ಪ್ರೀಯ ರೈತರೇ ಇವತ್ತು ನಾವು ನಿಮ್ಮೊಂದಿಗೆ ಮಹತ್ವದ ವಿಷಯ ಚರ್ಚಿಸುತ್ತೇನೆ. Bhoomi land records check ರೈತರು ತಮ್ಮ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಈಗ ಮೊಬೈಲ್ ನಲ್ಲೇ ಪಡೆಯಬಹುದು. ಹೌದು, ರೈತರ ಬಳಿಯಿರುವ ಮೊಬೈಲ್ ನಲ್ಲೇ ಜಮೀನಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಪಡೆಯಬಹುದು.
ರೈತರು ತಮ್ಮ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಲು ಈಗ ಕಚೇರಿಗಳಿಗೆ ಹೋಗಬೇಕಿಲ್ಲ. ನಾಡಕಚೇರಿ, ತಹಶೀಲ್ದಾರ್ ಕಚೇರಿಗಳ ಬಳಿ ಸರದಿಯಲ್ಲಿ ನಿಲ್ಲಬೇಕಿಲ್ಲ. ನಿಮ್ಮ ದಾಖಲೆ ಚೆಕ್ ಮಾಡಲು ಅಧಿಕಾರಿಗಳ ಬಳಿಯೂ ಕೈಕಟ್ಟಿ ನಿಲ್ಲಬೇಕಿಲ್ಲ. ನಿಮ್ಮ ಬಳಿಯಿರುವ ಫೋನ್ ನಲ್ಲೇ ಮನೆಯಲ್ಲಿಯೇ ಕುಳಿತು ಜಮೀನಿಗೆ ಸಂಬಂಧಿಸಿದ ಎಲ್ಲಾ ದಾಖಲೆ ಪಡೆಬಹುದು. ಹೌದು, ಪಹಣಿ, (ಆರ್.ಟಿ.ಸಿ), ಹಳೆ ಪಹಣಿಗಳು, ಮುಟೇಶನ್, ಮುಟೇಶನ್ ಸ್ಟೇಟಸ್, ಖಾತಾ ಜಮೀನಿ ಆಕಾರ್ ಬಂದ್, ಮೋಜಿನಿ ಸ್ಟೇಟಸ್ ಸೇರಿದಂತೆ ಇನ್ನಿತರ ದಾಖಲೆಗಳನ್ನು ಮನೆಯಲ್ಲಿಯೇ ಚೆಕ್ ಮಾಡಬಹುದು.
Bhoomi land records check ಜಮೀನಿಗೆ ಸಂಬಂಧಿಸಿದ ಎಲ್ಲಾ ದಾಖಲೆ ಮೊಬೈಲ್ ನಲ್ಲಿ ಹೇಗೆ ಚೆಕ್ ಮಾಡಬೇಕು?
ರೈತರು ತಮ್ಮ ಜಮೀನಿಗೆ ಸಂಬಂಧಿಸಿದ ದಾಖಲೆ ಪಡೆಯಲು ಈ https://landrecords.karnataka.gov.in/Service2/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಯಾವ ದಾಖಲೆ ನೀವು ಮೊಬೈಲ್ ನಲ್ಲಿ ಚೆಕ್ ಮಾಡಬೇಕೆಂದುಕೊಂಡಿದ್ದೀರೋ ಅದರ ಬಗ್ಗೆ ಆಯ್ಕೆಗಳು ಕಾಣುತ್ತವೆ. ಅಲ್ಲಿ ತೆರೆದುಕೊಳ್ಳುವ ಭೂಮಿ ಆನ್ಲೈನ್ ಲ್ಯಾಂಡ್ ರಿಕಾರ್ಡ್ಸ್ ನಲ್ಲಿ current year RTC, old Year RTC, Mutation (MR), Mutation status, Khata extract, Survey Documents, Akarband ಹೀಗೆ ನಿಮಗೆ ಆಯ್ಕೆಗಳು ಕಾಣಸಿಗುತ್ತವೆ. ಯಾವ ದಾಖಲೆ ನೀವು ಮೊಬೈಲ್ ನಲ್ಲೇ ಚೆಕ್ ಮಾಡಬೇಕೆಂದುಕೊಂಡಿದ್ದೀರೋ ಆ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.
