಸಾಮಾನ್ಯ ಮಳೆ ದಾಖಲು, ಎಲ್ಲೆಲ್ಲಿ?

ಕರ್ನಾಟಕದ ಹಲವೆಡೆ ನೆನ್ನೆ ಮಳೆಯಾಗಿದೆ. ಹೋನ್ನಾವರದಲ್ಲಿ 7.7 ಮಿಮೀ, ವಿಜಯಪುರದಲ್ಲಿ 5.2 ಮಿಮೀ ಹಾಗೂ ಬೆಂಗಳೂರಿನ ಕೆಐಎಲ್ ವಿಮಾನ ನಿಲ್ದಾಣದಲ್ಲಿ 2.2 ಮಿಮೀ ಮಳೆಯಾಗಿದೆ. ಕುಡಗಿನಲ್ಲಿ ಗೋಣಿಕೊಪ್ಪಲ್‌ನಲ್ಲಿ 8 ಮಿಮೀ, ಅಗುಂಬೆಯಲ್ಲಿ 10 ಮಿಮೀ, ಮೂಡಿಗೆರೆಯಲ್ಲಿ 1 ಮಿಮೀ ಹಾಗೂ ಚಿಕ್ಕಮಗಳೂರಿನ ಹಾರ್ದನಹಳ್ಳಿಯಲ್ಲಿ 4.5 ಮಿಮೀ ಮಳೆಯಾಗಿದೆ. ಕರಾವಳಿಯಲ್ಲಿ ಮಂಗಳೂರಿನಲ್ಲಿ 3 ಮಿಮೀ ಮಳೆಯಾದರೆ, ಬೆಂಗಳೂರಿನ ಗೋಪಾಲನಗರದಲ್ಲಿ 2.5 ಮಿಮೀ, ಹೆಸರಘಟ್ಟ ಮತ್ತು ದೊಡ್ಡಬಳ್ಳಾಪುರದಲ್ಲಿ ತಲಾ 0.5 ಮಿಮೀ, ರಾಮನಗರದ ಚಂದ್ರಾಯಣಗಲ್ಲಿ ಪ್ರದೇಶದಲ್ಲಿ 1 ಮಿಮೀ ಮತ್ತು ಕೋಲಾರದ ತಮಕದಲ್ಲಿ 1.2 ಮಿಮೀ ಮಳೆಯಾಗಿದೆ. ಉತ್ತರ ಕರ್ನಾಟಕದ ಗಂಗಾವತಿಯಲ್ಲಿ 2 ಮಿಮೀ ಹಾಗೂ ಕಲಬುರಗಿಯ ಆಲಂದ್‌ನಲ್ಲಿ 0.5 ಮಿಮೀ ಮಳೆಯಾಗಿದೆ.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಗಮನಕ್ಕೆ:

ಗ್ರಾಮ ಪಂಚಾಯಿತಿಯ ಚುನಾವಣೆಯಲ್ಲಿ ನೀವು ಮಾಡುವ ಪ್ರಚಾರ ಹಾಗೂ ಪ್ರತಿನಿತ್ಯದ ಕೆಲಸಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಳ್ಳುವುದರಿಂದ ಜನಾಕರ್ಷಣೆ ಆಗುತ್ತದೆ. ಹಾಗೂ ನಿಮ್ಮ ಕಾರ್ಯ ವೈಖರಿ ಜನರಿಗೆ ತಿಳಿದು ಜನ ನಿಮ್ಮನ್ನು ಬೆಂಬಲಿಸಲು ಮುಂದಾಗುತ್ತಾರೆ. ಆದ್ದರಿಂದ ನಿಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬೇಕಾದ ಪೋಸ್ಟರ್ಗಳು ಹಾಗೂ ವಿಡಿಯೋಗಳನ್ನು ನಾವು ಅತ್ಯುತ್ತಮ ಕಡಿಮೆ ದರದಲ್ಲಿ ಮಾಡಿಕೊಡುತ್ತೇವೆ ನಿಮಗೆ ಹಬ್ಬಗಳಿಗೆ ವಿಶೇಷ ಸಂದರ್ಭಗಳಲ್ಲಿ ಅಥವಾ ಹುಟ್ಟುಹಬ್ಬಗಳಲ್ಲಿ ಶುಭಕೋರುವ ಪೋಸ್ಟರ್ಗಳು ಬೇಕಿದ್ದರೆ ಈ ಕೆಳಗೆ ನೀಡಿರುವ ನಂಬರನ್ನು ಸಂಪರ್ಕಿಸಿ. 9845499218

Spread positive news

Leave a Reply

Your email address will not be published. Required fields are marked *