ಪ್ರೀಯ ರೈತರೇ ಇವತ್ತು ಒಂದು ಮಹಿಳೆಯರಿಗೆ ಇರುವ ಸರ್ಕಾರದ ಯೋಜನೆ ಪಟ್ಟಿ ಬಗ್ಗೆ ಮಾಹಿತಿ ತಿಳಿಯೋಣ. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಅನುಷ್ಠಾನಗೊಳಿಸುತ್ತಿರುವ 05 ಯೋಜನೆ (ಉದ್ಯೋಗಿನಿ ಯೋಜನೆ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ, ಚೇತನ ಯೋಜನೆ, ಧನಶ್ರೀ ಯೋಜನೆ ಮತ್ತು ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆ) ಗಳನ್ನು ಸೇವಾ ಸಿಂಧು ಪೋರ್ಟಲ್ ಆನ್‌ಲೈನ್ (Live) ನಲ್ಲಿ ಅಳವಡಿಸಲಾಗಿದ್ದು ಈ ಕುರಿತು ಅರ್ಜಿದಾರರಿಂದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ:-21-09-2024 ರಂದು ದಿನ ಪತ್ರಿಕೆಗಳಲ್ಲಿ ಜಾಹಿರಾತನ್ನು ಪ್ರಕಟಿಸಲಾಗಿತು. ಆದರೆ ಈಗ ದಿನಾಂಕ ವಿಸ್ತರಿಸಲಾಗಿದೆ.
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಯೋಜನೆಗಳನ್ನು ಸೇವಾ ಸಿಂಧು ಪೋರ್ಟಲ್ ನಲ್ಲಿ ಆನ್ ಲೈನ್‌ನಲ್ಲಿ ಅರ್ಜಿದಾರರಿಂದ ಅರ್ಜಿಗಳ ಪ್ರಕ್ರಿಯೆಯ ಅವಧಿಯನ್ನು ವಿಸ್ತರಿಸಿರುವ ಬಗ್ಗೆ ಮುಂದುವರೆದು ಈ ಕೆಳಕಂಡ 05 ಯೋಜನೆಗಳಿಗೆ ಅರ್ಜಿದಾರರಿಂದ ಅರ್ಜಿಗಳನ್ನು ಸ್ವೀಕರಿಸುವ ದಿನಾಂಕ: 30-09-2024 ರವರೆಗೆ ಕಾಲಾವಧಿಯನ್ನು ವಿಸ್ತರಿಸಲಾಗಿರುತ್ತದೆ.
ಮಹಿಳೆಯರಿಗೆ ಇರುವ ಯೋಜನೆ ಪಟ್ಟಿ –
1. ಉದ್ಯೋಗಿನಿ ಯೋಜನೆ
2. ಚೇತನ ಯೋಜನೆ
3. ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ
4. ಧನಶ್ರೀ ಯೋಜನೆ
5. ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ –
ದಿನಾಂಕ: 30-09-2024 ರವರೆಗೆ ಕಾಲಾವಧಿಯನ್ನು ವಿಸ್ತರಿಸಲಾಗಿರುತ್ತದೆ.
ಮಹಿಳೆಯರು ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ. ಇದರಲ್ಲಿ ನಿಮಗೆ ಬೇಕಾದ ಸಂಪೂರ್ಣ ಮಾಹಿತಿ ಸಿಗುತ್ತದೆ.
https://kswdc.karnataka.gov.in/
ಉದ್ಯೋಗಿನಿ ಯೋಜನೆ:
ಈ ಯೋಜನೆಯು 1997-98ನೇ ಸಾಲಿನಿಂದ ಜಾರಿಗೆ ಬಂದಿರುತ್ತದೆ. ಉದ್ಯೋಗಿನಿ ಯೋಜನೆಯಡಿಯಲ್ಲಿ ಅರ್ಹ ಮಹಿಳಾ ಉದ್ಯಮಿಗಳಿಗೆ ಉದ್ಯಮ ಸ್ಥಾಪಿಸಲು ಮತ್ತು ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ಗರಿಷ್ಠ ರೂ. 1,00,000/-ಗಳವರೆಗೆ ಬ್ಯಾಂಕ್ ಗಳ ಮೂಲಕ ಸಾಲ ನೀಡುವ ಕಾರ್ಯಕ್ರಮ ರೂಪಿಸಿದೆ. ಮಹಿಳೆಯರು ವ್ಯಾಪಾರ ಮತ್ತು ಸೇವಾ ಕ್ಷೇತ್ರಗಳಲ್ಲಿ ಸ್ವ-ಉದ್ಯೋಗ ಪ್ರಾರಂಭಿಸುವುದರ ಮೂಲಕ ಆರ್ಥಿಕ ಅಭಿವೃದ್ಧಿ ಹೊಂದಲು ಅನುಕೂಲವಾಗುವಂತೆ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಇಚ್ಚಿಸುವ ಮಹಿಳೆಯರಿಗೆ ಬ್ಯಾಂಕುಗಳ ಮೂಲಕ ಸಾಲ ಮತ್ತು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಸಹಾಯಧನವನ್ನು (Backend Subsidy) ನೀಡುವ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಸಶಕ್ತರನ್ನಾಗಿ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.
