ಪ್ರತಿಯೊಬ್ಬ ನಾಗರಿಕನಿಗೂ ಆಧಾರ್ ಕಾರ್ಡ್ ಅತ್ಯಂತ ಮುಖ್ಯವಾದ ದಾಖಲೆಯಾಗಿದ್ದು, ಹಲವಾರು ಸ್ಥಳಗಳಲ್ಲಿ ಇದು ಕಡ್ಡಾಯವಾಗಿದೆ. ಆದರೆ ಹಲವರಿಗೆ ತಮ್ಮ ಆಧಾರ್ ಕಾರ್ಡ್‌ನಲ್ಲಿರುವ ಫೋಟೋ ಬಗ್ಗೆ ತುಂಬಾ ಬೇಸರವಿರುತ್ತದೆ. ಆದರೆ, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ನೀಡುವ ಸೇವೆಗಳನ್ನು ಪಡೆಯಲು ನಾಗರಿಕರಿಗೆ ಆಧಾರ್ ಕಡ್ಡಾಯವಾಗಿದೆ. ಆಧಾರ್ ಕಾರ್ಡ್‌ನಲ್ಲಿ ಫೋಟೋ ಬದಲಾಯಿಸುವ ಆಯ್ಕೆಗಳಿವೆ. ಹಲವರಿಗೆ ಈ ಬಗ್ಗೆ ತಿಳಿದಿಲ್ಲ ಎಂಬುದು ಸತ್ಯ. ಸರಳ ಹಂತಗಳ ಮೂಲಕ ನೀವು ನಿಮ್ಮ ಆಧಾರ್ ಕಾರ್ಡ್‌ನಲ್ಲಿರುವ ಫೋಟೋವನ್ನು ಸುಲಭವಾಗಿ ನವೀಕರಿಸಬಹುದು. ಇದಕ್ಕೆ ರೂ.100 ಶುಲ್ಕ ವಿಧಿಸಲಾಗುತ್ತದೆ. ಸೆಪ್ಟೆಂಬರ್ 14 ರೊಳಗೆ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸಿಕೊಳ್ಳಲು ಅವಕಾಶವಿದೆ. ಆದರೆ, ಫೋಟೋವನ್ನು ಆನ್‌ಲೈನ್‌ನಲ್ಲಿ ನವೀಕರಿಸಲಾಗುವುದಿಲ್ಲ, ಫೋಟೋವನ್ನು ನವೀಕರಿಸಲು ಹತ್ತಿರದ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬೇಕು. ಆದರೆ ನೀವು ನೋಂದಣಿ ಫಾರ್ಮ್ ಅನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಬಹುದು ಮತ್ತು ಆಧಾರ್ ಕೇಂದ್ರಕ್ಕೆ ಹೋಗುವ ಮೊದಲು ಅದನ್ನು ಭರ್ತಿ ಮಾಡಬಹುದು.
ಆಧಾರ್ ಕಾರ್ಡ್ ಫೋಟೋವನ್ನು ಬದಲಾಯಿಸುವ ಮತ್ತು ನವೀಕರಿಸುವ ಹಂತಗಳು ಇಲ್ಲಿವೆ.
ನಿಮ್ಮ ಆಧಾರ್ ಬ್ಯಾಂಕ್ ಲಿಂಕ್ ಆಗಿರುವ ಸ್ಟೇಟಸ್ ಚೆಕ್ ಮಾಡುವುದು ಹೇಗೆ ಇಲ್ಲಿದೆ ನೋಡಿರಿ 👇🏻
ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್
https://uidai.gov.in/en/
ನಂತರ ಮುಂದಿನ ಮುಖಪುಟದಲ್ಲಿ ಕಾಣುವ ಹಾಗೆ ಆಧಾರ್ ಸರ್ವಿಸಸ್(Adhaar services) ಅದರ ಮೇಲೆ ಕ್ಲಿಕ್ ಮಾಡಿ.
ನಂತರ ಮುಂದೆ ಕಾಣುವ ಮುಖಪುಟದಲ್ಲಿ ಆಧಾರ್ ಲಿಂಕಿಂಗ್ ಸ್ಟೇಟಸ್ (Adhaar Linking status) ಮೇಲೆ ಕ್ಲಿಕ್ ಮಾಡಿ.
ನಂತರ ಅದೇ ಮುಖಪುಟದಲ್ಲಿ ಕೆಲಗೆ ಕಾಣುವ ಹಾಗೆ ಬ್ಯಾಂಕ್ ಸೀಡಿಂಗ್ ಸ್ಟೇಟಸ್ (bank seeding status ) ಮೇಲೆ ಕ್ಲಿಕ್ ಮಾಡಿ..
ನಂತರ ಅಲ್ಲಿ ಲಾಗಿನ್ ಕೇಳುತ್ತದೆ ನಿಮ್ಮ ಆಧಾರ್ ಸಂಖ್ಯೆ ಅಲ್ಲಿ ಕೊಟ್ಟಿರುವ ಕ್ಯಾಪ್ಚ ಮತ್ತು ನಿಮ್ಮ ಮೊಬೈಲ್ ಬಗ್ಗೆ ಬಂದಿರುವ ಓಟಿಪಿಯನ್ನು ಹಾಕಿ ಲಾಗಿನ್ ಆಗಿ.
