ಆ ಸಂಘಟಿತ ಕಾರ್ಮಿಕರಿಗೆ ಸಹಾಯವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರದಿಂದ ಜಾರಿಗೆ ತಂದಿರುವ ಮಹತ್ವದ ಯೋಜನೆಯೇ “ ಅಟಲ್ ಪಿಂಚಣಿ ಯೋಜನೆ ”[ Atal Pension Yojana] , ಈ ಯೋಜನೆಯು 2030-31 ರಾ ವರೆಗೂ ವಿಸ್ತೀರಗೊಂಡಿದೆ. ಕೇಂದ್ರ ಸರ್ಕಾರವು ಈ ಯೋಜನೆಯನ್ನು ಐದು ವರ್ಷಗಳ ವರೆಗೂ ವಿಸ್ತರಿಸಲು ಅನುಮತಿ ನೀಡಿದೆ. ಈ ಯೋಜನೆಯ ಮೂಲಕ , ಕಡಿಮೆ ಆದಾಯದ ಶ್ರಮಿಕ ಕಾರ್ಮಿಕರಿಗೆ , 1000 ಇಂದ 5000 ದ ವರೆಗೂ ಮಾಸಿಕ ಪಿಂಚಣಿ ಸೌಲಭ್ಯ ನೀಡಲಾಗುತ್ತದೆ. ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆ ಒದಗಿಸುವುದು , ಆರ್ಥಿಕವಾಗಿ ಉತ್ತೇಜಿಸುವುದು ಹೊಸ ಹೊಸ ಶ್ರಮಿತ ಕಾರ್ಮಿಕರನ್ನು ಸೇರ್ಪಡೆಮಾಡುವುದು ಹಾಗೂ ಭಾರತವನ್ನು ಪಿಂಚಣಿ – ಆಧಾರಿತ ಸಮಾಜವಾಗಿ ರೂಪಿಸುವುದು ಈ ಯೋಜನೆಯ ಮುಖ್ಯ ಗುರಿಗಳಾಗಿವೆ . ಈ ಯೋಜನೆಯನ್ನು ಕೇಂದ್ರ ಸರ್ಕಾರದ ಪಿಂಚಣಿ ನಿಯಂತ್ರಣ ಮತ್ತು ಅಭಿವೃದಿ [ Pension Fund Regulatory and Development Authority ] ನಿರ್ವಹಿಸುತ್ತದೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ [ National Pension System ] ಗಿಂತ ವಿಬಿನವಾಗಿ , APY [ Atal Pension Yojana ] ಅಸಂಘಟಿತ ವಲಯಕ್ಕೆ ಮಾತ್ರ ಸೀಮಿತವಾಗಿ.
Atal Pension Yojana, ಇದೊಂದು ಸರ್ಕಾರದಿಂದ ಬೆಂಬಲಿಸಿರುವ ಸಾಮಾಜಿಕ ಭದ್ರತ ಯೋಜನೆಯಾಗಿದು , ಫಲಾನುಭವಿಗಳು 50 ವರ್ಷರ್ವದ ನಂತರ ಮಾಸಿಕವಾಗಿ 1000 ರೂ ಇಂದ ಹಿಡಿದು 5000 ರೂ ಗಳ ವರೆಗೂ ನಿಶ್ಚಿತ ಕನಿಷ್ಠ ಪಿಂಚಣಿ ನೀಡಲಾಗುತ್ತದೆ. ಈ ಪಿಂಚಣಿ ಯಾ ಫಲಾನುಭವಿಗಳು ತಮ್ಮ ಜೀವಿತಾವಧಿಯ ವರೆಗೂ ಪಡೆಯಬಹುದು , ಪಿಂಚಣಿಯ ಮೊತ್ತವು Atal Pension Yojana ಅಡಿಯಲ್ಲಿ ದಾಖಲಾದ ಸದಸ್ಯರ ಕೊಡುಗೆಯನ್ನು ಅವಲಂಬಿಸಿರುತ್ತದೆ. ಈ ಯೋಜನೆಯ , ಪಳನುಭಾವಿಗಳು ಮತ್ತು ಅವರ ಧರ್ಮಪತ್ನಿ ಕೂಡ ಪಿಂಚಣಿ ಸವಲತ್ತುಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಪಳನುಭಾವಿಯ ನಿಧನದ ನಂತರ ಧರ್ಮಪತ್ನಿ ಸಹ ಜೀವಿತಾವಧಿಯವರೆಗೆ ಅದೇ ಪಿಂಚಣಿ ಮೊತ್ತವು ದೊರೆಯುತ್ತದೆ . ಒಂದು ವೇಳೆ ಪಳನುಭಾವಿಗಳು ಮತ್ತು ಧರ್ಮಪತ್ನಿ ನಿಧನರಾದರೆ, 60 ವರ್ಷ ವಯಸ್ಸಿನವರೆಗೆ ಸಂಗ್ರಹವಾದ ಪಿಂಚಣಿ ನಿಧಿಯನ್ನು ನಾಮಿನಿ ಕೊಟ್ಟಿರುವ ಅಭ್ಯರ್ಥಿಗೆ ನೀಡಲಾಗುತ್ತಿದೆ. 18 ರಿಂದ 40 ವರ್ಷ ವಯಸ್ಸಿನ ಎಲ್ಲಾ ಭಾರತೀಯ ನಾಗರಿಕರು Atal Pension Yojana ಯೋಜನೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿ ಇರುವ ಸಕ್ರಿಯ ಮೊಬೈಲ್ ಸಂಖ್ಯೆ ಹಾಗೂ ಆಧಾರ್ಗೆ ಲಿಂಕ್ ಮಾಡಲಾಗಿರುವ ಬ್ಯಾಂಕ್ ಖಾತೆಯಾ ಸಂಖ್ಯೆ ಹಾಗೂ ಅದರ ನಕಲು ಪತ್ರವನ್ನು ಹೊಂದಿರಬೇಕು. ಈ ಯೋಜನೆಗೆ ಕನಿಷ್ಠ 20 ವರ್ಷಗಳ ಕಾಲ ಕೊಡುಗೆ ನೀಡುವುದು.