ಉದಾಹರಣೆಗೆ ನೀವು ಈಗಿನ ಪಹಣಿ (current year) ಮೊಬೈಲ್ ನಲ್ಲೇ ಚೆಕ್ ಮಾಡಬೇಕಾದರೆ ನಿಮ್ಮ District ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ Taluk ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ Hobli ಆಯ್ಕೆ ಮಾಡಿಕೊಳ್ಳಬೇಕು. ಇದಾದಮೇಲೆ ನೀವು ನಿಮ್ಮ Village ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ಯಾವ ಜಮೀನಿನ Survey Number ಪಹಣಿ ಚೆಕ್ ಮಾಡಬೇಕೆಂದುಕೊಂಡಿದ್ದೀರೋ ಆ ಸರ್ವೆ ನಂಬರ್ ಹಾಕಬೇಕು. ನಂತರ Go ಮೇಲೆ ಕ್ಲಿಕ್ ಮಾಡಬೇಕು. Surnoc, ನಲ್ಲಿ ಸ್ಟಾರ್ (*) ಆಯ್ಕೆ ಮಾಡಿಕೊಳ್ಳಬೇಕು. Hissa No (*) ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. Period ನಲ್ಲಿ 2021to till date (2022-2023) ಆಯ್ಕೆ ಮಾಡಿಕೊಳ್ಳಬೇಕು. Year ನಲ್ಲಿ 2022-2023 ಆಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ Fetch details ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ನಮೂದಿಸಿದ ಸರ್ವೆ ನಂಬರಿನಲ್ಲಿ ಜಮೀನಿನ ಮಾಲಿಕರ ಹೆಸರು ಹಾಗೂ ತಂದೆಯ ಹೆಸರು ಕಾಣುತ್ತದೆ. ಅದರ ಕೆಳಗಡೆ ಕಾಣುವ view ಮೇಲೆ ಕ್ಲಿಕ್ ಮಾಡಬೇಕು.
ರೈತರು ತಮ್ಮ ಜಮೀನು ಇನ್ನೊಬ್ಬರಿಂದ ಅಥವಾ ಅಕ್ಕಪಕ್ಕದವರು ಒತ್ತುವರಿ ಮಾಡಿಕೊಂಡರೆ ಅರ್ಜಿ ಎಲ್ಲಿ ಹೇಗೆ ಸಲ್ಲಿಸಬೇಕೆಂಬುದರ ಮಾಹಿತಿ ಇಲ್ಲಿದೆ.
ಈಗ ತೆಂತ್ರಜ್ಞಾನ ಎಷ್ಟರಮಟ್ಟಗೆ ಬೆಳೆದಿದೆಯೆಂದರೆ ತಮ್ಮ ಬಳಿ ಮೊಬೈಲ್ ಇದ್ದರೆ ಸಾಕು, ಕ್ಷಣಮಾತ್ರದಲ್ಲಿ ಎಲ್ಲಾ ಮಾಹಿತಿಯನ್ನು ಒಂದೇ ನಿಮಿಷದಲ್ಲಿ ಪಡೆದುಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ಮಾಹಿತಿ.
