ರೈತರ ಭಾಂದವರ ಗಮನಕ್ಕೆ ಇವತ್ತು ಒಂದು ಮುಖ್ಯವಾದ ವಿಷಯದ ಬಗ್ಗೆ ಚರ್ಚಿಸೋಣ ಹಾಗೂ ರೈತರಿಗೆ ಇದರಿಂದ ಏನೆಲ್ಲಾ ಉಪಯೋಗ ಇದೆ ಎಂದು ತಿಳಿಯೋಣ. 2023-24 ನೇ ಸಾಲಿನ ಮುಂಗಾರು ಹಂಗಾಮಿನ ಮಳೆ ಆಶ್ರಿತ ತೊಗರಿ ಮತ್ತು ಮೆಕ್ಕೆಜೋಳ ಬೆಳೆಗೆ ಮಾತ್ರ ಪರಿಹಾರದ ಹಣವನ್ನು ಸರಕಾರ ನೀಡಿದ್ದು ಉಳಿದ ಬೆಳೆಗಳಿಗೆ ಯಾಕೆ ಬೆಳೆವಿಮೆ ನೀಡಿಲ್ಲ ಹಾಗೂ ಇನ್ನೂ ಬರ ಪರಿಹಾರ ಹಣ ಬರದೇ ಇರುವುದಕ್ಕೆ ಮುಖ್ಯ ಕಾರಣಗಳು ಏನು ಎಂದು ಸಂಪೂರ್ಣ ಮಾಹಿತಿ ಪಡೆಯೋಣ.
ಹೌದು ಈಗಾಗಲೇ ಸರ್ಕಾರವು ಬರ ಪರಿಹಾರ ಬಿಡುಗಡೆ ಮಾಡಿದ್ದು, ಬೆಳೆವಿಮೆ ಕೂಡ ಬಿಡುಗಡೆ ಮಾಡಲಾಗಿದೆ. 2023-24 ನೇ ಸಾಲಿನ ಮುಂಗಾರು ಹಂಗಾಮಿನ ಮಳೆ ಆಶ್ರಿತ ತೊಗರಿ ಮತ್ತು ಮೆಕ್ಕೆಜೋಳ ಬೆಳೆಗೆ ಮಾತ್ರ ಹಣ ಬಿಡುಗಡೆ ಮಾಡಿದ ಸರ್ಕಾರ ರೈತರು ಇದನ್ನು ಪರಿಶೀಲಿಸಿ ಹಣದ ಬಗ್ಗೆ ಚೆಕ್ ಮಾಡುವ ಅವಶ್ಯಕತೆ ಇದೆ. ಇನ್ನೂವರೆಗೂ ಹಣ ಜಮೆ ಆಗಿರದಿದ್ದರೆ
ನೀವು ಮುಂಗಾರು ಹಂಗಾಮಿನಲ್ಲಿ ಈ ಮೇಲ್ಕಾಣಿಸಿದ ಬೆಳೆಗಳನ್ನು ಬೆಳೆದಿರುವುದಿಲ್ಲ ಅಥವಾ ಬೆಳೆ ಸಮೀಕ್ಷೆ ಮಾಡಿಸಿರುವುದಿಲ್ಲ ಎಂದಾಗುತ್ತದೆ.
ಬೆಳೆ ಸಮೀಕ್ಷೆ Link ಈ ಕೆಳಗಿದೆ ನಿಮ್ಮ ಪಹಣಿ ಮತ್ತು ಬೆಳೆಯ ಸ್ಥಿತಿ ಪರಿಶೀಲನೆ ನೀವೇ ಮಾಡಿಕೊಳಬಹುದು
https://play.google.com/store/apps/details?id=com.crop.offcskharif_2021
ಪರಿಹಾರ ಹಣ ಪಡೆಯಲು ಆಧಾರನೊಂದಿಗೆ ಪಹಣಿ ( FID )ಜೋಡಣೆ ಅತೀ ಅವಶ್ಯ.
ಆಧಾರನೊಂದಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ FID ಆಗಿದಿಯೋ ಇಲ್ಲವೋ ಎಂದು ಪರಿಶೀಲಿಸಿ
ಬೆಳೆ ಪರಿಹಾರದ ಸ್ಥಿತಿ ಪರಿಶೀಲನೆಗೆ ಹತ್ತಿರದ CSC ಅಥವಾ ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಿ ಅಥವಾ ಈ ಕೆಳಗಿರುವ ಪರಿಹಾರದ Link ಕ್ಲಿಕ್ ಮಾಡಿ ಸ್ಥಿತಿ ಪರಿಶೀಲನೆ ನೀವೇ ಮಾಡಿಕೊಳಬಹುದು🙏🏻
ಹಿಂಗಾರು ಬೆಳೆ ಸಮೀಕ್ಷೆ ಮಾಡುವುದು ಹೇಗೆ?
ಹಿಂಗಾರು ಬೆಳೆ ಸಮೀಕ್ಷೆ ಹೇಗೆ ಮಾಡುವುದು ಅಂದರೆ ಕಾರ್ಯವಿಧಾನ ಹೇಗೆ ಎಂದು ಈಗ ಒಂದೊಂದಾಗಿ ತಿಳಿಯೋಣ.
• ಮೊದಲಿಗೆ ಈ https://play.google.com/store/apps/details?id=com.csk.farmer23_24.cropsurvey
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
• ಅಥವಾ ಗೂಗಲ್ ಪ್ಲೇ ಸ್ಟೋರ್ ನಲ್ಲಿ Bele darshak 2023-24 ಎಂದು ಟೈಪ್ ಮಾಡಿ ಡೌನ್ಹೋಡ್ ಮಾಡಿಕೊಳ್ಳಬಹುದು.
• ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಬೆಳೆ ದರ್ಶಕ್ ಆ್ಯಪ್ ಕಾಣಿಸುತ್ತದೆ. ಅಲ್ಲಿ install ಮೇಲೆ ಕ್ಲಿಕ್ ಮಾಡಬೇಕು. ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು.
• ಆಗ ನಿಮಗೆ ಬೆಳೆ ದರ್ಶಕ್ 23-24 ಕೆಳಗಡೆ ಬೆಳೆ ಸಮೀಕ್ಷೆ ಮಾಹಿತಿ ವೀಕ್ಷಣೆ ಕಾಣಿಸುತ್ತದೆ.
• ಅದರ ಕೆಳಗಡೆ ಸರ್ಕಾರಿ ಸಿಬ್ಬಂದಿ ಪ್ರೈವೆಟ್ ರೆಸಡೆಂಟ್ಸ್ ಹಾಗೂ ರೈತ ಎಂಬ ಆಯ್ಕೆಗಳು ಕಾಣಿಸುತ್ತವೆ. ರೈತ ಮೇಲೆ ಕ್ಲಿಕ್ ಮಾಡಬೇಕು.
• ವೈಲ್ ಯೂಸಿಂಗ್ ದಿಸ್ ಆ್ಯಪ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲೋ ಮೇಲೆ ಕ್ಲಿಕ್ ಮಾಡಬೇಕು.
• ನಂತರ ಅಲ್ಲಿ ಆ್ಯಪ್ ಓಪನ್ ಆದ ತಕ್ಷಣ ಅಲ್ಲಿ ನಿಮ್ಮ ತಾಲೂಕು, ಜಿಲ್ಲೆ, ಸರ್ವೇ ನಂಬರ್, ಹಿಸ್ಸಾ ನಂಬರ್ ಹೀಗೆ ಕೇಳಲಾಗುತ್ತದೆ.
• ನಂತರ ಎಲ್ಲ ಮಾಹಿತಿ ಹಾಕಿ ಸಮೀಕ್ಷೇಗಳ ವಿವರಗಳನ್ನು ಮೇಲೆ ಕ್ಲಿಕ್ ಮಾಡಿ.
• ನಂತರ ಅಲ್ಲಿ ನಿಮಗೆ ಬೇಕಾದ ಮಾಹಿತಿ ದೊರೆಯುತ್ತದೆ.