ನಿಮ್ಮ ಪ್ಯಾನ್ ಕಾರ್ಡ್ ಚಾಲ್ತಿಯಲ್ಲಿದೆಯೋ ಇಲ್ಲವೋ ಆನ್‌ಲೈನ್‌ನಲ್ಲಿ ಚೆಕ್ ಮಾಡುವುದು ಹೇಗೆ?
ಇಂದಿನ ದಿನಗಳಲ್ಲಿ ಪ್ಯಾನ್ ಕಾರ್ಡ್ (PAN Card) ಪ್ರತಿಯೊಬ್ಬರಿಗೂ ಅತ್ಯಂತ ಪ್ರಮುಖವಾದ ಆರ್ಥಿಕ ದಾಖಲೆಯಾಗಿದೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು, ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸುವವರೆಗೆ ಪ್ರತಿಯೊಂದಕ್ಕೂ ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ. ಆದರೆ, ನಿಮ್ಮ ಬಳಿ ಇರುವ ಪ್ಯಾನ್ ಕಾರ್ಡ್ ಪ್ರಸ್ತುತ ಆಕ್ಟಿವ್ (ಚಾಲ್ತಿಯಲ್ಲಿ) ಇದೆಯಾ? ಅಥವಾ ನಿಷ್ಕ್ರಿಯಗೊಂಡಿದೆಯಾ (Inactive) ಎಂಬುದು ನಿಮಗೆ ತಿಳಿದಿದೆಯೇ? ಭಾರತ ಸರ್ಕಾರವು ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ (Aadhaar Card) ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿತ್ತು. ನಿಗದಿತ ಗಡುವಿನೊಳಗೆ ಲಿಂಕ್…