ಆದಾಗ್ಯೂ, ಆದಾಯ ತೆರಿಗೆ ಪಾವತಿಸುವವರು Atal Pension Yojana ಅರ್ಜಿ ಸಲ್ಲಿಸಲು ಆಗುವುದಿಲ್ಲ. ಈ ನಿಯಮವು 2022ರ ಅಕ್ಟೋಬರ್ 1 ರಿಂದ ಜಾರಿಗೆ ತರಲಾಯಿತು. ಹಿಂದೆ ಸ್ವಾವಲಂಬನ್ ಯೋಜನೆಯ ಫಲಾನುಭವಿಗಳಾಗಿದ ಅಭ್ಯರ್ಥಿಗಳು, ಈಗ Atal Pension Yojana ಗೆ ಬದಲಾದರು ಸಹ ಈ ಯೋಜನೆಯಾ ಲಾಭವನ್ನು ಪಡ್ಡೆಯಲು ಅರ್ಹರಾಗಿರುತ್ತಾರೆ.
ಅರ್ಹ ಅಭ್ಯರ್ಥಿಯು, ತಾವು ಉಪಯೋಗಿಸುತ್ತಿರುವ ಬ್ಯಾಂಕ್ ಶಾಖೆಗಳಿಂದ ಅರ್ಜಿ ನಮೂನೆ ಪಡೆದು ಅಥವಾ ಅಧಿಕೃತ ವೆಬ್ಸೈಟ್ಗಳ ಮೂಲಕ ( Pension Fund Regulatory and Development Authority ಅಥವಾ National Pension System ಟ್ರಸ್ಟ್) ಡೌನ್ಲೋಡ್ ಮಾಡುವ ಮೂಲಕ Atal Pension Yojana ಅರ್ಜಿ ಸಲ್ಲಿಸಬಹುದು. ಭರ್ತಿ ಮಾಡಿದ ಅರ್ಜಿಯನ್ನು ಆಧಾರ್ ಕಾರ್ಡ್ನ ಜೆರಾಕ್ಸ ಪಾತ್ರದೊಂದಿಗೆ ಬ್ಯಾಂಕ್ಗೆ ಸಲ್ಲಿಸಬೇಕು. Atal Pension Yojana ನಮೂನೆಯು ವಿವಿಧ ಪ್ರಾದೇಶಿಕ ನಮಗೆ ಸುಲಭವಾಗಿ ಅರ್ಥವಾಗುವ ಭಾಷೆಗಳಲ್ಲಿ ಲಭ್ಯವಿದೆ.
ಅರ್ಜಿ ಸಲ್ಲಿಸಲು ಕೆಲವು ಸರಳ ಹಂತಗಳು ಇಲ್ಲಿವೆ:
- ಯಾವುದೇ ಭಾಗವಹಿಸುವ ಬ್ಯಾಂಕ್ ಶಾಖೆ ಅಥವಾ ಅಂಚೆ ಕಚೇರಿಯಿಂದ Atal Pension Yojana ನೋಂದಣಿ ಫಾರ್ಮ್ ಸಂಗ್ರಹಿಸಿ. ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ, ಬ್ಯಾಂಕ್/ಅಂಚೆ ಕಚೇರಿ ಉಳಿತಾಯ ಖಾತೆ ವಿವರಗಳನ್ನು ನಮೂದಿಸಿ.
