ಸ್ವಾತಂತ್ರ್ಯ ದಿನಾಚರಣೆ: ಬ್ರಿಟಿಷರನ್ನು ನಡುಗಿಸಿದ ಕರ್ನಾಟಕದ ಹೋರಾಟಗಳು ಇಲ್ಲಿವೆ ನೋಡಿ

ಪ್ರೀಯ ಸಾರ್ವಜನಿಕರೇ ಇವತ್ತು ನಾವು ದೇಶಭಕ್ತರನ್ನು ಸ್ಮರಿಸುವ ಒಂದು ಮಹತ್ವದ ದಿನ ದೇಶಕ್ಕಾಗಿ ಹಲವಾರು ಹೋರಾಟ ಸ್ವಾತಂತ್ರ್ಯ ಪಡೆಯುವುದಕ್ಕಾಗಿ ಹಲವಾರು ಮಹನೀಯರು ತಮ್ಮ ಹೋರಾಡಿದರು. ದೇಶಾದ್ಯಂತ ಬ್ರಿಟಿಷರ ವಿರುದ್ಧ ಭಾರತೀಯರ ಸ್ವಾತಂತ್ರ್ಯ ಕಹಳೆ ಮೊಳಗಿದ್ದ ಸಂದರ್ಭದಲ್ಲಿಯೇ ಕರ್ನಾಟಕದಲ್ಲೂಅದರ ಕೂಗು ಪ್ರತಿಧ್ವನಿಸಿತ್ತು. ಕರುನಾಡಿನ ಉದ್ದಗಲಕ್ಕೂ ಜನನಾಯಕರು, ವಿದ್ಯಾರ್ಥಿಗಳು, ಮಹಿಳೆಯರು ಒಟ್ಟಿನಲ್ಲಿ ಜನಸಾಮಾನ್ಯರ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಳು ಬ್ರಿಟಿಷರನ್ನು ಕಂಗೆಡಿಸಿದವು.

ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಕೆಲವರು: ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಮತ್ತು ಕಾರ್ನಾಡ್ ಸದಾಶಿವ ರಾವ್. ಇವರು ಕರ್ನಾಟಕದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಫ್ರಿಡಮ್ ಪಾರ್ಕ್, ಬೆಂಗಳೂರು –
ಬೆಂಗಳೂರಿನ ಪ್ರಸಿದ್ಧ ಫ್ರೀಡಂ ಪಾರ್ಕ್ ಈ ಮುಂಚೆ 1866 ರಲ್ಲಿ ಬ್ರಿಟಿಷ್ ಸರ್ಕಾರದಿಂದ ನಿರ್ಮಿಸಲಾದ ಸೆಂಟ್ರಲ್ ಜೈಲ್ ಆಗಿತ್ತು. ಸ್ವಾತಂತ್ರ್ಯ ಚಳವಳಿಯು ವೇಗವನ್ನು ಪಡೆದುಕೊಂಡಂತೆ, ಈ ಜೈಲಿನಲ್ಲಿ ಹೆಚ್ಚು ಹೆಚ್ಚು ಕೈದಿಗಳನ್ನು ಇರಿಸಲಾಗುತ್ತಿತ್ತು. ಇದು ಸುಮಾರು 2000 ದವರೆಗೂ ಸೆಂಟ್ರಲ್ ಜೈಲ್ ಆಗಿ ಬಳಕೆಯಲ್ಲಿತ್ತು ಆದರೆ ನಂತರ ಅದನ್ನು ಮ್ಯೂಸಿಯಂ ಆಗಿ ಪರಿವರ್ತಿಸಿ ಫ್ರಿಡಮ್ ಪಾರ್ಕ್ ಎಂದು ಹೆಸರಿಸಲಾಯಿತು. ಫ್ರೀಡಂ ಪಾರ್ಕ್ ಇಂದು ಅತ್ಯಾಧುನಿಕ ಮಾಹಿತಿ ಕಾರಿಡಾರ್, ಮ್ಯೂಸಿಯಂ ಮತ್ತು ಆರ್ಟ್ ಗ್ಯಾಲರಿಯನ್ನು ಹೊಂದಿದೆ. ಈ ಐತಿಹಾಸಿಕ ಸ್ಥಳದ ಒಂದು ಭಾಗವನ್ನು ಈಗ ಪ್ರತಿಭಟನೆಗಳು ಮತ್ತು ರ್ಯಾಲಿಗಳಿಗಾಗಿ ಗುರುತಿಸಲಾಗಿದೆ. ಇದರಿಂದ ನಗರದಲ್ಲಿ ಟ್ರಾಫಿಕ್ ದಟ್ಟಣೆಯನ್ನು ತಪ್ಪಿಸಬಹುದು.