ಧನಶ್ರೀ ಯೋಜನೆ:
ಈ ಯೋಜನೆಯು 2016-17ನೇ ಸಾಲಿನಿಂದ ಜಾರಿಗೆ ಬಂದಿರುತ್ತದೆ. ಈ ಯೋಜನೆಯಡಿ ಕರ್ನಾಟಕ ರಾಜ್ಯದಲ್ಲಿ ವಾಸಿಸುತ್ತಿರುವ 18-60 ವಯೋಮಿತಿಯ ಹೆಚ್. ಐ. ವಿ ಸೋಂಕಿತ ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಂಡು ಅಭಿವೃದ್ಧಿ ಹೊಂದಲು ಪ್ರೇರೇಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಚೇತನ ಯೋಜನೆ –
ಮಹಿಳೆಯರಿಗೆ ಗೌರವಯುತ ಮತ್ತು ಸ್ವತಂತ್ರ ಜೀವನವನ್ನು ನಡೆಸಲು ಅವರಿಗೆ ಸಹಾಯ ಮಾಡುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಕರ್ನಾಟಕ ಸರ್ಕಾರವು ಈ ಯೋಜನೆಯಡಿಯಲ್ಲಿ ಅರ್ಹ ಅರ್ಜಿದಾರರಿಗೆ ರೂ.30,000/- ಸಹಾಯಧನದ ಮೊತ್ತವನ್ನು ಒದಗಿಸುತ್ತದೆ. ಇದರಿಂದ ಅವರನ್ನು ಆದಾಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಮತ್ತು ಸ್ವಯಂ ಉದ್ಯೋಗಿಗಳಾಗಿ ಮತ್ತು ಆರ್ಥಿಕವಾಗಿ ಸಬಲರಾಗುವಂತೆ ಮಾಡುತ್ತದೆ. https://kswdc.karnataka.gov.in/17/chethana/en ಈ ಲಿಂಕ್ ಅನ್ನು ಕ್ಲಿಕ್ ಮಾಡಿ.
ಅರ್ಹತಾ ಮಾನದಂಡ ಹಾಗೂ ಅಗತ್ಯ ದಾಖಲೆಗಳು:-
* ವಯೋಮಿತಿ 18 ವರ್ಷ ಮೇಲ್ಪಿಟ್ಟಿರಬೇಕು.
* ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
ಜಿಲ್ಲೆಯಲ್ಲಿ ದಮನಿತ ಮಹಿಳೆಯರ ಪುನರ್ವಸತಿಗಾಗಿ ಹಾಗೂ ಸರ್ಕಾರದಿಂದ ಅಧೀಕೃತವಾಗಿ ಗುರುತಿಸಲಾಗಿರುವ ಸಂಸ್ಥೆಯಿಂದ ಅಧೀಕೃತ ದೃಢೀಕರಣ ಪತ್ರ / ಗುರುತಿನ ಚೀಟಿ ಹೊಂದಿರಬೇಕು
* ಆಧಾರ್ ಕಾರ್ಡ್
* ವಾಸ ಸ್ಥಳ ದೃಢೀಕರಣ ಪತ್ರ / ಮತದಾರರ ಗುರುತಿನ ಚೀಟಿ / ಪಡಿತರ ಚೀಟಿ
* ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಿಸಿರಬೇಕು
ಕೈಗೊಳ್ಳಲು ಉದ್ದೇಶಿಸಿರುವ ಆದಾಯೋತ್ಪನ್ನ ಚಟುವಟಿಕೆಗೆ ಸಂಬಂಧಿಸಿದಂತೆ ಯೋಜನಾ ವರದಿ ನೀಡಬೇಕು.