ರೈತರೇ ಬಂದಿದೆ ಕಿಸಾನ್ ಟ್ರ್ಯಾಕ್ಟರ್ ಯೋಜನೆ, ರೈತರಿಗೆ 50% ಸಬ್ಸಿಡಿ, ಹೌದಾ! ಬನ್ನಿ ಹಾಗಾದರೆ ಈ ಯೋಜನೆಯ ಸಂಪೂರ್ಣ ಮಾಹಿತಿ ಪಡೆಯೋಣ. ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು, ಅರ್ಜಿ ಸಲ್ಲಿಕೆ ಎಲ್ಲಿ? ಎಲ್ಲವನ್ನೂ ತಿಳಿಯೋಣ.
ರೈತರ ಕೃಷಿ ಕಾರ್ಯವನ್ನು ಸುಲಭಗೊಳಿಸಿ ಯಾಂತ್ರೀಕರಣವನ್ನು ಉತ್ತೇಜಿಸುವ ಉದ್ದೇಶದಿಂದ ಕಿಸಾನ್ ಟ್ರ್ಯಾಕ್ಟರ್ ಯೋಜನೆ ಜಾರಿಗೆ ತರಲಾಗಿದೆ.
ಈ ಯೋಜನೆಯಡಿ ಅರ್ಹ ರೈತರಿಗೆ ಹೊಸ ಟ್ರ್ಯಾಕ್ಟರ್ ಖರೀದಿಗೆ ಶೇ.50ರಷ್ಟು ಸಹಾಯಧನ ನೀಡಲಾಗುತ್ತದೆ. ಇದರ ಉದ್ದೇಶ ಕೃಷಿಯಲ್ಲಿ ಮಾನವ ಶ್ರಮದ ಅವಲಂಬನೆ ಕಡಿಮೆ ಮಾಡಿ ಉತ್ಪಾದಕತೆ ಹೆಚ್ಚಿಸುವುದಾಗಿದೆ.
ಈ ಯೋಜನೆಗೆ ಅರ್ಹತೆಗಳು –
- ಅರ್ಜಿದಾರರು ಭಾರತೀಯ ನಾಗರಿಕರಾಗಿರಬೇಕು.
- ವಾರ್ಷಿಕ ಆದಾಯ 12 ಲಕ್ಷಕ್ಕಿಂತ ಕಡಿಮೆ ಇರಬೇಕು
- ಒಂದು ಕುಟುಂಬಕ್ಕೆ ಒಂದೇ ಸಬ್ಸಿಡಿ
- ಹಿಂದೆ ಯಾವುದೇ ಟ್ರ್ಯಾಕ್ಟರ್ ಸಬ್ಸಿಡಿ ಪಡೆದಿರಬಾರದು
- ಮಾನ್ಯ ಭೂ ದಾಖಲೆ ಹೊಂದಿರಬೇಕು
ಅಗತ್ಯ ದಾಖಲೆಗಳು –
- ಆಧಾರ್ ಕಾರ್ಡ
- ಭೂ ದಾಖಲೆ (RTC/ಪಹಣಿ),
- ಬ್ಯಾಂಕ್ ಪಾಸ್ ಬುಕ್,
- ಪಾಸ್ಪೋರ್ಟ್ ಗಾತ್ರದ ಫೋಟೋ
ಅರ್ಜಿಯ ವಿಧಾನ –
*ಆನ್ಲೈನ್: agrimachinery.nic.in ನಲ್ಲಿ ಅರ್ಜಿ ಸಲ್ಲಿಸಬಹುದು
*ಅಫ್ಲೈನ್: ಸಮೀಪದ ಕೃಷಿ ಇಲಾಖೆ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು.
ಕೇಂದ್ರ ಪುರಸ್ಕೃತ ಯೋಜನೆಗಳು:
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ:
ಈ ಯೋಜನೆಯಡಿ, ಅರ್ಹ ರೈತರಿಗೆ ವಾರ್ಷಿಕ 6,000 ರೂಪಾಯಿಗಳನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ 4,000 ರೂಪಾಯಿಗಳನ್ನು ನೀಡುತ್ತದೆ, ಒಟ್ಟು 10,000 ರೂಪಾಯಿಗಳನ್ನು ರೈತರಿಗೆ ಕೃಷಿ ಉತ್ತೇಜನಕ್ಕಾಗಿ ನೀಡಲಾಗುತ್ತಿದೆ.
ಕೃಷಿ ಭಾಗ್ಯ ಯೋಜನೆ:
ಈ ಯೋಜನೆಯು ರೈತರಿಗೆ ನೀರಾವರಿ ಸೌಲಭ್ಯಗಳನ್ನು ಒದಗಿಸಲು ಸಹಾಯ ಮಾಡುತ್ತದೆ. ನೀರಾವರಿ ಮೂಲಗಳಾದ ಕೊಳವೆ ಬಾವಿಗಳು, ತೆರೆದ ಬಾವಿಗಳು, ಮತ್ತು ಇತರ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ:
ಈ ಯೋಜನೆಯು ನೀರಾವರಿ ದಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಮತ್ತು ಹನಿ ನೀರಾವರಿ, ತುಂತುರು ನೀರಾವರಿ ಮುಂತಾದ ಆಧುನಿಕ ನೀರಾವರಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ:
ಈ ಯೋಜನೆಯಡಿ, ಕೃಷಿ ಮತ್ತು ಸಂಬಂಧಿತ ವಲಯಗಳ ಸಮಗ್ರ ಅಭಿವೃದ್ಧಿಗೆ ಹಣಕಾಸಿನ ನೆರವು ನೀಡಲಾಗುತ್ತದೆ.
ಮಣ್ಣು ಆರೋಗ್ಯ ಅಭಿಯಾನ:
ಈ ಅಭಿಯಾನದ ಅಡಿಯಲ್ಲಿ, ಮಣ್ಣಿನ ಆರೋಗ್ಯವನ್ನು ಸುಧಾರಿಸಲು ಮತ್ತು ಫಲವತ್ತತೆಯನ್ನು ಕಾಪಾಡಿಕೊಳ್ಳಲು ರೈತರಿಗೆ ಮಾಹಿತಿ ಮತ್ತು ತಾಂತ್ರಿಕ ಬೆಂಬಲವನ್ನು ಒದಗಿಸಲಾಗುತ್ತದೆ.