ಪ್ರಬಂಧ ಮುಖೇನ ಪ್ರತಿಭಟನೆ (ಬಳ್ಳಾರಿ) –
ನಲವತ್ತರ ದಶಕದಲ್ಲಿ ಬಳ್ಳಾರಿಯಲ್ಲಿ ಬ್ರಿಟಿಷರು ಹೇರಿದ್ದ ಸುಂಕವನ್ನು ನಿರಾಕರಿಸಿ ಆರಂಭಗೊಂಡಿದ್ದ ಚಳವಳಿ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಕ್ವಿಟ್‌ ಇಂಡಿಯಾ ಚಳವಳಿಯ ಭಾಗವಾಗಿ ಹೋರಾಟಗಾರರು ಸ್ಥಳೀಯ ಅಂಚೆ ಕಚೇರಿಗಳ ಮೇಲೆ ದಾಳಿ ಮಾಡಿ ಟಪಾಲುಗಳನ್ನು ಸುಟ್ಟು ಹಾಕಿದ ಘಟನೆಗಳು ವರದಿಯಾದುವು.

ಜನರು ತಮ್ಮದೇ ಆದ ರೀತಿಯಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಕೈಗೊಂಡರು. ಗುರುಹಿರಿಯರೇ ಸ್ವಾತಂತ್ರ್ಯ ಹೋರಾಟದಲ್ಲ ತೊಡಗಿದ್ದ ಸಮಯದಲ್ಲಿ ವಿದ್ಯಾರ್ಥಿಗಳೂ ಕೈಕಟ್ಟಿ ಕೂರಲಿಲ್ಲ. ಯುವಕ ಯುವತಿಯರು ಪ್ರತಿಭಟನೆಗೆ ಧುಮ್ಮಿಕ್ಕಿದ್ದು ಒಂದೆಡೆಯಾದರೆ ವಿದ್ಯಾರ್ಥಿಗಳು ಶೈಕ್ಷಣಿಕವಾಗಿಯೂ ತಮ್ಮ ವಿರೋಧ ತೋರ್ಪಡಿಸಿದ್ದು ಗಮನ ಸೆಳೆದರು.

ನಗರದ ಅಲಬೂರು ನಂಜಪ್ಪ, ಅರಸನಾಳು ಎ.ಬಿ.ಆರ್‌.ಕೊಟ್ರಗೌಡ ಮತ್ತು ಕೋ.ಚನ್ನಬಸಪ್ಪ ಅವರು 1942ರಲ್ಲಿಅನಂತಪುರ ಕಾಲೇಜಿನಲ್ಲಿಅಭ್ಯಾಸ ಮಾಡುತ್ತಿದ್ದ ವೇಳೆ ಅರ್ಧ ವಾರ್ಷಿಕ ಪರೀಕ್ಷೆ ನಡೆಯಿತು. ಬ್ರಿಟಿಷರ ದಬ್ಬಾಳಿಕೆಯ ಬಗ್ಗೆ ಒಬ್ಬರು, ಉಳಿದಿಬ್ಬರು ‘ಬ್ರಿಟಿಷ್‌ ಆಳ್ವಿಕೆಯಲ್ಲಿಭಾರತೀಯ ಸಂಸ್ಕೃತಿಯ ದುರಂತ’ ಹಾಗೂ ಮತ್ತೊಬ್ಬ ವಿದ್ಯಾರ್ಥಿ ‘ಎ ಕೇಸ್‌ ಫಾರ್‌ ಇಂಡಿಯನ್‌ ಇಂಡಿಪೆಂಡೆಸ್ಸ್‌’ ಎನ್ನುವ ಪ್ರಬಂಧ ಬರೆದರು. ಪ್ರಬಂಧದ ಕೊನೆಯಲ್ಲಿಯಾವುದೇ ಪದವಿ ಗಳಿಸಿದರೂ ಬ್ರಿಟಿಷರ ಅಧೀನದಲ್ಲಿನೌಕರಿ ಮಾಡುವುದಿಲ್ಲಎನ್ನುವ ಪ್ರತಿಜ್ಞೆ ಮಾಡಿದ್ದಕ್ಕೆ ಜೈಲುವಾಸಕ್ಕೂ ಗುರಿಯಾದರು.