- ಉಳಿತಾಯ ಖಾತೆ ಇರುವ ಬ್ಯಾಂಕ್ ಅಥವಾ ಅಂಚೆ ಕಚೇರಿಗೇ ನೇರವಾಗಿ ಫಾರ್ಮ್ ಸಲ್ಲಿಸಿ.
- ಫಾರ್ಮ್ ಸಲ್ಲಿಸುವ ಮೊದಲು ನಿಮ್ಮ ಪೂರ್ಣ ಹೆಸರು, ಜನ್ಮ ದಿನಾಂಕ, ವಯಸ್ಸು, ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ ಮತ್ತು ಆಧಾರ್ ಸಂಖ್ಯೆ ಸೇರಿದಂತೆ ವೈಯಕ್ತಿಕ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿರುವುದನ್ನು ಖಚಿತಪಡಿಸಿಕೊಳ್ಳಿ.
- ವಿವಾಹಿತ ವ್ಯಕ್ತಿಗಳು ತಮ್ಮ ಧರ್ಮಪತ್ನಿ ಹೆಸರು ಮತ್ತು ವಯಸ್ಸನ್ನು ಸಹ ನಮೂದಿಸಬೇಕು. ಎಲ್ಲಾ ಅರ್ಜಿದಾರರು ನಾಮಿನಿಯನ್ನು ನೇಮಿಸಿ ಅವರೊಂದಿಗಿರುವಾ ಸಂಬಂಧವನ್ನು ನಮೂದಿಸಬೇಕು. ನಂತರ, ನೀವು ಬಯಸುವ ಮಾಸಿಕ ಪಿಂಚಣಿ ಮೊತ್ತವನ್ನು ನಿರ್ದಿಷ್ಟಪಡಿಸಿ.
- ಫಾರ್ಮ್ನ ಕೊನೆಯಲ್ಲಿ ದಿನಾಂಕ, ಸ್ಥಳ ನಮೂದಿಸಿ. Atal Pension Yojana ನಿಯಮ ಮತ್ತು ಷರತ್ತುಗಳನ್ನು ಅರ್ಥಮಾಡಿಕೊಂಡಿದ್ದೀರಿ ಎಂದು ಪ್ರಮಾಣೀಕರಿಸಲು ಸಹಿ ಅಥವಾ ಹೆಬ್ಬೆರಳಿನ ಗುರುತು ನೀಡಿ.
- ಅರ್ಹ ಫಲಾನುಭವಿಗಳು National Pension System ಟ್ರಸ್ಟ್ನ ವೆಬ್ಸೈಟ್ https://npstrust.org.in/open-apy-account ಮೂಲಕ ಆನ್ಲೈನ್ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
ಆನ್ಲೈನ್ ಕ್ಯಾಲ್ಕುಲೇಟರ್, ಮಾಸಿಕ ಕೊಡುಗೆಗಳನ್ನು ಆಧರಿಸಿ ಅಂದಾಜು ಪಿಂಚಣಿ ಮೊತ್ತವನ್ನು ಪಡೆಯಲು ಸಹಾಯ ಮಾಡುತ್ತದೆ. ನೋಂದಣಿ ಸಮಯದಲ್ಲಿ ಅಭ್ಯರ್ಥಿಯೂ ವಯಸ್ಸಿಗೆ ಅನುಗುಣವಾಗಿ ಮಾಸಿಕ ಕೊಡುಗೆ ಮೊತ್ತವು ಬದಲಾಗುತ್ತದೆ. Atal Pension Yojana ಅಡಿಯಲ್ಲಿ ಮಾಸಿಕ ಕೊಡುಗೆಗಳು 18 ವರ್ಷ ವಯಸ್ಸಿನಲ್ಲಿ ಸೇರುವವರಿಗೆ ₹42 ರಷ್ಟು ಕಡಿಮೆ ಮೊತ್ತದಿಂದ ಪ್ರಾರಂಭವಾಗುತ್ತವೆ.
ಉದಾಹರಣೆಗೆ, ಒಬ್ಬ ವ್ಯಕ್ತಿಯು 18 ವರ್ಷ ವಯಸ್ಸಿನಲ್ಲಿ ₹5000 ಮಾಸಿಕ ಪಿಂಚಣಿಗಾಗಿ ದಾಖಲಾದರೆ, ಮಾಸಿಕ ₹210 ಕೊಡುಗೆ ಅಗತ್ಯವಿರುತ್ತದೆ. 60 ವರ್ಷ ವಯಸ್ಸಿನವರೆಗೆ, ಫಲಾನುಭವಿಗಳು ೪೨ ವರ್ಷಗಳ ಕಾಲ ಈ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಒಟ್ಟು ಹೂಡಿಕೆಯು ₹1,05,840 ಆಗಿದ್ದು, ಅವರ ನಿಧಿ ₹7,54,097 ಕ್ಕೆ ಬೆಳೆಯುತ್ತದೆ.