ಜಮೀನಿಗೆ ಸಂಬಂಧಿಸಿದ ಮಾಹಿತಿಗಳನ್ನು ರೈತರು ಮೊಬೈಲ್ ನಲ್ಲೇ ಪಡೆಯಲು ಈಗ ಹಲವಾರು ಆ್ಯಪ್ ಗಳು ಬಂದಿವೆ. ಅದರಲ್ಲಿ ವಿಶೇಷವಾಗಿ ದಿಶಾಂಕ್ ಆ್ಯಪ್ ಸಹ ಒಂದಾಗಿದೆ. ಈ ಆ್ಯಪ್ ಸಹಾಯದಿಂದ ರೈತರು ಕರ್ನಾಟಕದ ಯಾವುದೇ ಮೂಲೆಯಲ್ಲಿ ನಿಂತುಕೊಳ್ಳಲಿ ಆ ಜಮೀನಿನ ಮಾಲಿಕರು ಯಾರು ಹಾಗೂ ಸರ್ವೆ ನಂಬರ್ ಏನಿದೆ? ಎಂಬುದನ್ನು ಸುಲಭವಾಗಿ ಚೆಕ್ ಮಾಡಬಹುದು.
Check land information within a minute ನೀವು ನಿಂತುಕೊಂಡಿರುವ ಜಮೀನಿನ ಮಾಲಿಕರು ಯಾರಿದ್ದಾರೆ? ಚೆಕ್ ಮಾಡಿ?
ರೈತರು ತಾವು ನಿಂತುಕೊಂಡಿರುವ ಜಮೀನಿನ ಮಾಲಿಕರು ಯಾರಿದ್ದಾರೆಂಬುದನ್ನು ಚೆಕ್ ಮಾಡಲು ಈ
https://play.google.com/store/apps/details?id=com.ksrsac.sslr&hl=en_IN&pli=1
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಒಗ ದಿಶಾಂಕ್ ಆ್ಯಪ್ ತೆರೆದುಕೊಳ್ಳುತ್ತದೆ. ಆಗ ನೀವು install ಮೇಲೆ ಕ್ಲಿಕ್ ಮಾಡಬೇಕು. ನಂತರ ಓಪನ್ ಮೇಲೆ ಕ್ಲಿಕ್ ಮಾಡಿ ವೈಲ್ ಯೂಸಿಂಗ್ ದಿ ಆ್ಯಪ್ ಮೇಲೆ ಕ್ಲಿಕ್ ಮಾಡಿ ನೀವು ಯಾವ ಭಾಷೆಯಲ್ಲಿ ಮಾಹಿತಿ ನೋಡಬೇಕೆಂದುಕೊಂಡಿದ್ದೀರೋ ಆ ಭಾಷೆ ಆಯ್ಕೆ ಮಾಡಿಕೊಳ್ಳಬೇಕು. ನೀವು ಇಂಗ್ಲೀಷ್ ಅಥವಾ ಕನ್ನಡ ಆಯ್ಕೆ ಮಾಡಿಕೊಳ್ಳಬಹುದು.
ನೀವು ನಿಮ್ಮ ಹೆಸರು ಬರೆಯಬೇಕು. ಈ ಮೇಲ್ ಐಡಿಯನ್ನ ನಮೂದಿಸಬೇಕು. ನಂತರ ನಿಮ್ಮ ಮೊಬೈಲ್ ನಂಬರ್ ಹಾಕುವುದು ಕಡ್ಡಾಯವಾಗಿದೆ. ಆಗ ನಿಮ್ಮ ಮೊಬೈಲಿಗೆ ಓಟಿಪಿ ಕಳುಹಿಸಲಾಗುವುದು. ಹಾಗಾಗಿ ಓಟಿಪಿ ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದ. ಅದನ್ನು ನಮೂದಿಸಿ ನೋಂದಾಯಿಸಿ ಮೇಲೆ ಕ್ಲಿಕ್ ಮಾಡಿದರೆ ಸಾಕು, ನಿಮ್ಮ ಮೊಬೈಲ್ ನಲ್ಲಿ ದಿಶಾಂಕ್ ಆ್ಯಪ್ ಇನ್ಸಾಟಾಲ್ ಆಗುತ್ತದೆ. ಆಗ ನೀವು ಯಾವ ಜಮೀನಿನಲ್ಲಿ ನಿಂತಿರುತ್ತೀರೋ ಆ ಜಮೀನಿನ ಪಾಯಿಂಟ್ ಕಾಣಿಸುತ್ತದೆ. ಅಂದರೆ ಯಾವ ಸರ್ವೆ ನಂಬರ್ ನಲ್ಲಿ ನಿಂತಿರುತ್ತೀರೋ ಆ ಸರ್ವೆ ನಂಬರ್ ನಿಮಗೆ ಕಾಣಿಸುತ್ತದೆ.