ಮತ್ತೊಬ್ಬ ವೀರ ಮಹಿಳಾ ಯೋಧ ಒನಕೆ ಓಬವ್ವ, ಚಿತ್ರದುರ್ಗ ಸಾಮ್ರಾಜ್ಯದ ಮೇಲೆ ಬ್ರಿಟಿಷ್ ಸೈನ್ಯ ದಾಳಿ ಮಾಡಿದಾಗ ಏಕಾಂಗಿಯಾಗಿ ಹೋರಾಡಿ ತನ್ನ ಶೌರ್ಯವನ್ನು ಜಗತ್ತಿಗೆ ತೋರಿಸಿದಳು. ಅವಳ ಶೌರ್ಯವನ್ನು ಸ್ಮರಿಸಲು ನೀವು ಚಿತ್ರದುರ್ಗದ ಕೋಟೆಗೆ ಭೇಟಿ ನೀಡಲೇ ಬೇಕು.

ಮಂಗಳೂರು ಅನೇಕ ಸ್ವಾತಂತ್ರ್ಯ ಹೋರಾಟಗಳ ಮತ್ತು ವ್ಯಕ್ತಿಗಳ ನೆಲೆ ಆಗಿದೆ. ಕರ್ನಾಟಕದ ಖ್ಯಾತ ಸ್ವಾತಂತ್ರ್ಯ ಹೋರಾಟಗಾರ ಮಂಗಳೂರಿನ ಕಾರ್ನಾಡ್ ಸದಾಶಿವ ರಾವ್ ಅವರು ವಿಧವೆಯರು ಮತ್ತು ಬಡ ಮಹಿಳೆಯರಿಗೆ ಸಹಾಯ ಮಾಡಲು ಮಹಿಳಾ ಸಭಾವನ್ನು ಸ್ಥಾಪಿಸಿದರು. ಅವರು ಮಹಾತ್ಮ ಗಾಂಧಿಯವರ ಸತ್ಯಾಗ್ರಹ ಚಳವಳಿಗೆ ಸ್ವಯಂಸೇವಕರಾಗಿ ಹೋದ ಕರ್ನಾಟಕದ ಮೊದಲಿಗರು ಎಂದು ಅವರು ಪ್ರಸಿದ್ಧರಾಗಿದ್ದಾರೆ. ಬೆಂಗಳೂರಿನ ಸದಾಶಿವನಗರ ಮತ್ತು ಮಂಗಳೂರಿನ ಕೆಎಸ್ ರಸ್ತೆಗೆ ಕಾರ್ನಾಡ್ ಸದಾಶಿವ ರಾವ್ ಅವರ ಗೌರವಾರ್ಥವಾಗಿ ಹೆಸರಿಡಲಾಗಿದೆ. ಮಂಗಳೂರಿನ ಮಹಾನ್ ಮಹಿಳಾ ಹೋರಾಟಗಾರ್ತಿ ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು. ಅವರು ನಮಗೆ ಸ್ವಾತಂತ್ರ್ಯ ದೊರಕಿದ ನಂತರ ಮಹಿಳೆಯರಿಗಾಗಿ ಕರಕುಶಲ, ಕೈಮಗ್ಗ ಚಟುವಟಿಕೆಗಳನ್ನು ಉತ್ತೇಜಿಸಿ ಅವರನ್ನು ಸಾಮಾಜಿಕ ಮತ್ತು ಆರ್ಥಿಕವಾಗಿ ಸದೃಢಗೊಳಿಸಿದರು.

ನಿಜಾಮರಿಗೆ ಎದುರಾಗಿ ಧ್ವಜ ಹಾರಿಸಿದ ಪಂಚಾಕ್ಷರ (ಕೊಪ್ಪಳ) –
ಕಲ್ಯಾಣ ಕರ್ನಾಟಕ ಸ್ವತಂತ್ರಗೊಂಡಿದ್ದು 1948ರ, ಸೆ.17ರಲ್ಲಿ. ಇಡೀ ಭಾರತ 1947ರ ಅ.15ರಂದು ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿದ್ದರೆ ಕಲ್ಯಾಣ ಕರ್ನಾಟಕ ಇನ್ನೂ ದಾಸ್ಯದ ಸಂಕೋಲೆಯಲ್ಲೇ ಇತ್ತು. ಹೈದರಾಬಾದ್‌ ನಿಜಾಮ, ದೇಶದ ಸ್ವಾತಂತ್ರ್ಯ ಸಂಭ್ರಮಿಸಿದಂತೆ ಕಟ್ಟಪ್ಪಣೆ ಹೊರಡಿಸಿದ್ದ. ನಿಜಾಮನ ಸೈನಿಕರು ಎಲ್ಲಡೆ ಬಿಗಿ ಕಾವಲು ಕಾಯುತ್ತಿದ್ದರು. ಜನರು ತಮ್ಮ ಮನಸ್ಸಿನೊಳಗಿನ ರೋಷಾವೇಶ ಅದುಮಿಟ್ಟುಕೊಂಡರು.

