ಕೃಷಿಹೊಂಡ ಯೋಜನೆ ಪಡೆಯಲು ಬೇಕಾಗುವ ದಾಖಲೆಗಳ ಪಟ್ಟಿ.

ಕೃಷಿಹೊಂಡ : ಪ್ರೀಯ ರೈತರೇ ಇವತ್ತು ನಾವು ಒಂದು ಸರ್ಕಾರದ ನೀರಾವರಿ ಯೋಜನೆ ಬಗ್ಗೆ ಮಾಹಿತಿ ನೀಡುತ್ತೇನೆ. ರೈತರು ಸಹ ಇದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಸದುಪಯೋಗ ಪಡೆದುಕೊಳ್ಳಬೇಕು. ಹಾಗಾದರೆ ಬನ್ನಿ ರೈತರೇ ಕೃಷಿ ಭಾಗ್ಯ ಯೋಜನೆಯಡಿ ಒಟ್ಟಾರೆ 6 ಕಡ್ಡಾಯ ಘಟಕಗಳನ್ನು ಒಳಗೊಂಡಿದ್ದು, ಎಲ್ಲಾ ಘಟಕಗಳನ್ನು ರೈತ ಫಲಾನುಭವಿಗಳು ಯೋಜನೆಯ ಸಮಗ್ರ ಸದುಪಯೋಗ ಪಡೆಯಲು ತಪ್ಪದೇ ಅಳವಡಿಕೆ ಮಾಡಬೇಕಾಗುತ್ತದೆ.

ಕೃಷಿ ಭಾಗ್ಯ ಯೋಜನೆಗಳು: ಕ್ಷೇತ್ರ ಬದು ನಿರ್ಮಾಣ, ನೀರು ಸಂಗ್ರಹಣಾ ರಚನೆ ನಿರ್ಮಾಣ (ಕೃಷಿಹೊಂಡ), ನೀರು ಇಂಗದಂತೆ ತಡೆಯಲು ಪಾಲಿಥೀನ್ ಹೊದಿಕೆ, ಕೃಷಿ ಹೊಂಡದ ಸುತ್ತಲೂ ತಂತಿಬೇಲಿ, ಹೊಂಡದಿಂದ ನೀರು ಎತ್ತಲು ಡೀಸೆಲ್, ಪೆಟ್ರೋಲ್, ಸೋಲಾರ್ ಪಂಪ್‍ಸೆಟ್, ನೀರನ್ನು ಬೆಳೆಗೆ ಹಾಯಿಸಲು ಸೂಕ್ಷ್ಮ (ತುಂತುರು ಹನಿ) ನೀರಾವರಿ. ಸದರಿ ಯೋಜನೆಯಡಿ ಎಲ್ಲಾ ವರ್ಗದ ರೈತರಿಗೆ ಅನುದಾನ ಲಭ್ಯವಿದ್ದು, ಅರ್ಹ ರೈತ ಫಲಾನುಭವಿಗಳು ಅರ್ಜಿ ಸಲ್ಲಿಸಿದ ಕೂಡಲೇ ಸಹಾಯಧನವನ್ನು ಬಿಡುಗಡೆ ಮಾಡಲಾಗುವುದು. ಆದ್ದರಿಂದ ಯೋಜನೆಯ ಅನುಕೂಲ ಪಡೆದುಕೊಳ್ಳಲು ಇಚ್ಛಿಸುವ ಎಲ್ಲಾ ವರ್ಗದ ಅರ್ಹ ರೈತ ಫಲಾನುಭವಿಗಳು ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ, ಅರ್ಜಿ ಸಲ್ಲಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕೃಷಿ ನಿರ್ದೇಶಕರಾದ ರಾಜಶೇಖರ ಅನಗೌಡರ, ಧಾರವಾಡ (8277931282), ಮಂಜುಳಾ ತೆಂಬದ, ಹುಬ್ಬಳ್ಳಿ (8277931288), ಅಮರ ನಾಯ್ಕರ,931291), ರೇಖಾ. ಆರ್. ಗಡ್ಡದವರ, ಕುಂದಗೋಳ (9071449976), ರವೀಂದ್ರಗೌಡ ಪಾಟೀಲ, ನವಲಗುಂದ (8277931295) ಸಂಪರ್ಕಿಸಬಹುದು ಎಂದು ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಯೋಜನೆಗೆ ಅಗತ್ಯವಿರುವ ದಾಖಲೆಗಳು:

  • ಪಾಸ್ ಪೋರ್ಟ್ ಗಾತ್ರದ ಛಾಯಾಚಿತ್ರ.
  • ಜಾತಿ ಪ್ರಮಾಣ ಪತ್ರ.
  • ಗುರುತಿನ ಚೀಟಿ.
  • ಆದಾಯ ಪ್ರಮಾಣ ಪತ್ರ.
  • ಪಹನಿ ಪತ್ರ.

ಅರ್ಜಿ ಸಲ್ಲಿಸುವ ಹಂತಗಳು:

ಅರ್ಜಿ ಸಲ್ಲಿಕೆ: ರೈತರು ತಮ್ಮ ಹತ್ತಿರದ ಸಂಪರ್ಕ್ ಕೇಂದ್ರ ಅಥವಾ ತಾಲೂಕು ಕಛೇರಿಗೆ ತೆರಳಿ ಅರ್ಜಿ ಸಲ್ಲಿಕೆ ಮಾಡಬೇಕು.
ಕ್ಷೇ ತ್ರ ಪರಿಶೀಲನೆ: ನಿಮ್ಮ ಅರ್ಜಿಯ ಪರಿಶೀಲನೆಯ ನಂತರ ಅಧಿಕಾರಿಗಳು ನಿಮ್ಮ ಹೊಲಕ್ಕೆ ಬೇಟಿ ನೀಡಿ ಸ್ಥ ಳ ಪರಿಶೀಲನೆ ಮಾಡುತ್ತಾರೆ.
ಯೋಜನೆಯ ಅನುಷ್ಟಾನ: ಈ ಆದೇಶದ ಪ್ರಕಾರ , ರೈತರು ತಂತಿ ಬೇಲಿ, ಸೂಕ್ಷ್ಮ ನೀರಾವರಿ ಇತ್ಯಾದಿ ಘಟಕಗಳನ್ನು ಅಳವಡಿಸಲು ಶುರು ಮಾಡಬಹುದು .ಈ
ಪ್ರಗತಿ ಅನ್ನು GPS ಫೋಟೋ ಮೂಲಕ ದಾಖಲಿಸಬಹುದು.

ಕೃಷಿ ಹೊಂಡದ ಉಪಯೋಗಗಳು –

  • ನೀರಿನ ಸಂಗ್ರಹಣೆ: ಮಳೆ ನೀರನ್ನು ಬೇಸಿಗೆ ಕಾಲದಲ್ಲಿ ಅಥವಾ ನೀರಿನ ಅಭಾವದ ಸಂದರ್ಭದಲ್ಲಿ ಬಳಸಲು ಸಂಗ್ರಹಿಸುತ್ತದೆ.
  • ಬೆಳೆಗಳಿಗೆ ನೀರು: ಹನಿ ನೀರಾವರಿ ಅಥವಾ ತುಂತುರು ನೀರಾವರಿ ಮೂಲಕ ಬೆಳೆಗಳಿಗೆ ನೀರುಣಿಸಲು ಅನುಕೂಲ.
  • ಅಂತರ್ಜಲ ವೃದ್ಧಿ: ಹೊಂಡದಲ್ಲಿ ಸಂಗ್ರಹವಾದ ನೀರು ಭೂಮಿಯೊಳಗೆ ಇಂಗಿ ಅಂತರ್ಜಲ ಮಟ್ಟ ಹೆಚ್ಚಿಸುತ್ತದೆ.
  • ಮೀನುಗಾರಿಕೆ: ಹೊಂಡದಲ್ಲಿ ಮೀನು ಸಾಕಣೆ ಮಾಡಿ ಆದಾಯ ಗಳಿಸಬಹುದು.
  • ಬರ ನಿರ್ವಹಣೆ: ಬರಗಾಲದ ಸಮಯದಲ್ಲಿ ರೈತರಿಗೆ ನೆರವಾಗುತ್ತದೆ.
Spread positive news

Leave a Reply

Your email address will not be published. Required fields are marked *