ರೇಷನ್ ಕಾರ್ಡ್ ತಿದ್ದುಪಡಿಗೆ ಹೊಸ ನಿಯಮ.

ಪ್ರೀಯ ರೈತರೇ ಇವತ್ತು ನಾವು ಒಂದು ಮುಖ್ಯವಾದ ವಿಷಯದ ಬಗ್ಗೆ ಮಾಹಿತಿ ಪಡೆಯೋಣ. ಹಾಗೂ ಸರ್ಕಾರವು ಈ 2024 ಮುಗಿಯುವ ಹೊತ್ತಿಗೆ ಯಾವ ಯಾವ ತಿದ್ದುಪಡಿ, ಹೊಸ‌ ನಿಯಮಗಳನ್ನು ತರಲು ಯೋಚಿಸುತ್ತಿದೆ ಎಂದು ತಿಳಿಯೋಣ. ಹಾಗೂ ಇವತ್ತು ನಾವು ರೇಷನ್ ಕಾರ್ಡ್ ತಿದ್ದುಪಡಿ, ಹೆಸರು ಸೇರ್ಪಡೆ ಇನ್ನೂ ಹಲವಾರು ವಿಷಯಗಳ ಬಗ್ಗೆ ಚರ್ಚೆ ಮಾಡೋಣ. ಬನ್ನಿ ಕೆಳಗೆ ಈ ರೇಷನ್ ಕಾರ್ಡ್ ತಿದ್ದುಪಡಿ ಬಗ್ಗೆ ಮಾಹಿತಿ ಇದೆ ತಪ್ಪದೇ ಓದಿ. ತಿದ್ದುಪಡಿ ಮಾಡಿಕೊಳ್ಳಿ.

ಪ್ರೀಯ ಸಾರ್ವಜನಿಕರೇ ನಿಮಗೊಂದು ವಿನಂತಿ. ರೇಷನ್ ಕಾರ್ಡ್‌ ತಿದ್ದುಪಡಿ ಹಾಗೂ ಹೊಸ ಸದಸ್ಯರ ಸೇರ್ಪಡೆಗೆ ಆನ್‌ಲೈನ್‌ನ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ರೇಷನ್ ಕಾರ್ಡ್‌ಗೆ ಸಂಬಂಧಿಸಿದಂತೆ ಇತ್ತೀಚಿಗೆ ಕೆಲವು ಗೊಂದಲಗಳು ಸೃಷ್ಟಿಯಾಗಿತ್ತು. ಇದೀಗ ನಿಮ್ಮ ರೇಷನ್ ಕಾರ್ಡ್‌ನಲ್ಲಿ ನಿರ್ದಿಷ್ಟವಾಗಿ ಯಾವುದಾದರೂ ಮಾಹಿತಿ ಇಲ್ಲವೇ ವಿಳಾಸ ಹಾಗೂ ನಿಮ್ಮ ಕುಟುಂಬದವರ (ಸದಸ್ಯರ) ವಿವರ ತಪ್ಪಾಗಿದ್ದಾರೆ. ಆನ್‌ಲೈನ್‌ನ ಮೂಲಕ ಬದಲಾವಣೆ ಮಾಡಿಕೊಳ್ಳಲು ರೇಷನ್ ಕಾರ್ಡ್‌ದಾರರಿಗೆ ಅವಕಾಶ ನೀಡಲಾಗಿದೆ. ಹೀಗಾಗಿ, ನಿಮ್ಮ ರೇಷನ್ ಕಾರ್ಡ್‌ಗಳಲ್ಲಿ ಯಾವುದಾದರೂ ತಿದ್ದುಪಡಿ ಅಥವಾ ಬದಲಾವಣೆ ಮಾಡಿಕೊಳ್ಳಬೇಕೆಂದರೆ ಈಗಲೇ ಮಾಡಿಸಿಕೊಳ್ಳಿ.

ಏನೇನು ತಿದ್ದುಪಡಿ ಮಾಡಬಹುದು?
* ಹೆಸರು ಸೇರ್ಪಡೆ
* ಹೆಸರು ಡಿಲೀಟ್
* ಹೆಸರು ತಿದ್ದುಪಡಿ
* ವಿಳಾಸ ಬದಲಾವಣೆ
* ಇ-ಕೆವೈಸಿ ಸೊಸೈಟಿ ಬದಲಾವಣೆ