ಈ ಸಂದರ್ಭದಲ್ಲಿ ಕೊಪ್ಪಳ ತಾಲೂಕಿನ ಬಿಸರಳ್ಳಿ ಗ್ರಾಮದ 15ರ ಪೋರ ಪಂಚಾಕ್ಷರ ಹಿರೇಮಠ ಅವರು, 1947, ಆ. 15ರ ಮುಂಜಾನೆ 4 ಗಂಟೆಗೆ ಕೊಪ್ಪಳ ಕೋಟೆಯ ಮೇಲೆ ಭಾರತಾಂಬೆಯ ಧ್ವಜ ಹಾರಿಸಿ ಕಿಚ್ಚು ಪ್ರದರ್ಶಿಸಿದರು. ನಿಜಾಮರ ಆಜ್ಞೆಯನ್ನು ಲೆಕ್ಕಿಸದೆ ಧೈರ್ಯ ತೋರಿದ ಪುಟ್ಟ ಬಾಲಕನೊಬ್ಬ ಊರಿನವರಲ್ಲಿಸ್ವಾತಂತ್ರ್ಯ ಸಂಗ್ರಾಮದ ಕಿಚ್ಚನ್ನೂ ಬೆಳಗಿಸುವಲ್ಲಿಯಶಸ್ವಿಯಾಗಿದ್ದ. ಇದರಿಂದ ನಿಜಾಮನ ಸೈನಿಕರಿಗೆ ಮುಖಭಂಗವಾದಂತಾಯಿತು. ಕುಪಿತಗೊಂಡ ಅವರು ಬಾಲಕ ಪಂಚಾಕ್ಷರ ಹಿರೇಮಠನನ್ನು ಬಂಧಿಸಿದರು. ಆದರೇನಂತೆ ಅವನು ಹೊತ್ತಿಸಿದ ಕಿಚ್ಚು ಭವಿಷ್ಯದ ಯುವಪೀಳಿಗೆಗೆ ಮಾದರಿಯಾಯಿತು.
ವಂದೇ ಮಾತರಂ ಹಾಡಿ ಆಂಗ್ಲರ ಕಾಡಿದ ಶರಣ (ಕಲಬುರಗಿ)

ಭಾರತೀಯರಲ್ಲಿ ಹರಡುತ್ತಿದ್ದ ದೇಶಭಕ್ತಿಯ ಕಾವು ಆಂಗ್ಲರನ್ನು ಥರಗುಟ್ಟಿಸಿತ್ತು. ಹೀಗಾಗಿ ದೇಶಭಕ್ತಿಯನ್ನು ಹತ್ತಿಕ್ಕಲು ಅವರು ಇನ್ನಿಲ್ಲದಂತೆ ಪ್ರಯತ್ನಿಸಿದರು. ಅದಕ್ಕಾಗಿಯೇ ವಂದೇ ಮಾತರಂ ಗೀತೆ ಹಾಡುವುದಕ್ಕೂ ನಿರ್ಬಂಧಾಜ್ಞೆ ವಿಧಿಸಿದ್ದರು.

ಆದರೆ, ಕಲಬುರಗಿಯ ಇಂಟರ್‌ಮೀಡಿಯೆಟ್‌ ವಿದ್ಯಾರ್ಥಿ ಶರಣಗೌಡ ಇನಾಮದಾರ ಅದನ್ನು ಮೀರಿ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾದರು. ಪೊಲೀಸರು ಶರಣಗೌಡರನ್ನು ಬಂಧಿಸಿ ಬಳಿಕ ವಿದ್ಯಾರ್ಥಿ ಎನ್ನುವ ಕಾರಣಕ್ಕೆ ಬಿಡುಗಡೆ ಮಾಡಿದ್ದರು. ಮುಂದೆ ಅವರು ಇನ್ನಷ್ಟು ಬ್ರಿಟಿಷ್‌ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡರು. ಮುಂಬಯಿಯಲ್ಲಿ ನಡೆದ ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಂಡರು.

ಭೂಗತವಾಗಿಯೇ ಕೆಲಸ ಮಾಡಿ ಸ್ವಾತಂತ್ರ್ಯದ ಕಿಚ್ಚು ಹಳ್ಳಿ ಹಳ್ಳಿಗಳಲ್ಲೂಹರಡುವಂತೆ ಪ್ರೇರಣೆ ನೀಡಿದರು. ಆಳಂದ ತಾಲೂಕಿನ ಹಡಗಲಿಯಲ್ಲಿಜನರನ್ನು ಸೇರಿಸಿ ತ್ರಿವರ್ಣ ಧ್ವಜ ಏರಿಸಿದ್ದು ಅವರ ಸಾಹಸಗಳಲ್ಲೊಂದು. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂದು ಬ್ರಿಟಿಷರು ಪರಿತಪಿಸುವಂತೆ ಮಾಡಿದ್ದು ಶರಣಗೌಡ ಇನಾಮದಾರರ ಹೆಗ್ಗಳಿಕೆ.

