ಸ್ವಾವಲಂಬಿ ಸಾರಥಿ ಯೋಜನೆ ಅರ್ಜಿ ಹಾಕಿ 4 ಲಕ್ಷ ಪಡೆಯಿರಿ.

ಸ್ವಾವಲಂಬಿ ಸಾರಥಿ ಯೋಜನೆ (Swavalambi Sarathi Scheme) ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯಾಗಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳ ನಿರುದ್ಯೋಗಿ ಯುವಕರಿಗೆ ಸ್ವಂತ ಉದ್ಯೋಗಾವಕಾಶ ಕಲ್ಪಿಸಲು ವಾಹನ ಖರೀದಿಗೆ ಆರ್ಥಿಕ ನೆರವು ನೀಡುತ್ತದೆ. ಈ ಯೋಜನೆಯಡಿ, ಸರಕು ಸಾಗಣೆ ಅಥವಾ ಟ್ಯಾಕ್ಸಿ ವಾಹನಗಳ ಖರೀದಿಗೆ ಗರಿಷ್ಠ 4 ಲಕ್ಷ ರೂ.ಗಳವರೆಗೆ ಸಬ್ಸಿಡಿ ( ಸಹಾಯಧನ) ನೀಡಲಾಗುತ್ತದೆ.

ಯೋಜನೆಯ ಮುಖ್ಯ ವಿವರಗಳು:

ಈ ಯೋಜನೆಯ ಗುರಿ:
ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗದಾತರಾಗಲು ಪ್ರೋತ್ಸಾಹಿಸುವುದು.
ಈ ಯೋಜನೆಯಲ್ಲಿ ಸಹಾಯಧನ:
ವಾಹನದ ವೆಚ್ಚದ ಶೇ. 75ರಷ್ಟು ಅಥವಾ ಗರಿಷ್ಠ ರೂ. 4 ಲಕ್ಷ (SC/ST ಅಭ್ಯರ್ಥಿಗಳಿಗೆ).
ಈ ಯೋಜನೆಗೆ ಅರ್ಹತೆ:
ಕರ್ನಾಟಕದ ನಿವಾಸಿಯಾಗಿರಬೇಕು, ವಯಸ್ಸು 18-55 ವರ್ಷದೊಳಗಿರಬೇಕು ಮತ್ತು ಕುಟುಂಬದ ವಾರ್ಷಿಕ ಆದಾಯ ಮಿತಿಯೊಳಗೆ ಇರಬೇಕು.
ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗದ ದಾರಿ ತೆರೆದು ಕೊಡುವ ಉದ್ದೇಶದಿಂದ ಕರ್ನಾಟಕ ಸರ್ಕಾರ “ಸ್ವಾವಲಂಬಿ ಸಾರಥಿ ಯೋಜನೆ”ಯನ್ನು ಜಾರಿಗೆ ತಂದಿದೆ. ವಾಹನ ಚಾಲನೆ ಮೂಲಕ ಜೀವನೋಪಾಯ ನಡೆಸಲು ಬಯಸುವವರಿಗೆ ಇದು ಒಂದು ದೊಡ್ಡ ಅವಕಾಶವಾಗಿದೆ. ಬ್ಯಾಂಕ್ ಸಾಲದ ಭಾರವನ್ನು ಕಡಿಮೆ ಮಾಡಲು ಸರ್ಕಾರದಿಂದ ಸಬ್ಸಿಡಿ ನೀಡಲಾಗುತ್ತಿದ್ದು, ಟ್ಯಾಕ್ಸಿ, ಗೂಡ್ಸ್ ವಾಹನ, ಲಘು ವಾಣಿಜ್ಯ ವಾಹನಗಳ ಖರೀದಿಗೆ ಆರ್ಥಿಕ ನೆರವು ಲಭ್ಯವಾಗುತ್ತದೆ.

ಯೋಜನೆಯ ಮುಖ್ಯ ವೈಶಿಷ್ಟ್ಯಗಳು

  • ಸ್ವಾವಲಂಬಿ ಸಾರಥಿ ಯೋಜನೆ ರಾಜ್ಯದ ವಿವಿಧ ಅಭಿವೃದ್ಧಿ ನಿಗಮಗಳ ಮೂಲಕ ಜಾರಿಯಾಗುತ್ತದೆ. ಈ ಯೋಜನೆಯಡಿ:
  • ಈ ಯೋಜನೆಯ ವಿಶಿಷ್ಟತೆ –
  • ವಾಹನದ ಒಟ್ಟು ಬೆಲೆಯ 50% ಅಥವಾ ಗರಿಷ್ಠ ₹3 ಲಕ್ಷ (ಯಾವುದು ಕಡಿಮೆಯೋ ಅಷ್ಟು) ಸಬ್ಸಿಡಿ
  • ಉಳಿದ ಮೊತ್ತವನ್ನು ಬ್ಯಾಂಕ್ ವಾಹನ ಸಾಲ ರೂಪದಲ್ಲಿ ಪಡೆಯಬಹುದು.
  • ಸಬ್ಸಿಡಿ ನೇರವಾಗಿ ಬ್ಯಾಂಕ್ ಸಾಲ ಖಾತೆಗೆ ಜಮಾ ಮಾಡಲಾಗುತ್ತದೆ.
  • ವಾಹನವನ್ನು ವಾಣಿಜ್ಯ ಉದ್ದೇಶಕ್ಕಾಗಿ (Yellow Board) ನೋಂದಾಯಿಸಬೇಕು.

ಸ್ವಾವಲಂಬಿ ಸಾರಥಿ ಯೋಜನೆಯ ಸಬ್ಸಿಡಿ ವಿವರ –

ಪರಿಶಿಷ್ಟ ಜಾತಿ/ ಪಂಗಡದ ಅಭ್ಯರ್ಥಿಗಳಿಗೆ 4,00,000 ರೂ.ಗಳು ಅಥವಾ ವಾಹನದ ಬೆಲೆಯ 75% ರಷ್ಟು ನೀಡಲಾಗುತ್ತದೆ. ಅಲ್ಪಸಂಖ್ಯಾತರಿಗೆ 3,00,000 ರೂ. ವರೆಗೆ ಅಥವಾ ವಾಹನದ ಬೆಲೆಯ ಶೇ. 50% ರಷ್ಟನ್ನು ನೀಡಲಾಗುತ್ತದೆ. ಇದರೊಂದಿಗೆ ಒಬಿಸಿ ಅಭ್ಯರ್ಥಿಗಳಿಗೆ 3,00,000 ರೂ.ಗಳ ಸಬ್ಸಿಡಿ ನೀಡಲಾಗುತ್ತದೆ. ಇದರೊಂದಿಗೆ ಪ್ಯಾಸೆಂಜರ್ ಆಟೋರಿಕ್ಷಾ ಮೇಲಿನ ಸಬ್ಸಿಡಿ 75,000 ರೂ.ಗಳಾಗಿದೆ.
Spread positive news

Leave a Reply

Your email address will not be published. Required fields are marked *