ಕೃಷಿ ಸಂಜೀವಿನಿ ಯೋಜನೆ ಅಡಿಯಲ್ಲಿ ಸಿಗಲಿದೆ 1ಲಕ್ಷ ರೂ‌.

ಕೃಷಿ ಕಾಯಕದಲ್ಲಿ ತೊಡಗಿರುವಾಗ ಅನಿರೀಕ್ಷಿತವಾಗಿ ಸಂಭವಿಸುವ ಅಪಘಾತಗಳಿಂದ ತೊಂದರೆಗೆ ಸಿಲುಕುವ ರೈತ ಕುಟುಂಬಗಳಿಗೆ ನೆರವಾಗಲು ಕರ್ನಾಟಕ ಸರ್ಕಾರವು ‘ರೈತ ಸಂಜೀವಿನಿ’ ಅಪಘಾತ ವಿಮಾ ಯೋಜನೆಯನ್ನು ಜಾರಿಗೆ ತಂದಿದೆ. ಕೃಷಿ ಚಟುವಟಿಕೆಗಳ ಸಮಯದಲ್ಲಿ ಸಾವು ಅಥವಾ ಅಂಗವಿಕಲತೆ ಸಂಭವಿಸಿದಲ್ಲಿ ರೈತರಿಗೆ ಮತ್ತು ಅವರ ಕುಟುಂಬಕ್ಕೆ ಈ ಯೋಜನೆಯಡಿ ಆರ್ಥಿಕ ಭದ್ರತೆ ನೀಡಲಾಗುತ್ತಿದೆ.

ರೈತ ಸಂಜೀವಿನಿ ಅಪಘಾತ ವಿಮಾ ಯೋಜನೆಯನ್ನು ಸರ್ಕಾರಿ ಆದೇಶದ ಮೇರೆಗೆ ಜಾರಿ ಮಾಡಲಾಗಿದೆ.
* ಯೋಜನೆಯ ಉದ್ದೇಶ: ಕರ್ನಾಟಕ ರಾಜ್ಯದಾದ್ಯಂತ ಸ್ಥಾಪಿತವಾಗಿರುವ ಕೃಷಿ ಉತ್ಪನ್ನ

ಮಾರುಕಟ್ಟೆ ಸಮಿತಿಗಳ ಕ್ಷೇತ್ರಗಳಲ್ಲಿ ವಾಸವಾಗರುವ ರೈತರು ಕೃಷಿ ಜಮೀನಿನಲ್ಲಿ ಕೃಷಿ ಚಟುವಟಿಕೆಗಳಲ್ಲಿ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಪ್ರಾಂಗಣ, ಉಪ ಮಾರುಕಟ್ಟೆ ಪ್ರಾಂಗಣ ಹಾಗೂ ಮಾರುಕಟ್ಟೆ ಉಪ ಪ್ರಾಂಗಣಗಳಲ್ಲಿ ಕೃಷಿ ಉತ್ಪನ್ನ ಮಾರಾಟ ಚಟುವಟಿಕೆಗಳಲ್ಲಿ ತೊಡಗಿದ್ದಾಗ ಅಪಘಾತ ಸಂಭವಿಸಿ ಸಾವು ಅಥವಾ ಅಂಗವಿಕಲತೆ ಉಂಟಾದಲ್ಲಿ ಅಂಥವರ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡುವ ಮೂಲಕ ಸಾಮಾಜಿಕ ಭದ್ರತೆಯನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಯೋಜನೆಯ ವ್ಯಾಪ್ತಿ: ಈ ಕೆಳಗಿನ ಸಂದರ್ಭಗಳಲ್ಲಿ ಸಾವು ಅಥವಾ ಅಂಗವಿಕಲತೆ ಉಂಟಾದಲ್ಲಿ ರಾಜ್ಯದಲ್ಲಿನ 15 ರಿಂದ 60 ವರ್ಷದೊಳಗಿನ ವಯೋಮಿತಿಯಲ್ಲಿರುವ ರೈತರು ಮತ್ತು ಆ ಕುಟುಂಬದ ಸದಸ್ಯರು ಈ ಯೋಜನೆಯ ವ್ಯಾಪ್ತಿಗೆ ಒಳಪಡುತ್ತಾರೆ.