ಈಚಲ ಮರಗಳಿಗೆ ಶಿಗ್ಗಾವಿಯ ಗಾಂಧಿವಾದಿಯ ಕೊಡಲಿ ಪೆಟ್ಟು (ಹಾವೇರಿ) –
ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ತರ ಪಾತ್ರ ವಹಿಸಿಯೂ ಬೆಳಕಿಗೆ ಬಾರದ ಅಸಂಖ್ಯ ಸ್ವಾತಂತ್ರತ್ರ್ಯ ಹೋರಾಟಗಾರರ ಪೈಕಿ ಶಿಗ್ಗಾವಿ ತಾಲೂಕಿನ ಅನಂತ ಭಟ್‌ ಹುರಳಿಕುಪ್ಪಿ ಅವರೂ ಒಬ್ಬರು. ಅನಂತ ಭಟ್‌ ಹುರಳಿಕುಪ್ಪಿ ಅವರು ಗಾಂಧೀಜಿಯವರ ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ, ಕರ ನಿರಾಕರಣೆ ಮೊದಲಾದ ಸೌಮ್ಯ ಹೋರಾಟಗಳಿಂದ ಆಕರ್ಷಿತರಾಗಿದ್ದರು. ಪಿಕೆಟಿಂಗ್‌, ವಿದೇಶಿ ಬಟ್ಟೆಗಳ ಬಹಿಷ್ಕಾರ ಮೊದಲಾದ ಚಳವಳಿಗಳಲ್ಲಿ ತೊಡಗಿಸಿಕೊಂಡರು.

1929 ರಲ್ಲಿ ನಡೆದ ಲಾಹೋರ್‌ ಕಾಂಗ್ರೆಸ್‌ ಅಧಿವೇಶನದಲ್ಲಿ ನೀಲಕಂಠರಾವ್‌ ಹಳೆಪೇಟಿ ಅವರ ಜತೆ ಶಿಗ್ಗಾವಿಯ ಪ್ರತಿನಿಧಿಯಾಗಿ ಪಾಲ್ಗೊಂಡರು. ಹಾನಗಲ್‌ ತಾಲೂಕಿನ ನೀರಲಗಿ ಗ್ರಾಮದಲ್ಲಿ ಸೇಂದಿ ತಯಾರಿಸುವ ಸಾವಿರಾರು ಈಚಲು ಮರಗಳನ್ನು ಕಡಿದು ಹಾಕುವಲ್ಲಿಪ್ರಮುಖ ಪಾತ್ರ ವಹಿಸಿದರು. ಅದಕ್ಕಾಗಿ ಹಿಂಡಲಗಾ ಜೈಲಿಯಲ್ಲಿಒಂದೂವರೆ ವರ್ಷಗಳ ಸೆರೆವಾಸವನ್ನು ಎದುರಿಸಿದರು. 1939 ರಲ್ಲಿ ತ್ರಿಪುರಾದಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನದಲ್ಲಿ ಕೆಪಿಸಿಸಿಯ ಚುನಾಯಿತ ಸದಸ್ಯರಾಗಿ ಪಾಲ್ಗೊಂಡರು.

