ಹಿಂದೆಲ್ಲಾ ನಿಮ್ಮ ಜಮೀನಿನ ಮೇಲೆ ಎಷ್ಟು ಸಾಲವಿದೆ ಎಂದು ತಿಳಿಯಲು ಬ್ಯಾಂಕ್‌ಗಳಿಗೂ ಅಥವಾ ಕಂದಾಯ ಕಚೇರಿಗಳಿಗೂ ಅಲೆಯಬೇಕಿತ್ತು. ಆದರೆ ಈಗ ನಿಮ್ಮ ಕೈಯಲ್ಲಿರುವ ಮೊಬೈಲ್ ಮತ್ತು ಇಂಟರ್ನೆಟ್ ಸೌಲಭ್ಯ ಇದ್ದರೆ ಸಾಕು, ಕೇವಲ 2 ನಿಮಿಷದಲ್ಲಿ ನಿಮ್ಮ ಜಮೀನಿನ ವಿವರವನ್ನು ನೀವೇ ನೋಡಬಹುದು.
ನಿಮ್ಮ ಆಸ್ತಿಯ ದಾಖಲೆಗಳು ‘ಕ್ಲೀನ್’ ಆಗಿದ್ದಾಗ ಮಾತ್ರ ನೆಮ್ಮದಿಯಿಂದ ಇರಲು ಸಾಧ್ಯ. ಆದರೆ ತಾಂತ್ರಿಕ ದೋಷ ಅಥವಾ ಮಾಹಿತಿ ಕೊರತೆಯಿಂದಾಗಿ ಪಹಣಿ (RTC) ಪತ್ರದಲ್ಲಿ ಸಾಲದ ವಿವರಗಳು ತಪ್ಪಾಗಿ ನಮೂದಾಗಿರುವ ಸಾಧ್ಯತೆಗಳಿರುತ್ತವೆ. ಇಂತಹ ಗೊಂದಲಗಳ್ಳು , ಚಂಚಲತೆ ಬಗೆಹರಿಸಿಕೊಳ್ಳಲು ಈಗ ನೀವು ಸರ್ಕಾರಿ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ ಡಿಜಿಟಲ್ ಕ್ರಾಂತಿಯ ಈ ಕಾಲದಲ್ಲಿ, ನಿಮ್ಮ ಜಮೀನಿನ ಮೇಲೆ ಯಾವ ಬ್ಯಾಂಕಿನಿಂದ ಎಷ್ಟು ಬೆಳೆ ಸಾಲ (Crop Loan) ಪಡೆಯಲಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ,ನಿಮ್ಮ ಕೈಯಲ್ಲಿರುವ ಮೊಬೈಲ್ ಮೂಲಕವೇ ಕೇವಲ 2 ನಿಮಿಷದಲ್ಲಿ ಪರಿಶೀಲಿಸಬಹುದು.
ಏಕೆ ಈ ಪರಿಶೀಲಿಸುವುದು ಮುಖ್ಯ?
ನೀವು ಬ್ಯಾಂಕ್‌ಗೆ ಸಾಲ ಮರುಪಾವತಿಸಿದ ನಂತರವೂ ಪಹಣಿಯಲ್ಲಿ ‘ಋಣಭಾರ’ (Encumbrance) ತೋರಿಸುತ್ತಿದ್ದರೆ ಅದನ್ನು ತಕ್ಷಣ ಸರಿಪಡಿಸಿಕೊಳ್ಳಬಹುದು. ಕೆಲವು ಪ್ರಕರಣಗಳಲ್ಲಿ ರೈತರಿಗೆ ತಿಳಿಯದೆಯೇ ಆದ ಅವರ ದಾಖಲೆಗಳನು ಬಳಸಿ ಬೇರೆಯವರು ಸಾಲ ಪಡೆಡಿರುತಾರೆ ,
ಉದಾಹರಣೆಗಳಿವೆ. ಇದನ್ನು ಪತ್ತೆ ಹಚ್ಚಲು ಇದು ಸುಲಭ ದಾರಿ. ಕರ್ನಾಟಕ ಸರ್ಕಾರದ ಭೂಮಿ (Bhoomi) ಪೋರ್ಟಲ್ ಮೂಲಕ ನಿಮ್ಮ ಜಮೀನಿನ ಹಕ್ಕು ಮತ್ತು ಹೊಣೆಗಾರಿಕೆಗಳ ಬಗ್ಗೆ ನಿಖರ ಮಾಹಿತಿ ಪಡೆಯಬಹುದು.