ಆ) ಕೃಷಿ ಜಮೀನಿನಲ್ಲಿ ಉಳುಮೆ ಮಾಡುವಾಗ, ಬಿತ್ತನೆ ಮಾಡುವಾಗ, ಕಳೆ ತೆಗೆಯುವಾಗ, ಬೆಳೆಗಳಿಗೆ ಗೊಬ್ಬರ, ಔಷಧಿ ಹಾಕುವಾಗ, ಕಟಾವು ಮಾಡುವಾಗ, ಬಣವೆ ಹಾಕುವಾಗ ಹಾಗೂ ಕಣದಲ್ಲಿ ಉತ್ಪನ್ನಗಳನ್ನು ಒಕ್ಕಣೆ ಮಾಡುವಾಗ, ಗಾಡಿಗೆ, ಲಾರಿಗೆ ಟ್ರ್ಯಾಕ್ಟರಿತ್ಯಾದಿ ವಾಹನಗಳಿಗೆ ಉತ್ಪನ್ನಗಳನ್ನು ಹೇರುವಾಗ,

ಆ) ಕೃಷಿ ಕಾರ್ಯದಲ್ಲಿ ನಿರತರಾಗಿದ್ದಾಗ ಭೂಸಾರವನ್ನು ಕಾಪಾಡಿಕೊಳ್ಳಲು ಪೂರೈಸುವ ಕೆರೆ ಗೊಬ್ಬರ, ಕೊಟ್ಟಿಗೆ, ಹಸಿರು ಎಲೆ ಗೊಬ್ಬರ, ಮಣ್ಣು-ಮರಳು, ಕಾಡು-ಸೊಪ್ಪುಗಳು ಅಲ್ಲದೆ ಉಳುಮೆಗೆ ಬೇಕಾಗುವ ಸಲಕರಣೆಗಳನ್ನು ಮತ್ತು ಬೀಜ, ರಸಗೊಬ್ಬರ, ಕ್ರಿಮಿನಾಶಕ ಇತ್ಯಾದಿಗಳನ್ನು ಮನೆಯಿಂದ ಹೊಲಕ್ಕೆ, ಹೊಲದಿಂದ ಮನೆಗೆ ಮತ್ತು ಇಂತಹ ಸಾಮಗ್ರಿಗಳನ್ನು ಪಡೆಯುವ ಜಾಗದಿಂದ ಹೊಲಕ್ಕೆ ಸಾಗಿಸುವಾಗ ಮತ್ತು ವಾಪಸ್ಸು ಬರುವಾಗ ಯಾವುದೇ ರೀತಿಯ ಅಪಘಾತಗಳು ಸಂಭವಿಸಿದಲ್ಲಿ ದಾರಿಯಲ್ಲಾಗಲಿ (ಜಲಮಾರ್ಗವು ಸೇರಿದಂತೆ) ಆದಂತಹ ಅಪಘಾತಗಳು,

ಇ) ಮುಖ್ಯ ಮಾರುಕಟ್ಟೆ ಪ್ರಾಂಗಣ, ಉಪ ಮಾರುಕಟ್ಟೆ ಪ್ರಾಂಗಣ ಹಾಗೂ ಮಾರುಕಟ್ಟೆ ಉಪ ಪ್ರಾಂಗಣಗಳಲ್ಲಿ ಕೃಷಿಉತ್ಪನ್ನಗಳ ಮಾರಾಟ ಚಟುವಟಿಕೆಗಳಲ್ಲಿ ತೊಡಗಿದ್ದಾಗ.

ಈ) ಕೃಷಿ ಉತ್ಪನ್ನಗಳನ್ನು ಮಾರಾಟಕ್ಕಾಗಿ ಮಾರುಕಟ್ಟೆಗಳಿಗೆ ಅಥವಾ ಸಂತೆಗಳಿಗೆ ಸಾಗಿಸುವಾಗ ಮತ್ತು ಮಾರುಕಟ್ಟೆಗಳಿಂದ ಅಥವಾ ಸಂತೆಗಳಿಂದ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಿ ಹಿಂತಿರುಗುವಾಗ ಸಂಭವಿಸಿದ ಅಪಘಾತಗಳು.

Spread positive news

Leave a Reply

Your email address will not be published. Required fields are marked *