ಸಂಗ್ರಾಮದ ಕಥೆ ಹೇಳುವ ರಾಮಸ್ವಾಮಿ ಸರ್ಕಲ್‌ (ಮೈಸೂರು) –
1946ರಲ್ಲಿ ಮೈಸೂರು ಚಲೋ ಚಳವಳಿ ಆರಂಭಗೊಂಡಿತು. ಈ ಚಳಧಿವಧಿಳಿಯ ಭಾಧಿಗಧಿವಾಗಿ 5ರಂದು ಬೆಳಗ್ಗೆ 11 ಗಂಟೆಗೆ ವಿದ್ಯಾರ್ಥಿಗಳು ಮೈಸೂರಿನ 100 ಅಡಿ ರಸ್ತೆಯ ಐದು ದೀಪದ ಹತ್ತಿರ ಮುಷ್ಕರಕ್ಕೆ ಸಜ್ಜುಗೊಂಡರು. ಆ ವೇಳೆ ಸಂಬಂಧಿಕರ ಮನೆಯಲ್ಲಿದ್ದುಕೊಂಡು ಮೈಸೂರಿನ ಹಾಡ್ರ್ವಿಕ್‌ ಶಾಲೆಯಲ್ಲಿಅಧ್ಯಯನ ಮಾಡುಧಿತ್ತಿಧಿದ್ದ ರಾಮಸ್ವಾಮಿ ಎಂಬ ವಿದ್ಯಾರ್ಥಿಯು ಚಧಿಳಧಿವಧಿಳಿಯ ಮುಂದಾಧಿಳತ್ವ ವಧಿಹಿಧಿಸಿಧಿದ್ದ. ಪ್ರಧಿತಿಧಿಭಧಿಟಧಿನೆ ಹತೋಟಿ ಮೀರುತ್ತಿರುವುದನ್ನು ಮನಗಂಡು ಜಿಲ್ಲಾಧಿಕಾರಿ ಜಿ.ಎನ್‌.ನಾಗರಾವ್‌, ಕುದುರೆ ಏರಿ ಸ್ಥಳಕ್ಕೆ ಬಂದರು. ಮೆರವಣಿಗೆಯಲ್ಲಿದ್ದ ಯುವಕರು ಮುಂದೆ ಹೋಗಲೇಬೇಕೆಂದು ಹಠ ಮಾಡಿ ಮುನ್ನುಗ್ಗಿದರು. ರಾಮಸ್ವಾಮಿ ಗುಂಪಿನ ಮುಂಚೂಣಿಯಲ್ಲಿದ್ದರು. ಮುಂದೆ ಬಂದರೆ ಗುಂಡು ಹೊಡೆಯುವುದಾಗಿ ಪೊಲೀಸರು ಎಚ್ಚರಿಸಿದರು. ಅಧಿದನ್ನು ಲೆಧಿಕ್ಕಿಧಿಸದೇ ಮುಧಿನ್ನಧಿಡೆಧಿದಾಗ ಗುಂಡು ತಾಗಿ ರಾಮಸ್ವಾಮಿ ಅಲ್ಲಿಯೇ ಕೊನೆಯುಸಿರೆಳೆದರು. ರಾಮಸ್ವಾಮಿ ಮೂಲತಃ ಅರಸೀಕೆರೆ ಸಮೀಪದ ಬಾಣಾವರದವರು. ಅವರ ಮರಣದಿಂದಾಗಿ ಮೈಸೂರಿನಲ್ಲಿ48 ಗಂಟೆಗಳ ಕಾಲ ಕಫ್ರ್ಯೂ ವಿಧಿಸಲಾಯಿತು. ವೃತ್ತದಲ್ಲಿಅಂದು ನಡೆದ ಗೋಲಿಬಾರ್‌ಗೆ ರಾಮಸ್ವಾಮಿ ಜತೆ ತೋರಾ ನಾಯಕ್‌, ರಂಗ ಎಂಬ ಇನ್ನಿಬ್ಬರು ತರುಣರೂ ಬಲಿಯಾದರು. ರಾಮಸ್ವಾಮಿಯ ನೆನಪಿಗಾಗಿ ಮೈಧಿಸೂಧಿರಿಧಿನಧಿಲ್ಲಿನ ಆ ಸ್ಥಳಕ್ಕೆ ರಾಮಸ್ವಾಮಿ ವೃತ್ತ ಎಂದು ನಾಮಕರಣ ಮಾಡಲಾಯಿತು.

