ದನ, ಕರು, ಕುರಿ, ಕೋಳಿಗಳಿಗೆ ಬರುವ ರೋಗಿಗಳು ಮತ್ತು ಹತೋಟಿ ಕ್ರಮಗಳು.
ಕಾಲು ಬಾಯಿ ಜ್ವರ (ಕಾಲು ಬಾಯಿ ರೋಗ) ಈ ರೋಗವು ಕಾಲು ಬಾಯಿ ಬೇನೆ ಎಂಬ ಅತಿ ಸೂಕ್ಷಾಣುವಿನಿಂದ ಆಕಳು, ಎಮ್ಮೆ, ಹಂದಿ ಕುರಿ, ಮತ್ತು ಆಡಿನಲ್ಲಿ ಬರುತ್ತದೆ. ವರ್ಷದಲ್ಲಿ ಯಾವಾಗ ಬೇಕಾದರೂ ಈ ರೋಗ ಬರಬಹುದು. ಆದರೆ ಸಾಮಾನ್ಯವಾಗಿ ಜನವರಿಯಿಂದ ಮಾರ್ಚ್‌ನಲ್ಲಿ ಬರುತ್ತದೆ. ಅತಿ ಸೂಕ್ಷ್ಮಾಣುವಿರುವ ನೀರು ಮತ್ತು ಆಹಾರವನ್ನು ಸೇವಿಸುವುದರಿಂದ ಮತ್ತು ಉಸಿರಾಟದ ಮೂಲಕ ಬರುತ್ತದೆ. ಒಮ್ಮೆ ಬಂದರೆ ಶೇ. ೧೦೦ ರಷ್ಟು ದನಗಳಿಗೆ ಕಾಳ್ಳಿಚ್ಚಿನಂತೆ ಹರಡುತ್ತದೆ. ಮಿಶ್ರತಳಿ ಆಕಳುಗಳಿಗೆ ಈ ರೋಗದಿಂದ ಹೆಚ್ಚು…