ನಮ್ಮ ರಾಜ್ಯ ಸರ್ಕಾರವು ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಇದೀಗ ಅವಕಾಶ ಮಾಡಿಕೊಟ್ಟಿದೆ.! ಆಸಕ್ತಿ ಇರುವಂತಹ ಕುಟುಂಬಗಳು ಇದೇ 31 ಡಿಸೆಂಬರ್ 2024 ಕೊನೆಯ ದಿನಾಂಕವಾಗಿದ್ದು ಈ ದಿನಾಂಕದ ಒಳಗಡೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ರಾಜ್ಯ ಸರ್ಕಾರ ಅವಕಾಶ ಮಾಡಿಕೊಟ್ಟಿದೆ.! ಆದ್ದರಿಂದ ರೇಷನ್ ಕಾರ್ಡ್ ತಿದ್ದುಪಡಿ ಅಥವಾ ರೇಷನ್ ಕಾರ್ಡ್ ನಲ್ಲಿ ಯಾವುದೇ ರೀತಿ ಬದಲಾವಣೆ ಮಾಡಲು ಬಯಸುವಂಥ ಕುಟುಂಬಗಳು ಡಿಸೆಂಬರ್ 31 2024 ಒಳಗೆ ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 5:00 ವರೆಗೆ ನಿಮ್ಮ ಹತ್ತಿರದ ಗ್ರಾಮ್ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಈ ಆನ್ಲೈನ್ ಸೆಂಟರ್ ಗಳಲ್ಲಿ ರೇಷನ್ ಕಾರ್ಡ್ ತಿದ್ದುಪಡಿ ಅಥವಾ ರೇಷನ್ ಕಾರ್ಡ್ ನಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳಲು ಅವಕಾಶವಿದೆ! ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಬೇಗ ಈ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ.

ಹೊಸ ವರ್ಷಕ್ಕೆ ಹೊಸ ರೂಲ್ಸ್! ಏನಿದು ಹೊಸ ನಿಯಮಗಳು?
ಎಲ್‌ಪಿಜಿ ತುಟ್ಟಿ, ಕಾರು ದುಬಾರಿ, ನಿಷ್ಕ್ರಿಯ ಬ್ಯಾಂಕ್ ಖಾತೆ ಬಂದ್‌ ಜನಜೀವನದ ಮೇಲೆ ಪರಿಣಾಮ ಬೀರುವ ಹಲವು ಬದಲಾವಣೆ. ಹೊಸ ವರ್ಷಕ್ಕೆ ಸಜ್ಜಾಗುತ್ತಿರುವ ಭಾರತ ಹೊಸ ಹೊಸ ಬದಲಾವಣೆಗೂ ಸಜ್ಜಾಗುತ್ತಿದೆ. ಮಧ್ಯಮ ವರ್ಗದ ಮೇಲೆ ಪರಿಣಾಮ ಬೀರು ವಂತಹ ಹಲವು ಹೊಸ ನಿಯಮಗಳು ಜ.1ರಿಂದಲೇ ಜಾರಿಯಾಗುತ್ತಿವೆ. ಈ ಬದಲಾವಣೆ ಪರ್ವದ ಸಂಕ್ಷಿಪ್ತ ನೋಟ ಇಲ್ಲಿದೆ.

Oplus_0

ಪಡಿತರ ವಿತರಣೆ ನಿಯಮ ಬದಲು
ಪಡಿತರ ವಿತರಣಾ ವ್ಯವಸ್ಥೆಯಲ್ಲೂ ಮಹತ್ವದ ಬದಲಾವಣೆ
ಆಗಲಿದೆ. ಹಿಂದುಳಿದ ಕುಟುಂಬಗಳಿಗೆ ಆಹಾರ ಭದ್ರತೆ ಖಚಿತಪಡಿಸಿಕೊಳ್ಳಲು ಆದ್ಯತೆ ನೀಡಲಾಗುತ್ತಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿ ಜ.1ರಿಂದ ಪಡಿತರದ ಜತೆಗೆ 1 ಸಾವಿರ ರೂ. ಹೆಚ್ಚುವರಿ ಆರ್ಥಿಕ ನೆರವು ನೀಡುವ ನಿಯಮ ಜಾರಿಯಾಗಲಿದೆ. ಸರಿಸುಮಾರು 80 ಕೋಟಿ ಜನರು ಈ ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಇದೇ ವೇಳೆ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸದವರ ಕಾರ್ಡ್‌ ಗಳು ರದ್ದಾಗಲಿವೆ. ಇದಿಷ್ಟೇ ಅಲ್ಲ ನಗರ ಪ್ರದೇಶಗಳಲ್ಲಿ ವಾರ್ಷಿಕ ಆದಾಯ ಮಿತಿ 3 ಲಕ್ಷ ರೂ. ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಾರ್ಷಿಕ ಆದಾಯ ಮಿತಿ 2 ಲಕ್ಷ ರೂ.ಗೆ ನಿಗದಿಯಾಗಲಿದೆ.

Spread positive news

Leave a Reply

Your email address will not be published. Required fields are marked *