ವಿಧಿರಾಧಿಜಧಿಪೇಟೆಯ ಗೆರಿಲ್ಲಾವೀರ ಅಧಿಪ್ಪಧಿಚ್ಚು(ಕೊಡಗು) –
ಕೊಧಿಡಧಿಗಿಧಿನಲ್ಲಿಭಾಧಿರತ ಸ್ವಾಧಿತಂತ್ರ್ಯ ಹೋಧಿರಾಧಿಟದ ಇಧಿತಿಧಿಹಾಧಿಸಧಿವನ್ನು ತಿಧಿರುಧಿವು ಹಾಧಿಕಿಧಿದರೆ ಅಲ್ಲಿಮುಖ್ಯಧಿವಾಗಿ ಕಾಧಿಣುವ ಹೆಧಿಸರು ವೀರ ಯೋಧ ಮಾಧಿತಂಡ ಅಧಿಪ್ಪಚ್ಚು. ಅಂದಿನ ಬೆಧಿಪ್ಪುಧಿನಾಧಿಡ್‌, ಇಂದಿನ ವಿಧಿರಾಧಿಜಧಿಪೇಟೆ ತಾಧಿಲೂಧಿಕಿನ ಬೊಧಿಳ್ಳುಧಿಮಾಡು ಗ್ರಾಧಿಮಧಿದಧಿ ಮಾತಂಡ ಅಪ್ಪಚ್ಚು ಕೊಡಗಿನ ಸ್ವಾತಂತ್ರ್ಯ ಹೋರಾಟದ ಪ್ರಮುಖ ನಾಯಕರಾಗಿದ್ದರು. 18ನೇ ಶತಮಾನದ ಅಂತ್ಯದ ಹೊತ್ತಿಗೆ ಬ್ರಿಟಿಷ್‌ ಸೈಧಿನ್ಯ ಕೊಧಿಡಧಿಗನ್ನು ವಧಿಶಧಿಪಧಿಡಿಧಿಸಿಧಿಕೊಧಿಳ್ಳಲು ಮುಂದಾಧಿಗಿತ್ತು. ಆಗ ಬ್ರಿಟಿಷ್‌ ಸೈಧಿನ್ಯದ ಮುಂದಾಧಿಳತ್ವ ವಧಿಹಿಧಿಸಿದ್ದ ಕಧಿರ್ನಲ್‌ ಗಿಧಿಲ್ಬರ್ಟ್‌ ವ್ಹಾಗ್‌ ಸೋಧಿಮಧಿವಾಧಿರಧಿಪೇಟೆ ಕಧಿಡೆಧಿಯಿಂದ ಮಧಿಡಿಧಿಕೇಧಿರಿಧಿಯತ್ತ ಬಧಿರುಧಿತ್ತಿದ್ದ. ಇಧಿತ್ತ ಕೊಧಿಡಧಿಗಿನ ರಾಜ ಚಿಧಿಕ್ಕವೀರ ರಾಧಿಜೇಂದ್ರನ ಸೇಧಿನೆಧಿಯಲ್ಲಿದಿಧಿವಾಧಿನಧಿರಾಧಿಗಿದ್ದ ಮಾಧಿತಂಡ ಅಧಿಪ್ಪಚ್ಚು, ಕೊಧಿಡಗು ಬ್ರಿಧಿಟಿಧಿಷರ ವಧಿಶಧಿವಾಧಿಗುಧಿವುಧಿದನ್ನು ತಧಿಡೆಧಿಯಲು ಹೋಧಿರಾಟ ಮಾಡಿ ಬ್ರಿಧಿಟಿಷ್‌ ಸೈಧಿನ್ಯಧಿವನ್ನು ತಧಿಡೆಧಿದಿಧಿದ್ದಧಿರು. ಅಪ್ಪಚ್ಚು ಅವರ ಅರಣ್ಯ ಮಾರ್ಗಗಳ ಜ್ಞಾನ ಹಾಗೂ ಗೆರಿಲ್ಲಾತಂತ್ರಗಳು ಬ್ರಿಟಿಷರಿಗೆ ಸವಾಲಾಗಿ ಪರಿಣಮಿಸಿತು. ಆದರೆ, ಒಳಗಿನ ದೇಧಿಶದ್ರೋಹಿಗಳ ಮಾಹಿತಿ ಸೋರಿಕೆಯಿಂದ ಅಪ್ಪಚ್ಚು ಸೆರೆಗೆ ಸಿಕ್ಕರು. ಬ್ರಿಟಿಷರು ಅಪ್ಪಚ್ಚುರನ್ನು ಕಂಡು ಎಷ್ಟು ಹೆದರಿದ್ದರೆಂದರೆ ಅವರಿಗೆ ಮರಣದಂಡನೆಯನ್ನು ವಿಧಿಸಿತು.