ರೈತರು ತಮ್ಮ ಜಮೀನಿನ ಪಹಣಿಯಲ್ಲಿ ತೋರಿಸಿದಷ್ಟು ಎಕರೆ ಇರುವುದಿಲ್ಲ. ಪಹಣಿಯಲ್ಲಿ ಜಮೀನು ಹೆಚ್ಚಿರುತ್ತದೆ. ಆದರೆ ವಾಸ್ತವದಲ್ಲಿ ಆ ಜಮೀನು ಕಡಿಮೆಯಾಗಿರುತ್ತದೆ. ಹೀಗಾಗಿ ಕೆಲವು ರೈತರು ಯಾರಿಗೆ ಅರ್ಜಿ ಸಲ್ಲಿಸಬೇಕು? ಇದಕ್ಕೆ ಅರ್ಜಿ ಸಲ್ಲಿಸಬಹುದು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಜಮೀನು ಒತ್ತುವರಿ ಎಂದರೇನು?
ಜಮೀನು ಅಥವಾ ಖಾಲಿ ನಿವೇಶನಗಳನ್ನು ಅಕ್ಕಪಕ್ಕದವರು ಅತಿಕ್ರಮಣ ಅಥವಾ ಒತ್ತುವರಿ ಮಾಡಿಕೊಂಡು ಆ ಜಾಗದ ಸುಪರ್ದಿಯನ್ನು ತಾವೇ ಪಡೆದುಕೊಂಡು ಅಸಲಿ ಮಾಲಿಕನಿಗೆ ದೂರ ಇಡುವುದನ್ನು ಜಮೀನು ಒತ್ತುವರಿ ಅಥವಾ ಅತಿಕ್ರಮಣ ಎನ್ನುವರು.
ಪ್ರತಿ ಜಮೀನಿಗೆ ಹದ್ದುಬಸ್ತು ಇದ್ದೇ ಇರುತ್ತದೆ. ಅಂದರೆ ಸರ್ವೆ ದಾಖಲೆಗಳ ಪ್ರಕಾರ ಜಮೀನು ಅಳತೆಯಾಗಿರುತ್ತದೆ. ಆಯಾ ಜಮೀನಿನ ಗಡಿ ಭಾಗವನ್ನು ಪತ್ತೆಹಚ್ಚಿ ಗುರುತು ಸಹ ಮಾಡಲಾಗಿರುತ್ತದೆ. ಆದರೆ ಈ ಜಮೀನು ಒತ್ತುವರಿಯಾಗಿದ್ದರೆ ಅಳತೆ ಮಾಡಿ ನಿಖರ ಗಡಿ ಗುರುತಿಸಿ ಬಂದೋಬಸ್ತ್ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಹದ್ದುಬಸ್ತು ಎನ್ನುವರು.
Apply for land occupy ಅರ್ಜಿ ಸಲ್ಲಿಸಿದ ನಂತರ ಭೂ ಮಾಪಕರ ಪ್ರಕ್ರಿಯೆ ಹೇಗಿರುತ್ತದೆ?