ಮೊಬೈಲ್‌ನಲ್ಲಿ ಸಾಲದ ವಿವರ ಚೆಕ್ ಮಾಡುವುದು ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ…
★ ನಿಮ್ಮ ಜಮೀನಿನ ಹಕ್ಕು ಮತ್ತು ಹೊಣೆಗಾರಿಕೆಗಳನ್ನು ತಿಳಿಯಲು ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸಿ:
★ಮೊದಲು ನಿಮ್ಮ ಮೊಬೈಲ್ ಬ್ರೌಸರ್‌ನಲ್ಲಿ ಕರ್ನಾಟಕ ಸರ್ಕಾರದ ಅಧಿಕೃತ Bhoomi Online ಪೋರ್ಟಲ್ ಅಪ್ಲಿಕೇಶನ್ ಗೇ ಭೇಟಿ ನೀಡಿ.
ಮುಖಪುಟದಲ್ಲಿ ನಿಮ್ಮ ಜಿಲ್ಲೆ (District), ತಾಲೂಕು (Taluk), ಹೋಬಳಿ (Hobli) ಮತ್ತು ಗ್ರಾಮ (Village) ಅನ್ನು ಸರಿಯಾಗಿ ಆಯ್ಕೆ ಮಾಡಿಕೊಳ್ಳಿ.
ನಿಮ್ಮ ಜಮೀನಿನ ಸರ್ವೆ ನಂಬರ್ (Survey Number) ಟೈಪ್ ಮಾಡಿ ‘Go’ ಬಟನ್ ಒತ್ತಿ. ನಂತರ ಕಾಣಿಸುವ ಪಟ್ಟಿಯಲ್ಲಿ Surnoc ಮತ್ತು ಹಿಸ್ಸಾ ನಂಬರ್ (Hissa Number) ಆಯ್ಕೆ ಮಾಡಿ. ಈಗ ‘Fetch Details’ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ಹೆಸರು ಕಾಣಿಸುತ್ತದೆ, ಅದನ್ನು ಆಯ್ಕೆ ಮಾಡಿ. ಕೊನೆಯದಾಗಿ ‘View RTC’ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಪಹಣಿ ಪರದೆಯ ಮೇಲೆ ಕಾಣಿಸುತ್ತದೆ.
ಪಹಣಿಯಲ್ಲಿನ ಕಾಲಂ 9 ಮತ್ತು 11 (Column 9 & 11) ಅನ್ನು ಗಮನಿಸಿ. ಇಲ್ಲಿ ನಿಮ್ಮ ಸಾಲದ ಮೊತ್ತ ಮತ್ತು ಬ್ಯಾಂಕಿನ ಹೆಸರು ನಮೂದಾಗಿರುತ್ತದೆ.
ಸಾಲ ತೀರಿಸಿದರೂ ಪಹಣಿಯಲ್ಲಿ ಸಾಲ ತೋರಿಸುತ್ತಿದ್ದರೆ ಏನು ಮಾಡಬೇಕು?
ರೈತ ಮಿತ್ರರೇ ನೀವು ಬ್ಯಾಂಕ್‌ಗೆ ಪೂರ್ತಿ ಸಾಲ ಕಟ್ಟಿದ್ದರೂ ದಾಖಲೆಗಳಲ್ಲಿ ಇನ್ನೂ ಸಾಲ ಕಾಣಿಸುತ್ತಿದ್ದರೆ, ಅದನ್ನು ಸರಿಪಡಿಸಲು ಈ ಕ್ರಮಗಳನ್ನು ಅನುಸರಿಸಿ:
ನೀವು ಸಾಲ ಪಡೆದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಮ್ಯಾನೇಜರ್ ಅವರನ್ನು ಭೇಟಿ ಮಾಡಿ. ನೀವು ಸಾಲ ತೀರಿಸಿದ ರಶೀದಿ ಅಥವಾ ‘ಸಾಲ ಮುಕ್ತ ಪತ್ರ’ (No Due Certificate) ಅನ್ನು ತೋರಿಸಿ. ಪಹಣಿಯಲ್ಲಿನ ಸಾಲದ ಎಂಟ್ರಿ ತೆಗೆದುಹಾಕಲು ‘Bank Release Order’ ನೀಡುವಂತೆ ಬ್ಯಾಂಕಿಗೆ ಮನವಿ ಮಾಡಿ. ಬ್ಯಾಂಕಿನವರು ಆನ್‌ಲೈನ್ ಮೂಲಕ ಕಂದಾಯ ಇಲಾಖೆಗೆ ಈ ಮಾಹಿತಿ ರವಾನಿಸಿದ ನಂತರ, ನಿಮ್ಮ ಪಹಣಿಯಲ್ಲಿನ ಸಾಲದ ವಿವರ ತಾನಾಗಿಯೇ ಅಳಿಸಿ ಹೋಗುತ್ತದೆ.