ಅಂಕೋಲಾ ಉಪ್ಪಿನ ಸತ್ಯಾಗ್ರಹ –
ಅಂಕೋಲಾ ಕರ್ನಾಟಕದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಮತ್ತೊಂದು ಹೆಗ್ಗುರುತು ಆಗಿದೆ. 1930 ರಲ್ಲಿ ಮಹಾತ್ಮ ಗಾಂಧಿಯವರ ದಂಡಿ ಯಾತ್ರೆಯ ಯಶಸ್ಸಿನ ನಂತರ, ಕರ್ನಾಟಕದ ಕಾಂಗ್ರೆಸ್ಸಿಗರು ಕರಾವಳಿ ಪಟ್ಟಣದಲ್ಲಿ ಸತ್ಯಾಗ್ರಹ ಮಾಡಲು ನಿರ್ಧರಿಸಿದರು. ಕಾಂಗ್ರೆಸ್ ಮುಖಂಡ ಹನುಮಂತ ರಾವ್ ಕೌಜಲಗಿ ಅವರು ಉಪ್ಪಿನ ಸತ್ಯಾಗ್ರಹಕ್ಕೆ ಅಂಕೋಲಾ ಅತ್ಯಂತ ಸೂಕ್ತವಾದ ಸ್ಥಳ ಎಂದು ವರದಿ ಮಾಡಿದರು. ಉತ್ತರ ಕನ್ನಡ ಜಿಲ್ಲೆಯ ಕರ್ನಾಟಕದ ಪಶ್ಚಿಮ ಕರಾವಳಿಯಲ್ಲಿರುವ ಅಂಕೋಲಾ, ಪುರಾತನ ದೇವಾಲಯಗಳು, ಕಡಲತೀರಗಳು ಮತ್ತು ಶ್ರೀಮಂತ ಪ್ರಾಚೀನತೆಯ ನೆಲೆಯಾಗಿದ್ದು ಇಲ್ಲಿ ನಡೆದ ಐತಿಹಾಸಿಕ ಸ್ವಾತಂತ್ರ್ಯ ಘಟನೆಗಳು ಅಂಕೋಲಾವನ್ನು ‘ಕರ್ನಾಟಕದ ಬಾರ್ಡೋಲಿ’ ಎಂದು ಹೆಸರಿಸಲು ಕಾರಣವಾಯಿತು.

ಜುಬಿಲಿ ಮೈದಾನದಿ ಕಿಚ್ಚಿನ ಬಿಜಲಿ (ಹಾಸನ) –
1940ರ ಸಮಯದಲ್ಲಿಹಾಸನದ ಜುಬಿಲಿ ಮೈದಾನದಲ್ಲಿಮಧಿಹಾತ್ಮ ಗಾಂಧೀಜಿ ಭಾಷಣ ಮಾಡಿದ್ದರು. ಅಂದಿನಿಂದ ಜುಬಿಲಿ ಮೈದಾನ ಅಸಂಖ್ಯ ಪ್ರತಿಭಟನೆಗಳು, ಚರ್ಚೆಗಳು, ಭಾಷಣಗಳಿಗೆ ಸಾಕ್ಷಿಯಾಯಿತು. ಸ್ವಾತಂತ್ರ್ಯ ಹೋರಾಟಗಾರರಾದ ಎಸ್‌.ಕೆ.ಕರೀಂಖಾನ್‌, ಬೋರಣ್ಣಗೌಡ, ಎಚ್‌.ಎಸ್‌.ನಂಜಪ್ಪ, ಹಾರನಹಳ್ಳಿ ರಾಮಸ್ವಾಮಿ, ಗೊರೂರು ರಾಮಸ್ವಾಮಿ ಅಯ್ಯಂಗಾರ್‌, ಕೆ.ಸಿ.ಕರೀಗೌಡರು, ಪಂಡಿತ್‌ ಶ್ರೀನಿವಾಸ ಅಯ್ಯಂಗಾರ್‌, ಅರಸೀಕೆರೆಯ ಡಾ.ಕರಿಸಿದ್ದಪ್ಪ, ಹಾಸನದ ಎಚ್‌.ಎಂ.ಶಿವಣ್ಣ, ಯಶೋಧರಮ್ಮ ದಾಸಪ್ಪಹೀಗೆ ಅನೇಕ ಮಹಾನುಭಾವರು ಇಲ್ಲಿತಮ್ಮ ಉಪಸ್ಥಿತಿ ಮತ್ತು ಮಾತಿನಿಂದ ಜನರಲ್ಲಿಸ್ವಾತಂತ್ರ್ಯದ ಕಿಚ್ಚನ್ನು ಹೊತ್ತಿಸಿದರು. ‘ಧಿ’ಜುಬಿಲಿ ಮೈದಾನದ ಸ್ವಾತಂತ್ರ್ಯ ಚಟುವಟಿಕೆಗಳಲ್ಲಿಭಾಗವಹಿಸಿದ ನಾವೆಲ್ಲರೂ ಬ್ರಿಟಿಷರ ಲಾಠಿ, ಬೂಟಿನ ಪೆಟ್ಟು ತಿಂದಿದ್ದೇವೆ. ಮನೆ, ಮಕ್ಕಳು, ಕುಟುಂಬ ವರ್ಗ ಹೀಗೆ ಎಲ್ಲವನ್ನೂ ಬಿಟ್ಟು ಹೋರಾಟ ನಡೆಸಿದ್ದು ಅವಿಸ್ಮರಣೀಯ ದಿನಗಳು,” ಎಂದು ಸ್ಮರಿಸುತ್ತಾರೆ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಂ.ಶಿವಣ್ಣ.

Spread positive news

Leave a Reply

Your email address will not be published. Required fields are marked *