ರೈತರು ಅರ್ಜಿಯನ್ನು ತಮ್ಮ ಹತ್ತಿರದ ನಾಡ ಕಚೇರಿ ಅಥವಾ ತಹಶೀಲ್ದಾರಾ ಕಚೇರಿಯಲ್ಲಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ನಂತರ ಸ್ವೀಕೃತಿ ರಸೀದಿ ಪಡೆದುಕೊಳ್ಳಬಹುದು. ಅರ್ಜಿ ಸಲ್ಲಿಸಿದ ನಂತರ ಭೂ ಮಾಪಕರು ತಮ್ಮ ಜಮೀನಿಗೆ ಬರುವ ಮಾಹಿತಿಯನ್ನು ಸಹ ಫೋನ್ ಕರೆ ಮಾಡಿ ತಿಳಿಸಬಹುದು. ಅಂದರೆ ಒಂದು ದಿನಾಂಕ ನಿಗದಿಪಡಿಸಬಹುದು.
ಅರ್ಜಿ ಸಲ್ಲಿಸಿದ ನಂತರ ಅರ್ಜಿಯ ಪ್ರಕಾರ ಅಕ್ಕಪಕ್ಕದ ಜಮೀನಿನ ಮಾಲಿಕರಿಗೆ ಮುಂಚಿತವಾಗಿ ನೋಟಿಸ್ ಸಹ ಕಳಿಸಲಾಗುವುದು. ಜಮೀನಿನ ಸರ್ವೆಯನ್ನು ಎಲ್ಲಾ ಜಮೀನಿನ ಮಾಲಿಕರ ಸಮ್ಮುಖದಲ್ಲಿಮಾಡುವರು. ಅಳತೆ ಮಾಡಿದ ನಂತರ ಜಮೀನು ಒತ್ತುವರಿಯಾಗಿದ್ದರೆ ತಿಳಿಸುವರು. ಹಾಗೂ ಹದ್ದುಬಸ್ತು ಕಲ್ಲುಗಳನ್ನಿಟ್ಟು ಹೋಗುವರು. ಈ ಆಧಾರದ ಮೇಲೆ ತಮ್ಮ ಜಮೀನು ಒತ್ತುವರಿಯಾಗಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು.
Apply for land occupy ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆಗಳು ಬೇಕು?
ಅರ್ಜಿ ಸಲ್ಲಿಸಲು ಸಹಜವಾಗಿ ಆಧಾರ್ ಕಾರ್ಡ್ ಕಡ್ಡಾಯವಾಗಿರುತ್ತದೆ. ಇದರೊಂದಿಗೆ ಜಮೀನಿನ ಪಹಣಿ (ಆರ್.ಟಿ.ಸಿ) ಸಲ್ಲಿಸಬೇಕಾಗುತ್ತದೆ. ಇದರೊಂದಿಗೆ ಅರ್ಜಿಯೊಂದಿಗೆ ಯಾವ ಯಾವ ದಾಖಲೆಗಳನ್ನು ಲಗತ್ತಿಸಬೇಕೆಂಬುದರ ಕುರಿತು ಅರ್ಜಿಯಲ್ಲಿ ತಿಳಿಸಿರುತ್ತಾರೆ. ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸುವುದನ್ನು ಮರೆಯಬಾರದು. ಅರ್ಜಿಯಲ್ಲಿ ಒತ್ತುವರಿಯಾಗಿರುವ ಜಮೀನಿನ ಸರ್ವೆ ನಂಬರ್, ಚೆಕ್ಕುಬಂದಿ, ಅಕ್ಕಪಕ್ಕದ ರೈತರ ಸರ್ವೆ ನಂಬರ್ ಹಾಗೂ ಜಮೀನಿನ ಮಾಲಕರ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ.
ಅರ್ಜಿಯೊಂದಿಗೆ ಭೂ ಒತ್ತುವರಿಗೆ ನಿಗದಿಪಡಿಸಲಾದ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಾಡಕಚೇರಿ ಅಥವಾ ತಹಶೀಲ್ದಾರ ಕಚೇರಿಯಲ್ಲಿರುವ ಭೂ ಮಾಪಕ ಅಧಿಕಾರಿಗಳಿಗೆ ಸಂಪರ್ಕಿಸಬಹುದು.