ನಂತರ ಅದೇ ಬ್ಯಾಂಕ್ ಸಿಡಿಂಗ್ ಸ್ಟೇಟಸ್ ಮೇಲೆ ಇನ್ನೊಮ್ಮೆ ಒತ್ತಿ.. ನಂತರ ಅಲ್ಲಿ ನಿಮ್ಮ ಸ್ಟೇಟಸ್ ಆಕ್ಟಿವ್ ಎಂದು ಬಂದರೆ ನಿಮಗೆ ಬರ ಪರಿಹಾರದ ಹಣ ಆಗುತ್ತದೆ.
ರೈತರೇ ಪಿಎಂ ಕಿಸಾನ್ ಹೊಸ ಅಪ್ಡೇಟ್ ಬಂದಿದೆ. ರೈತರು ಈ ಕೆಲಸ ಮಾಡದಿದ್ದರೆ ಹಣ ಬರಲ್ಲ.
ಕೇಂದ್ರ ಸರ್ಕಾರವು ಪಿ. ಎಂ. ಕಿಸಾನ್ ಯೋಜನೆಯಲ್ಲಿ ಫಲಾನುಭವಿಗಳ ಅರ್ಜಿಗೆ ಸಂಬಂಧಿಸಿದ ಮಾಹಿತಿಯನ್ನು ಸುಲಭವಾಗಿ ರೈತರಿಗೆ ತಲುಪಿಸಲು ಅನುಕೂಲವಾಗಲು ಇನ್ನು ಮುಂದೆ ಭಾರತ ಸರ್ಕಾರದ ಪಿ.ಎಂ. ಕಿಸಾನ್ ಪೋರ್ಟಲ್ ನಲ್ಲಿ ನೋಂದಣಿಯಾಗುವ ಫಲಾನುಭವಿಗಳಿಗೆ Unique Mobile number ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿರುತ್ತದೆ. ಪ್ರಸ್ತುತ ಪಿ. ಎಂ. ಕಿಸಾನ್ ದತ್ತಾಂಶದಲ್ಲಿ ಈಗಾಗಲೇ ಹಲವಾರು ಫಲಾನುಭವಿಗಳು ನಕಲಿ ಹಾಗೂ ಅಮಾನ್ಯ Mobile Number ಉಪಯೋಗಿಸಿಕೊಂಡು ನೋಂದಣಿಯಾಗಿರುವುದು ಕಂಡು ಬಂದಿರುತ್ತದೆ.
ಆದ್ದರಿಂದ, ಎರಡಕ್ಕಿಂತ ಹೆಚ್ಚು ಫಲಾನುಭವಿಗಳು ಒಂದೇ ಮಾನ್ಯ Mobile Number ಉಪಯೋಗಿಸಿಕೊಂಡು ಅಥವಾ ಅಮಾನ್ಯ Mobile Number ಉಪಯೋಗಿಸಿಕೊಂಡು ಯೋಜನೆಯಡಿ ನೋಂದಣಿಯಾಗಿದ್ದಲ್ಲಿ, ಅಂತಹ ಫಲಾನುಭವಿಗಳಿಗೆ ಮುಂದಿನ ಕಂತುಗಳ ಆರ್ಥಿಕ ನೆರವು ವರ್ಗಾವಣೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿರುತ್ತಾರೆ. ರಾಜ್ಯದ ಒಟ್ಟು 30154 ಫಲಾನುಭವಿಗಳ ಪಟ್ಟಿಯನ್ನು ನೀಡಿ, ದಿನಾಂಕ: 31.08.2024 ರೊಳಗೆ ತಿದ್ದುಪಡಿಮಾಡಲು ತಿಳಿಸಿರುತ್ತಾರೆ.
ಯೋಜನೆಯಡಿ ನೋಂದಣಿಯಾಗಿರುವ ಫಲಾನುಭವಿಗಳ Mobile Number ಅನ್ನು ತಿದ್ದುಪಡಿಮಾಡಲು ಈಗಾಗಲೇ ಭಾತರ ಸರ್ಕಾರದ ಪಿ.ಎಂ. ಕಿಸಾನ್ ಪೋರ್ಟಲ್‌ನ ಮುಖಪುಟದಲ್ಲಿ Update Mobile Number” (https://pmkisan.gov.in/MobileUpdation_Pub.aspx) 2 ಆಯ್ಕೆಯನ್ನು ನೀಡಲಾಗಿದ್ದು, ಸದರಿ ಫಲಾನುಭವಿಗಳ ಮಾಹಿತಿಯನ್ನು ದಿನಾಂಕ: 31.08.2024 ರೊಳಗೆ ತಿದ್ದುಪಡಿಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ನಿರ್ದೇಶಿಸಿದೆ.